Monday, April 8, 2013

ನಾಚಿಕೆ ಪಡಬೇಕೆ ಇಲ್ಲಾ ಅಸಹ್ಯವೇ ???




ಬಹು ವರ್ಷಗಳ ಹಿಂದೆ ಯಾವುದೋ ಹಿಂದಿ ಸಿನೆಮಾ ನೋಡಿದಾಗ ಗೊತ್ತಾಯಿತು. ಕೊಲೆ ಮಾಡಿದರೆ ೧೪ ವರ್ಷ, ಬಲಾತ್ಕಾರ ಮಾಡಿದರೆ ೭ ವರ್ಷ ಸಜೆ ಎಂದು. I was shocked. ಅಲ್ಲಾರೀ ಎಷ್ಟೇ ಒದ್ದಾಡಿಸಿ ಕ್ರೂರವಾಗಿ ಸಾಯಿಸಿದರೂ ಕೂಡ ಸತ್ತ ಅಂದರೆ ಸತ್ತ ತಾನೆ ಅಲ್ಲಿಗೆ ಕಥೆ ಮುಗಿಯಿತು ಅದಕ್ಕೇ ೧೪ ವರ್ಷ ಶಿಕ್ಷೆ ಕೊಡೋದಾದ್ರೆ, ಬಲಾತ್ಕಾರ ಮಾಡಿ ಒಂದು ಹುಡುಗಿಯ ಜೀವನ ವನ್ನು ಬದುಕಿದರೂ ಸತ್ತ ಹೆಣ ದಂತೆ ಮಾಡಿ ಬಿಡುವ ಪಾಪಿ ಗಳು ಕೊಲೆಗಡುಕರಿಗಿಂತ ಅತ್ತತ್ತ ಅಲ್ಲವೇ ??? ಅಂತವರಿಗೆ ಕೇವಲ ೭ ವರ್ಷ ಸಜೆ ಯ ಕಾನೂನು ಮಾಡಿದಾರೆಂದರೆ ಅವರೆಲ್ಲಾ ಮನುಷ್ಯರೋ ಇಲ್ಲಾ ಮೃಗಗಳೊ ತಿಳಿಯುತ್ತಿಲ್ಲಾ. 

ಅಲ್ಲಾ  ಬಲಾತ್ಕಾರ ದ ನಂತರ ಒಂದು ಹುಡುಗಿ ದೈಹಿಕವಾಗಿ ಮಾನಸಿಕವಾಗಿ ತತ್ತರಿಸಿ ಹೋಗುತ್ತಾಳೆ ಅದರ ಜೊತೆಗೆ ಸಮಾಜ ನೋಡುವ ದೃಷ್ಟಿ ಬದಲಾಗಿ ಹೊರಗೆ ಕಾಲಿಡುವುದೇ ಕಷ್ಟವಾಗಿ ಬದುಕು ನರಕ ವಾಗಿ ನರುಳುವಂತೆ ಆಗುತ್ತೆ. ಆಗ ತಿನ್ನುವ ನೋವಿಗೆ ಸರಿಸಮಾನವೇ ಸತ್ತು ಮಣ್ಣಲ್ಲಿ ಹೋಗುವುದು. ಜೀವಂತ ಹೆಣ ಸತ್ತ ಹೆಣಕ್ಕಿಂತಲೂ ಹೆಚ್ಚು ನೋವು ಕೊಡುವಂತಹುದು. ಹಾಗಿರುವಾಗ ಅದು ಹೇಗೆ ಆ ಕ್ರೂರಿಗಳಿಗೆ ಕೇವಲ ೭ ವರ್ಷದ ಶಿಕ್ಷೆ ಸಾಕು ಅಂತ ನಿರ್ಧರಿಸೋಕೆ ಮನಸಾದ್ರು ಹೇಗೆ ಬಂತೊ. ಛೆ, ನೆನಸಿದರೆ ನಾಚಿಕೆ ಆಗುತ್ತೆ ಅಂತವರ ಬಗ್ಗೆ.

ಜೈಲು ಶಿಕ್ಷೆ ಕೊಡೋದೇ ಅಷ್ಟು ಕಡಿಮೆ, ಅದರಲ್ಲಿ chew gum ಥರ Court ನಲ್ಲಿ Case ನ ಎಳೆದು ಎಳೆದು, Court ನಲ್ಲಿ ಅಸಂಬಧ್ಧ ಪ್ರಶ್ನೆ ಗಳನ್ನು ಕೇಳಿ ಬಲಾತ್ಕಾರದ ಆಘಾತ ದೊಂದಿಗೆ ಈ ನೋವು ಅವಮಾನ ವನ್ನೂ ಎದುರಿಸುವಂತೆ ನರಲಾಡಿಸಿ ನ್ಯಾಯ ದೊರಕಿಸುವ ಹೊತ್ತಿಗೆ ಚಪ್ಪಲಿ ಸವೆದು ಹಣ - ಮರ್ಯಾದೆ ಎರಡನ್ನೂ ಕಳೆದು ಕೊಂಡು ಹಣ್ಣು ಹಣ್ಣು ಮುದುಕರಾಗಿ ಹೋಗಿರುತ್ತಾರೆ; ಆದರೂ ನ್ಯಾಯ ಸಿಗುವುದು ದುಸ್ತರವೆ  ... :( ಅಂತಹದರಲ್ಲಿ ಸಿಗುವ ನ್ಯಾಯಕ್ಕೆ ಇಷ್ಟು ಮಾತ್ರ ಶಿಕ್ಷೆಯೇ?

