Thursday, December 20, 2012

ಪ್ರಕೃತಿಯ ಮಡಿಲಲ್ಲಿ



ನಮ್ಮದು ಕಾಡಿನಲ್ಲಿ ಮನೆ, ಅವರಿಗೆ ಕಾಡೇ ಮನೆ 

ನಾಡಿಗಿಂತ ಚಂದ ಈ ಕಾಡು,
ಎಲ್ಲಾ ಬಿಟ್ಟು ಮಾಡಲಾಸೆ ಇಲ್ಲಿ ಪುಟ್ಟದಾದ ಗೂಡು;
ಇಲ್ಲಿತ್ತು ಹಿಂದೆ ಹಿಂಡು-ಹಿಂಡು ಪ್ರಾಣಿ-ಪಕ್ಷಿ ಗಳ ಬೀಡು;
ಹಾಡಿ ಮಾನವ ಅವುಗಳಿಗೆಲ್ಲಾ 'ಚರ್ಮ ಗೀತೆ' ಯ ಹಾಡು,
 ಈಗ ನೋಡದಂತೆ ಆಗಿದೆ ಆ ವನ್ಯ ಜೀವಿಗಳ ಪಾಡು.

ನೀ ಇಲ್ಲದೆ ನಾ ಬಾಳ್ವೆನೆ ???

ಮುದ ನೀಡುವುದು ನಸುಕಿನ ಈ ನೇಸರ,
ಓಡಿಸುವುದು ಮನದಾಳದ ಎಲ್ಲಾ ಬೇಸರ .

ಯಾರ ಹಂಗೂ ಎನಗಿಲ್ಲಾ, ಸ್ವಾತಂತ್ರ್ಯ ಬಿಟ್ಟು ಬೇರೇನು ನನಗೆ ಬೇಕಿಲ್ಲಾ 

ಜಲಧಾರೆ ಯ ಸುತ್ತ ಹಾರುತಿದ್ದರೆ ಹಕ್ಕಿ,
ಅನಿಸುತಿದೆ ನೋಡಿ ಹಸಿದು ಬಂದಂತೆ ತಿನ್ನಲೆಂದು ಅಕ್ಕಿ.

ಹೆಜ್ಜೆಯ ಗುರುತು - ನೆನಪಲಿ ಬೆರೆತು 

ನಡೆಯುವ ಹಾದಿಯಲಿ ಮೂಡುವವು ಹೆಜ್ಜೆಯ ಗುರುತುಗಳು,
ಮೆಲಕು ಹಾಕಲು ಚಂದ ಸವಿಸಿದ ಹಳೆಯ... ಆ ದಿನಗಳು;
ಬೇಕೇ ಬೇಕು ಬದುಕಲ್ಲಿ ಇಂತಹ ಕಳೆದ ಒಳ್ಳೆಯ ನೆನಪುಗಳು,
ಇರುವಾಗಲೇ ಕಟ್ಟು ನೆನಪಿನ ಬುತ್ತಿಯ; ಬೀಳುವ ಮುಂಚೆ...
ಮುಖದಲ್ಲಿ ನೆರಿಗೆಗಳು. 




Note: Copy rights reserved to Hrishikesh Sagar, Banglore

No comments:

Post a Comment