Tuesday, December 11, 2012

ಚಿತ್ರದಿಂದ ಚಿತ್ತಕ್ಕೆ


December 10, 2012  ಅಕ್ಷಯ ನ ಸ್ನೇಹಿತ ಸಾಗರ್ ರವರು ತೆಗೆದ ಕೆಲವು photo ಗಳು. ಅದ ನೋಡಿದ ಕೂಡಲೇ ಮನಸು ಕೆಲವು ಸಾಲು ತಂದು Comment  ಮಾಡಿದರೆ; ತಲೆ ನಿಮ್ಮೊಡನೆ ಹಂಚಿಕೊಳ್ಳಲು ಹೇಳಿತು. 

ಛಲೋ ಆಗ್ಯಾದೋ ಇಲ್ಲೋ  ನಂಗ್ ಗೊತ್ತಿಲ್ರಪ್ಪ ಮನ್ಸಾಗ್ ಆ ಕ್ಷಣಕ್ ಏನ್ ಬಂತೋ - ಚಿತ್ರದಿಂದ ಚಿತ್ತಕ್ ಏನ್ ಹೊಳಿತೋ ಅದನ್ನಾ ನಾ ಇಲ್ಲಿ ನಿಮ್ಮ ಮುಂದ ಬರದೀನ್.  ಈಗ ನಾ ಹೇಳಿದ್ ಸಾಕ್ ನೀವಾ ಓದರಿ ಹೆಂಗ್ ಆದಂತ.


ಬದುಕಿಗೆ ಮತ್ತೊಂದು ಬೆಳ್ಳಿ ಕಿರಣವ ತೋರಿಸುವ ಹಾದಿಯಲ್ಲಿದ್ದರೆ ನಸುಕು,
ಪಕ್ಕದಲ್ಲೇ ಮತ್ತೆ ಬರಲು ಕಾದು ಕುಳಿತಂತಿದೆ ಕತ್ತಲೆಯ ಮುಸುಕು.

ಬೆಳಕ ಮುಚ್ಚಿಡಲು ನೋಡುತಿಹುದು  ಮೋಡ ,
ಆ ಯತ್ನದಲಿ ಸೃಷ್ಟಿ ಎಂತ ಚಂದ ಕಾಣುತಿದೆ ನೋಡ. 


ಬದುಕು ಎಷ್ಟೇ ಆಗಿರಲಿ ಸಂಕೀರ್ಣ, 
ಸಡಿಲವಾಗುವುದು  ಎಲ್ಲಾ ಬಿದ್ದೊಡನೆ  ಪ್ರೀತಿ ಎಂಬ ಹೊಂಗಿರಣ. 

ಎಷ್ಟು ಚಂದ ನೋಡಲು ದೇವರು ಕೊಟ್ಟ ಈ ನೀಲಿ, ಬಿಳಿ, ಹಸಿರು ಬಣ್ಣಗಳು,
ಸಾಲದು ನನಗೆ ತುಂಬಿಕೊಳ್ಳಲು ಎಷ್ಟಿದ್ದರೂ ಈ ಕಣ್ಣುಗಳು;
ಹೆಬ್ಬಾವಿನಂತೆ ಎಷ್ಟೇ ಚಂದವಿರಬಹುದು ಮಾನವ... ನೀ ಮಾಡಿದ ರೋಡು,
ನೋಡ ಹೋದರೆ ... ಕೇವಲ ಬರಿ ಬೋರು. 