 ಈಗ  ದೆಹಲಿ ಯಲ್ಲಿ ನಡೆದ Gang-Rape ಪ್ರಕರಣ ನಮ್ಮೆಲ್ಲರಲ್ಲೂ ಅಡಗಿದ್ದ ರೋಷ ವನ್ನು ಹೊರ ತೆಗೆದಿದೆ. ಇನ್ನು ಮುಂದಾದರೂ ನ್ಯಾಯದ ಕಣ್ಣು ತೆರೆಯಲಿ - ನಮ್ಮ ದೇಶದಲ್ಲಿ ಕಠಿಣ ಶಿಕ್ಷೆ ಬರಲಿ, ಜನರಲ್ಲಿ ನೈತಿಕತೆಯ ಮಟ್ಟ ಹೆಚ್ಚಾಗಲಿ ಎಂದು ಆಶಿಸುತ್ತಾ , ಜಗತ್ತಿನ ಸುಧಾರಣೆಗೆ ನನ್ನ ಪಾತ್ರವೂ ಇರುತ್ತದೆಂದು ಆ ಜವಾಬ್ದಾರಿ ಯಲ್ಲಿ ಸಹ ಭಾಗಿ ಆಗಿರುವೆನು ಎನ್ನುವ ಮಾತಿನೊಂದಿಗೆ ಬೀಳ್ಕೊಡುವೆ. 

ಮಾತು ಮೌನವಾದಾಗ


Hi Hello How are you खाना खाके जाना हां :D friends, After a long time my mind made to write this post. Here I have written it in Kannada, my friends who can't read kannada for them I have written the meaning. 

This post is dedicated to all those who are introvert and have suppressed there feelings in there heart.




March 27, 2013:

Stress के नाम में पीते है लोग Whisky, Vodka, Rum...
लेकिन हम तो बैठ के केहते है SO HUM;
मेहेंगा शराब का नशा भी सुभा की आँख खुलते ही उतर जाता है,
लेकिन हमारा Free and Healthy SO HUM  का जो नशा है 
सिर्फ बढ़ने का नाम  है उतर ने का  नहीं । 


Meaning:  In the name of Stress and Status people take drinks which is actually a habit;  but we just sit and do So Hum Kriya. Even after taking most expensive alcohol that kick won't remain when you wake up in the morning, but the kick which So Hum gives it won't take the name to get down. 

So better to go for permanent solution instead of temporary solution which is just waste of money, time and not good for health and relationship.


April 4, 2013:

ಮಾಡಿದಷ್ಟು ಸಾಲದು ,
ಹೇಳಿದಷ್ಟು ಸಾಲದು ,
ಸಂಸಾರದ ಆಸಕ್ತಿ ಯ ಹೇಳ ಹೊರಟರೆ ಆ ಮನ ನಂಬದು ,
ಆಸಕ್ತಿ ನಿರಾಸಕ್ತಿ ಎಲ್ಲರದು ಬೇರೆ ಹಾಗೆಂದು ಅದು ಸನ್ಯಾಸ ವಾಗದು,
ಅದ ಎಷ್ಟು ವಿಧದಲ್ಲಿ ಹೇಳಿದರೂ ಆ ಹೃದಯ ಕೇಳದು,
ಎಷ್ಟು ಬಾರಿ ತೋರಿಸಿದರೂ ಆ ಕಣ್ಣು ನಂಬದು,
ಮುರುಟಿ ಹೋಗುತಿದೆ ಮನ ಆದರೂ ಯಾರಿಗೂ ಕೇಳದು,
ಇಷ್ಟೊಂದು ನೋವು ಇನ್ನಾರಿಗೂ ಸಲ್ಲದು,
ಮಾತಿನಿಂದ ಹರಡಿರುವ ನೋವ ಈ ಹೃದಯ ವೊಂದೆ ಬಲ್ಲದು,
ನೋವಲ್ಲಿ ಸುಟ್ಟರೂ ಆತ್ಮವ ಅದು ಕೊಲ್ಲದು ಕೊಲ್ಲಲೊಲ್ಲದು.  



Meaning:  

Don't get satisfied even after doing many things, don't get convinced even after telling many times, mind don't trust that I have interest in this relationship, likes/dislikes may be different but it doesn't mean that I don't enjoy Life, even after telling in many ways that heart is not listening, even after showing many times those eyes are not ready to believe and struck in his own beliefs.

 My heart is getting crushed but still no one is able to hear, no one should bare this pain, the pain which get spread through words only this Heart can feel, even it is burning by pain but it is not ready to kill my soul and it can't kill my soul.


April 6, 2013:

ಅವರಲ್ಲಿ ಬಾರದಿರುವ ಯೋಚನೆ ಯ ಹಿಂದೆ ಓಡುವೆಯೇಕೆ,
ಹಿಂದೆ ಸರಿಯುವ ಬದಲು ಮುಂದೆ ಹೋಗಿ ಸೋಲುವೆ  ಏಕೆ,
ಮತ್ತೆ ಮತ್ತೆ ಕಾಡುವವು ನಿನಗೆ, ಸುಮ್ಮನೆ ಬಾಡುವೆಯೇಕೆ,
ಇನ್ನರಿಲ್ಲಾ ಜೊತೆಗೆ ಸುಮ್ಮನೆ ಒಬ್ಬಳೇ ಹೋಗುವೆ ಏಕೆ,
ಮತ್ತೆ ಮತ್ತೆ ಮನಸ ನೋಯಿಸುವೆಯೇಕೆ,
ಸುಮ್ಮನೆ ಕಂಬನಿ ಸುರಿಸುವೆ ಏಕೆ,
ದೇವರೇ ಇರುವಾಗ ನಿನಗೆ ಈ ಗುದ್ದಾಟವೆಲ್ಲಾ ಬೇಕೇ ?
ಸುಮ್ಮನೆ ನಿನ್ನೊಳಗೆ ನೀ ಇರಬಾರದೇಕೆ,
ಒಳ ಮನವ ನೋಡಲು ಮತ್ತೊಮ್ಮೆ ಕಣ್ಮುಚ್ಚಿ ಬರಬಾರದೇಕೆ ??? 




Meaning: 

Here Mind is telling you why every time you want to get bond and want to get pain when you know you can't change people mind.Don't trouble yourself by trying hard, when god is with you is there any need to fight ? why you need to bother. Just Be with yourself and by closing your eyes why don't you come to look in to yourself which we call meditation.


PU (2003)+ MCA (2008) :

ಒಮ್ಮೆ ಒಡೆದರೆ ಈ ಮನವು ಹಾಲಿನಂತೆ,
ಕೂಡದು ಅದೆಂದು ಸೀಳಿದ ಕನ್ನಡಿಯಂತೆ;
ಹಾಲು ಕನ್ನಡಿಯಾದರೋ ತರಬಹುದು ಇನ್ನೊಂದು,
ಒಡೆದ ಹೃದಯಗಳು ಆಗಲಾರವು ಹತ್ತಿರ ಮತ್ತೆಂದು. 



Meaning: If milk get spoil then it can't be regained like a broken mirror, we can buy other mirror or milk but once if heart get broken then it cannot come together another time.

  
April 7, 2013:

ಮಾತು ಮೌನವಾಗಲಿ,
ಮನಸು ಶಾಂತವಾಗಲಿ,
ನೆನೆಯದೆಯೇ ಎಲ್ಲವೂ ಮರೆತು ಹೋಗಲಿ,
ಮರೆಯುವ ಮುನ್ನ ನೆನಪು ಕಣ್ಣೀರಾಗದಿರಲಿ,
ಕಣ್ಣೀರ ಕಲೆಯಿಂದ ಹೃದಯ  ಒಡೆಯದಿರಲಿ,
ಒಡೆದ ನೋವಲ್ಲಿ ಮನಸು ಮುರುಟದಿರಲಿ... 


Meaning: 

Telling my mind to pray that Instead of putting words to feelings let me be silent, let my mind get calm, without remembering let forget all those bitter moments and before I forget those memories should not make me cry, with the scars of tears my heart should not break, if my heart get broken then my soul should not die in that pain.

Same Day:

ಹೇಳಿ ಹಠ ಮಾಡುವ ತನಕ ಇರುವುದು ಸಂಬಂದ,
ನಿಂತೊಡನೆ ಕಳಚಿ ಹೋಗುವುದು ಎಲ್ಲಾ ಬಂಧ,
ಎಲ್ಲಾ ಮುಗಿದಾಗ ಬೆರಳು ತೋರಿಸೋದು ನನ್ನಿಂದ-ನಿನ್ನಿಂದ,
ಅರ್ಥ ವಿದೆಯೇ ಹುಡುಕಾಟದಲಿ ತಪ್ಪಾಯ್ತು ಯಾರಿಂದ ...  