                                        ಕಪ್ಪು ಕಪ್ಪೆಂದು ಹಳಿಯದಿರು ಬಿಳಿ ಬಣ್ಣವ ನೋಡಿ,
                            ಬಿಳಿ ಬತ್ತಿಯ ದೇವರಿಗೆ ಹಚ್ಚುವಂತೆ ಮಾಡುವುದು ಕಪ್ಪು ಮಣ್ಣಿನ ಮೋಡಿ;
                                      ಬಿಳಿ ಮೋಡವ ನೋಡಿ ಕಪ್ಪು ಮೋಡವ ತರಿಸೆಂದು ಕಾಡಿ,   
                                                ಓಡಿ ಬರುವರು ... ದೇವರಲ್ಲಿ ಬೇಡಿ.  
(ಅರ್ಥ: ಬಿಳಿಯ ಮುಂದೆ ಕಪ್ಪು ಹೀಗಳೆದರೂ ದೇವರ ದೀಪಕ್ಕೆ ಬೇಕಾಗೋ ಬತ್ತಿ ಕಪ್ಪು ಮಣ್ಣಿನಲ್ಲಿ ಹುಟ್ಟೋ ಹತ್ತಿಯಿಂದ, ಕಪ್ಪು ಮೋಡ   ಮಳೆ ನೀಡುವುದೇ ಹೊರತು ಬಿಳಿಯಲ್ಲಾ, ಅಂತ ಕಪ್ಪು ಮೋಡಕ್ಕೆ ದೇವರನ್ನು ಬೇಡುವರೇ ಹೊರತು ಬಿಳಿಗಲ್ಲಾ)  

ಬಂದು ಎತ್ತರು ಯಾರು ನೀ ಬಿದ್ದರೆ,
ತಟ್ಟುವರು ಮಾತ್ರ ಸಾವಿರಾರು ನೀ ಏನಾದರು ಮತ್ತೆ ಎದ್ದರೆ.
(ಅರ್ಥ : ನಾವು ಬಿದ್ದಾಗ ಯಾರು ನಮ್ಮನ್ನು ಎಬ್ಬಿಸಲು ಬರುವುದಿಲ್ಲಾ, ಅದೇ ನಾವು ಬಿದ್ದು ಎದ್ದು ಸಾಧಿಸಿದರೆ ಹೊಗಳಲು ಸಾವಿರಾರು ಜನ ಬರುತ್ತಾರೆ)


ವರುಷಗಳವರೆಗೆ ಇರಬಹುದು ವ್ಯಕ್ಕಿಗಳ ಹೊಳಪು,
ಕಾಲ ಗರ್ಭದಲಿ ಅದು ಹೋಗಲೇ ಬೇಕು ಒಂದು ದಿನ ಆಗಿ ಕೇವಲ ನೆನಪು. 
                       (ಅರ್ಥ : ಬದುಕಿರುವಾಗ ನಾವೆಷ್ಟೇ ನಮ್ಮ ಬಿಂಕ ತೋರಿದರೂ ಸತ್ತ ಮೇಲೆ ನಮ್ಮದೂ ಎಂದು ಉಳಿಯದು ಇಲ್ಲಿ ಏನೂ)

Nov 16,2012 Written these following lines on Bhavya and Sagar's daughter ಪರಿಣಿತಾ 

     ಪಟ ಪಟನೆ ತಿರುಗುತಿದ್ದರೆ ನಾಳೆ ,
ಇಂದಿನಲ್ಲಿ  ಮುಳುಗಿ ಹೋಗಿ ಹೊರ ಲೋಕವ ನೋಡುತಿಹಳು;
ಪುಟ್ಟ ಕಣ್ಣಲ್ಲಿ ಈ ನಮ್ಮ ಬಾಲೆ. 


ಅಮ್ಮನ ಬಣ್ಣ ಬಣ್ಣದ ಬಳೆಯ ಮೇಲೆ ಎನ್ನ ಮನಸು,
ಅದ ಹಾಕಿ ಅಪ್ಪನ ಮುಂದೆ ; ಅಮ್ಮನಿಗಿಂತ 
ತಾ ಕಡಿಮೆಯಿಲ್ಲಾ ಎಂದು ತೋರಿಸುವ ಕನಸು :)

ಕಂಡಿರಾ ಕೂತಿರುವಳಿಲ್ಲಿ ನಮ್ಮ ಮುದ್ದಾದ ಮಗು,
ಇದ್ದರೆ ಇರಬೇಕು ಇಂತ ಮುಗ್ದವಾದ ನಗು. 



After reading this post, Hope you also agree with my thoughts related to these pics and also hope that as always you all enjoyed while reading this post :D. Very soon I will come up with some other topic ಕಣ್ರೋ ...

Till Then ....


Click
Click
Click 
:P :) :D



Note: Copy rights of these photos reserved to Hrishikesh Sagar, Banglore

No comments:

Post a Comment