Meaning:  

Until we say and be adamant with opposite person till then relationship will remain, the moment all these things stop then all chains which are tied will get released in relationship, when everything will finish we point at others by telling its not my mistake because of him/her  everything happend , do you think is there any meaning in finding whose mistake it is...  




Thursday, January 31, 2013

Horlicks ನೀ ಮಾಡಿದ್ದು ಸರೀನಾ ???




ಚಿಕ್ಕಂದಿನಲ್ಲಿ ಅಪ್ಪನ Clinic ಗೆ ಯಾರಾದ್ರು Medical Representative ಬರಲಪ್ಪಾ ಅಂತ ಬೇಡ್ತಿದ್ದೆ, ಯಾಕೆ ಗೊತ್ತಾ ಬರುವಾಗ ಅವರು ಯಾವಾಗಲು ಏನಾದ್ರು free gift ತರೋರು ಅದರಲ್ಲಿ ಕೆಲವೊಂದು ತುಂಬಾ interesting ಇರ್ತಿತ್ತು.  ಇದಷ್ಟೇ ಅಲ್ಲಾ ಯಾವುದರಲ್ಲಾದ್ರು ಏನಾದ್ರು free ಇದೆ ಅಂತ ಗೊತ್ತಾದ್ರೆ ಸಾಕು ತಗೊಲ್ವಾ ಅಂತಿದ್ದೆ ಆದರೆ ಕೇವಲ ಒಂದನ್ನು ಬಿಟ್ಟು ಅದೇ ನನ್ನ ಬಾಲ್ಯದ  friend (ಕನ್ನಡ ಆದರೆ ಗೆಳತಿ / ಗೆಳೆಯ ಅಂತ gender ಹಚ್ಬೇಕಾಗುತ್ತೆ) Horlicks ವಿಷಯದಲ್ಲಿ.

ಚಿಕ್ಕಂದಿನಿಂದಲೂ ನಾ ಎಷ್ಟು Brand Oriented ಆಗಿದ್ದೆ ಅಂದ್ರೆ ಅಬ್ಬಾ ನಾ use ಮಾಡೋ ಕಂಪನಿ products ಬಿಟ್ಟರೆ ಬೇರೆಯ product ಮುಟ್ಟೋ ದಿರಲಿ ಕೆಲವೊಮ್ಮೆ TV ಲಿ ad ಕೂಡ ನೋಡಕ್ ಕೂಡ ಇಷ್ಟ ಪಡ್ತಿರಲಿಲ್ಲಾ. ಸುಮಾರು ೧೫ ವರ್ಷಗಳ ತನಕ Horlicks ನ ಅಭಿಮಾನಿ ಯಾಗಿ ಬೆಳೆಯುತ್ತಿದ್ದ ನಾನು; ಆಗ ಬರಲು ಆರಂಭಿಸಿದ Boost ನ ಜಾಹಿರಾತು ಕಂಡು ದುಃಖ ಆಗೋದು. ಯಾಕೆ ಗೊತ್ತಾ ಅದರಲ್ಲಿ Shettle free ಅದು ಫ್ರೀ ಇದು ಫ್ರೀ ಅಂತ ಕೊಡೋರು. ಅದನ್ನ ನೋಡಿದಾಗ ಒಮ್ಮೆ ಜೋತು ಮುಖ ಹಾಕಿ ಅಪ್ಪನ ಕಡೆ ತಿರುಗಿ ಕೇಳೋದು "ಅಪ್ಪಾ ಬರೇ Boost ಗೆ  ಯಾಕೆ free ಕೊಡ್ತಾರೆ Horlicks ಗೆ ಯಾಕೆ ಯಾವಾಗ್ಲೂ ಏನು ಕೊಡೋದೇ ಇಲ್ಲಾ (ಕೊಟ್ರೆ cup, biscuit ಕೊಡೋರು)" ಅಂತ.

ಅದಕ್ಕೆ ಅಪ್ಪನ ಉತ್ತರ ಯಾವಾಗ್ಲೂ "Horlicks ನ ಮಾರ್ಕೆಟಿಂಗ್ ಚೆನ್ನಾಗಿದೆಯಲ್ಲಾ ಮಗಾ ಅದಕ್ಕೆ " ಅಂತ. ಆಗ ನಾನು ಯಾಕಾದ್ರು ಈ Horlicks ಗೆ ಅಷ್ಟು ಡಿಮ್ಯಾಂಡ್ ಛೆ " ಅಂತ ಮನಸಲ್ಲಿ ಬಯ್ಕೋತಾ, ಒಂದಿಲ್ಲಾ ಒಂದು ದಿನ free ಕೊಟ್ಟೆ
ಕೊಡ್ತಾರೆ ಅನ್ನೋ ನಂಬಿಕೇಲಿ ಕಾಲ ದೂಡುತ್ತಾ ಬಂದು ಶಾಲೆ ಯಿಂದ ಕಾಲೇಜು ಕೆಲಸ ಸೇರಿ ಮದುವೆ ಆಗಿ ಮೈಸೂರು ಸೇರುವ ಹೊತ್ತಿನಲ್ಲಿ  Horlicks ಕುಡಿಯೋದು ಬಿಟ್ಟು ವರುಷಗಳೇ ಕಳೆದು ಹೋಗಿದ್ದವೇನೊ. ಅಂದು ಅಗಸ್ಟ್ ೧೨,೨೦೧೩ ಯಾವುದೋ ಕಾರಣಕ್ಕೆ ಅಂಗಡಿ ಗೆ ಹೋದಾಗ ರಾಶಿ ರಾಶಿ compass box ನೋಡಿ ಕಣ್ಣು ಅಗಲ ಆಯಿತು, ಆದರೆ compass box ನೋಡಿ ಅಲ್ಲಾ ಅದರ ಮೇಲೆ ಬರೆದದ್ದು ನೋಡಿ "Free  with Horlicks". ಅದನ್ನ ನೋಡಿ ನನ್ನ ಚಿಕ್ಕಂದಿನ ಆಸೆ ನನ್ನ ಅರಿವಿಲ್ಲದೆ ಗರಿ ಬಿಚ್ಚಿ ನಿಂತು ನನಗೆ ಗೊತ್ತಿಲ್ಲದೆ ಕಣ್ಣಲ್ಲಿ ಮಿಂಚು, ಮನಸಲ್ಲಿ ಆಸೆ ಈಡೇರಿದ ಖುಷಿ, ತಡವಾಗಿ ಈಡೇರಿದಕ್ಕೆ ಸ್ವಲ್ಪ ಬೇಸರ. ಒಟ್ಟಿನಲ್ಲಿ ಯೋಚನೆಗಳು Gadbad Icecream ನ ಮಿಶ್ರಣ ವಾಗಿತ್ತು. ಒಮ್ಮೆ ಮನಸು ಹೇಳಿತು ಆಗ ಆಗ್ಲಿಲ್ಲಾ at least ಈಗಾದ್ರು ತಗೋ ಅಂತ. ಆದರೆ ಇನ್ನೊಂದು ಕಡೆ ಎಲ್ಲದಕ್ಕೂ ಒಂದು time ಇರುತ್ತೆ ಆಸೆ ಪಡಲಿಕ್ಕೆ ಕೂಡ :) ಈಗ ತಡ ಆಯ್ತು ಅಂತ ಮನಸಲ್ಲೇ ನಗ್ತಾ ಮಿಶ್ರ ಭಾವದಿಂದ ಹೊರಟೆ.

ಈಗ ನೀವೇ ಹೇಳಿ, ಅಷ್ಟೊಂದು Horlicks ಮನಸಿಗೆ ಹಚ್ಚಿಕೊಂಡು ಅದನ್ನೇ ಕುಡಿತಾ ಬಂದ್ರೂ ಕೂಡ ನನ್ನ ಈ ರೀತಿ ಕಾಯಿಸಿ, ಕಾಡಿಸಿ ಇಷ್ಟು ವರ್ಷದ ನಂತರ free free ಅಂತ ತಂದಿದಾರಲ್ಲಾ ಇದು ಸರೀನಾ, ನನ್ನ ಅಭಿಮಾನಕ್ಕೆ ಕೊಡುವ ಬೆಲೆ ಇದೇನಾ...


ನೀವು ಉತ್ತರ ಹೇಳಿ, ಅಲ್ಲಿ ತನಕ ನಾ Horlicks ಕುಡಿದು ಬರತೀನಿ ;) :P  :D

Bye ಕಣ್ರೋ ...

Thursday, December 20, 2012

ಪ್ರಕೃತಿಯ ಮಡಿಲಲ್ಲಿ



ನಮ್ಮದು ಕಾಡಿನಲ್ಲಿ ಮನೆ, ಅವರಿಗೆ ಕಾಡೇ ಮನೆ 

ನಾಡಿಗಿಂತ ಚಂದ ಈ ಕಾಡು,
ಎಲ್ಲಾ ಬಿಟ್ಟು ಮಾಡಲಾಸೆ ಇಲ್ಲಿ ಪುಟ್ಟದಾದ ಗೂಡು;
ಇಲ್ಲಿತ್ತು ಹಿಂದೆ ಹಿಂಡು-ಹಿಂಡು ಪ್ರಾಣಿ-ಪಕ್ಷಿ ಗಳ ಬೀಡು;
ಹಾಡಿ ಮಾನವ ಅವುಗಳಿಗೆಲ್ಲಾ 'ಚರ್ಮ ಗೀತೆ' ಯ ಹಾಡು,
 ಈಗ ನೋಡದಂತೆ ಆಗಿದೆ ಆ ವನ್ಯ ಜೀವಿಗಳ ಪಾಡು.

ನೀ ಇಲ್ಲದೆ ನಾ ಬಾಳ್ವೆನೆ ???

ಮುದ ನೀಡುವುದು ನಸುಕಿನ ಈ ನೇಸರ,
ಓಡಿಸುವುದು ಮನದಾಳದ ಎಲ್ಲಾ ಬೇಸರ .

ಯಾರ ಹಂಗೂ ಎನಗಿಲ್ಲಾ, ಸ್ವಾತಂತ್ರ್ಯ ಬಿಟ್ಟು ಬೇರೇನು ನನಗೆ ಬೇಕಿಲ್ಲಾ 

ಜಲಧಾರೆ ಯ ಸುತ್ತ ಹಾರುತಿದ್ದರೆ ಹಕ್ಕಿ,
ಅನಿಸುತಿದೆ ನೋಡಿ ಹಸಿದು ಬಂದಂತೆ ತಿನ್ನಲೆಂದು ಅಕ್ಕಿ.

ಹೆಜ್ಜೆಯ ಗುರುತು - ನೆನಪಲಿ ಬೆರೆತು 

ನಡೆಯುವ ಹಾದಿಯಲಿ ಮೂಡುವವು ಹೆಜ್ಜೆಯ ಗುರುತುಗಳು,
ಮೆಲಕು ಹಾಕಲು ಚಂದ ಸವಿಸಿದ ಹಳೆಯ... ಆ ದಿನಗಳು;
ಬೇಕೇ ಬೇಕು ಬದುಕಲ್ಲಿ ಇಂತಹ ಕಳೆದ ಒಳ್ಳೆಯ ನೆನಪುಗಳು,
ಇರುವಾಗಲೇ ಕಟ್ಟು ನೆನಪಿನ ಬುತ್ತಿಯ; ಬೀಳುವ ಮುಂಚೆ...
ಮುಖದಲ್ಲಿ ನೆರಿಗೆಗಳು. 




Note: Copy rights reserved to Hrishikesh Sagar, Banglore

Tuesday, December 18, 2012

ಬೆಂಬಿಡದ 'ಮ'


ससरिया काल Friends, Every time I write for Myself as well as for friends, but this time I just want to write for Myself. Through this post I want to get connected with each and every thing which came into my Life and want to re-collect all kinds of moments which touched me, taught me and turned me. We get very less opportunity to think on our interests or about our self so here I have got a chance to have fun with myself in a different way.

Vidya this line is for you " I was just imagining while thinking about this topic that You are sitting/standing (U know it right ? ;) why these two) in front of me and we are discussing on this topic, you are giving your comments and by looking at your comment I am digging more and more on this Subject. Really some time you are a true inspiration for many of my thoughts and articles.I Miss you and our midnight talks Bucket :P :D "




ಮದುವೆಯ ಒಂದು ತಿಂಗಳು ಮುಂಚೆ ಸೆಪ್ಟೆಂಬರ್ ೨೨, ೨೦೧೨ನಿಟ್ಟೂರು ಬಸ್ ನಲ್ಲಿ ಕೂತಾಗ ಒಂದು ಯೋಚನೆ ಬಂದಿತು. ನಾ ಇದ್ದದ್ದು 'ಮಾ'ನ್ವಿ ಲಿ ನಂತರ 'M'CA ಮಾಡಿ 'ಮಂ'ಗಳೂರಿನ 'ಮಂ'ಗಳಾದೇವಿ ದೇವಸ್ಥಾನದ ಬಳಿ 'ಮಂ'ಕಿ stand ಹತ್ತಿರ ಇದ್ದ ಅಕ್ಕನ ಮನೆಗೆ ಬಂದೆ. ನಂತರ ಕೆಲಸ ಮಾಡಲು ''ಣಿಪಾಲ ಕ್ಕೆ ಹೋದೆ. ಈಗ 'ಮ'ದುವೆ ಆಗಿ ಮೈಸೂರು ಹೋಗ್ತಾ ಇದೀನಿ. ಅರ್ರೇ ... ಎಲ್ಲಾನೂ '' ನೇ :) ನನಗೂ ಈ '' ಗೂ ಎಷ್ಟೊಂದು ನಂಟು ಇದ್ಯಲ್ಲಾ ಅನ್ನಿಸ್ತು.
     
ಆಗಲೇ ಪಟ್ಟನೆ ಕೈಯಲ್ಲಿದ್ದ Mobile ಅನ್ನು ತೆಗೆದು list ಮಾಡಲು ಶುರು ಮಾಡಿದೆ. ಅಬ್ಬಾ !!! ಇಷ್ಟೊಂದ್ ಉಂಟು ನಂಟು ಅಂತ ಆ ಪಟ್ಟಿ ನೋಡಿದಾಗಲೇ ಗೊತ್ತಾಗಿದ್ರೀ ಯಪ್ಪಾ. ಉಫ್ ನನ್ನ ಮಾತಿನ ಮೇಲೆ ನಂಬಿಕೆ ಇಲ್ಲಲಾ ??? ನೀವೇ ನೋಡಿ...

ನಾ ನನ್ನ Parents ಗೆ  ಎರಡನೇ ''ಗಳು - 'ಮು'ದ್ದಿನ ಮಗಳು. ನಾ ಹುಟ್ಟಿದ್ದು  'ಮಾ'ನ್ವಿ ಲಿ, ತುಂಬಾ ಇಷ್ಟ ಪಡೋ ಜಾಗ ನನ್ನ ''ನೆ. 'ಮಾ'ತು ಅಂದರೆ ಜೀವ. ಅದಕ್ಕೆ ಜೊತೆಯಾಗೇ  ಇರುತ್ತೆ  ನನ್ನ 'M'obile. 'ಮ'ಳೆ  ಯಲ್ಲಿ ನೆನೆಯೋದು ಅಂದರೆ ಎಲ್ಲಿಲ್ಲದ ಖುಷಿ. ಶಾಲೆಯಲ್ಲಿ Aug 15 - Jan 26 ಕ್ಕೆ ತಪ್ಪದೆ ''ಲ್ಲಿಗೆ ಮುಡಿಯೋದು ಏನೋ ಮುದ ನೀಡೋದು.''ಣ್ಣಲ್ಲಿ ಈಗಲೂ ಆಟ ಆಡಲು ಇಷ್ಟ ಪಡೋ ನಾನು 'ಮೆ'ಹೆಂದಿ ಪರಿಮಳ ದಲ್ಲಿ ಮೈ ಮರೆತು ಬಿಡೋಳು ;) Life ನ ಪ್ರತಿ ಕ್ಷಣ ''ಜಾ ಮಾಡಬೇಕು ಅನ್ಕೊಂಡು ಬದುಕೋಳು ; 'ಮಾ'ಡಬೇಕು ಅಂದರೆ 'ಮಾ'ಡಲೇ ಬೇಕು ಅನ್ನೋದು ನನ್ನ  ಸ್ವಭಾವ.

ತಲೆ ಗಿಂತ ''ನಸ್ಸಿನ ಮಾತು ಕೇಳೋ ನಾನು ತುಂಬಾ ಇಷ್ಟ ಪಡುವ ಪ್ರಾಣಿ 'ಮಂ'ಗ :). ಎಲ್ಲರೂ  ಹೇಳೋ ಹಾಗೆ ನನಗೆ ''ರೆವು ಜಾಸ್ತಿ :P ನಾ ಮರೆತೇ ಹೊಗೋ ಶಬ್ದ 'ಮೆ'ಲ್ಲ....ಗೆ -'ಮೆ'ತ್ತ...ಗೆ; ಮಾಡಬೇಕು-ಮಾತಾಡಬೇಕು ಎನ್ನೋದು :D ಇಷ್ಟ ಆಗದೆ ಕಷ್ಟ ಪಡೋ ಹಾಗೆ ಮಾಡೋದು 'ಮುಂ'ಜಾನೆ ನಿದ್ದೆ ಯಿಂದ ಏಳೋದು; ಯಾಕಂದ್ರೆ ನನಗೆ ''ಲಗೋದು ಅಂದರೆ ಧ್ಯಾನದಲ್ಲಿ ಸ್ವರ್ಗಕ್ಕೆ ಹೋದ ಹಾಗೆ ''ಹಾ ಜನಗಳೆ ;) ಆದರೂ ಇಷ್ಟ ; ನೋಡಲು-ಅನುಭವಿಸಲು ಆ ಮುಂಜಾವಿನ 'ಮಂ'ಜು.

ಊಟದಲ್ಲಿ 'ಮೊ'ಸರು ''ಜ್ಜಿಗೆ ಎಷ್ಟಿದ್ದರೂ ಸಾಲಲ್ಲಾ ಅಂತ ಜೀವ ಹೇಳಿದ್ರೆ ... ಓದೋದ್ರಲ್ಲಿ ನನ್ನ ಜೀವ ಹಿಂಡತಾ ಇದ್ದದ್ದು ''ಗ್ಗಿ. ಒಟ್ಟಿನಲ್ಲಿ  ಈ English ನಲ್ಲಿ ಹೇಳೋ  'M' aths :(  ಯಾವಾಗಲೂ ಎಮ್ಮೆ ಎಂದು ತಮಾಷೆ ಮಾಡೋಳು ; ಅದಕ್ಕೆ ಖುದ್  'M '.A  ಮಾಡಲು ಮನಸಿಲ್ಲದೇ ಇರೋ ನನ್ನ  ... ನನ್ನ ಬಗ್ಗೆ  ಸ್ವತಃ ನಾನೇ  ತುಂಬಾ ಹೆಮ್ಮೆ ಪಡೋ ಹಾಗೆ ಮಾಡಿದ್ದು ... ಇದೇ Maths ನ Life ನಲ್ಲಿ Re-Entry ಕೊಡಿಸಿ Life ನೇ ಬದಲಾಯಿಸಿದ್ದು  'M'.C.A

M.C.A ಆದಮೇಲೆ Life Transformation ಗಾಗಿ ಅಕ್ಕ,ಭಾವ,ಪಿಂಕು ಜೊತೆ 'ಮಂ'ಗಳೂರಿನ 'ಮಂ'ಗಳಾದೇವಿಯ 'ಮಂ'ಕಿ ಸ್ಟ್ಯಾಂಡ್ ನ ಹತ್ತಿರ ಮನೆ, ಅಲ್ಲಿಯೇ ಪರಿಚಯವಾದ, ಪರಿಚಯದಿಂದ ಸ್ನೇಹ, ಸ್ನೇಹದಿಂದ ಪ್ರೀತಿ ಯಾಗಿ ಉಳಿದವಳು ''ಮತಾ ಅನ್ನುವ ತರಲೆ :P ನಂತರ ಹೆಸರಿಗಷ್ಟೇ ಆದರೂ ಮೊದಲು ಕೆಲಸ ಕೊಟ್ಟ  ಊರು  ''ಣಿಪಾಲ.

ಯಾರ  'ಮು'ಲಾಜಿಗೂ ಬೀಳೋಕೆ ಇಷ್ಟ ಪಡದ ನನ್ನ  'M's ನಿಂದ 'M'rs ಮಾಡಲು ಅಕ್ಷಯ್ ಕೊಡಕಣಿ  Hero ಥರ Entry ಕೊಟ್ಟ ಮೇಲೆ  ಇಬ್ಬರ  ಸ್ವಾತಂತ್ರ್ಯ  ಹರಣ ಮಾಡಲು ''ದುವೆ :P  ಅದಕಾಗಿ ಬೇಕೇ ಬೇಕಲ್ವಾ 'ಮಂ'ಟಪ. ಅದೂ ಸಿದ್ಧವಾಗಿ ಕಾರ್ಯ ಮುಗಿದು ಅಪ್ಪ ಅಮ್ಮ ಕೈ ತೊಳೆದ ಮೇಲೆ ದಿಬ್ಬಣ ದೊಂದಿಗೆ ಹೋದ ಊರು 'ಮಿ'ರ್ಜಾನ್ ಆದರೆ ಅವರ ಅಪ್ಪ ಅಮ್ಮ ಇರೋ ಊರು  'ಮು'ಧೋಳ್.  ಎಲ್ಲಾ ಕಡೆ ತಿರುಗಿ ಕೊನೆಗೆ ಈಗ ಇರುವ ಊರು 'ಮೈ'ಸೂರು.

ಮದುವೆ ತಾನಲ್ಲದೆ ತನ್ನ ಜೊತೆ ಇನ್ನೂ ಹತ್ತು ಹಲವು 'ಮ' ತರುತ್ತೆ. ಅದರಲ್ಲಿ ಮೊದಲು ''ಕ್ಕಳು Entry ಕೊಟ್ರೆ  ಅದರಲ್ಲೂ by chance ಗಂಡಾದ್ರೆ ನಂತರ ಅಂಟಿಕೊಂಡೇ ಬರೋದು 'ಮುಂ'ಜಿ. ಅದೃಷ್ಟಕ್ಕೆ ಹೆಣ್ಣಾದ್ರೆ  ''ಗಳು - ಗಂಡಾದರೆ ''ಗ. Next Jump ಹೊಡೆದು ಮುಂದೆ ಸೇರುತ್ತೆ  'ಮೊ'ಮ್ಮಕ್ಕಳು.

ಬದುಕು ಎಷ್ಟೇ ಮುಂದು ಹೋಗಲಿ, ಇನ್ನೂ ಎಷ್ಟೇ '' ಬದುಕಲ್ಲಿ ಇರಲಿ- ಬರಲಿ. I just want to say
                                   I 'M'iss 'M'y 'M'anglore

ಈಗ '' ನ ಜಪ ಸಾಕು ; ಮುಂದಿನ Post ನಲ್ಲಿ ತ್ತೆ ರಳಿ ಬರುವೆ - ನಿಮ್ಮನ್ನೆಲ್ಲಾ  ತ್ತೆ ಸಿಗಲು. 

ಅಲ್ಲಿವರೆಗೆ ...

''ಸ್ತ್ ''ಜಾ 'ಮಾ'ಡಿ  

दसवी दानिया Guys ;)