Saturday, October 26, 2013

ಮಗುವಿಂದ ಮಗುವಾಗುವ ತನಕ

.
Any guess what I am going to tell  you??? Guess Guess ...


ನಿನ್ನೆಯ ಕಥೆ                                                                 ನಾಳೆಯ ಕಥೆ

ನನ್ನ ಪುರಾಣ ಹೇಳೋಕಂತ್ರೂ ಅಲ್ಲಾ ಕಣ್ರಪ್ಪಾ/ಕಣ್ರಮ್ಮಾ , ನನ್ನಂತ lazy ಗಳಿಗೆ ಸುಲಭ ಆಗಲಿ ಅಂತ Bold letter ಬೇರೆ ಮಾಡಿದೀನಿ  ಅದನ್ನ ಓದಿ ; last ಗೆ ಏನಂತ ಗೊತ್ತಾಗದೇ ಇದ್ರೇ recap ಮಾಡ್ಕೊಳ್ಳಿ ಗೊತ್ತಾಗುತ್ತೆ :) Enjoy Reading ...


ಬಾಲ್ಯದ್ದು ಇನ್ನೂ ನೆನಪಿದೆ , ನಾ ಏನೇ ಮಾಡಿದ್ರು ದೊಡ್ಡ ವಿಷಯ ಅನ್ನೋ ಹಾಗೆ ಖುಷಿ ಪಡೋರು.ಆ ದಿನ ನಾನು " ಅ ಆ ಇ ಈ " ಎಲ್ಲಾ ಕಲಿತ ದಿನ ನನ್ನ ಎಲ್ಲಾ Teachers ಒಬ್ಬರಿಗೊಬ್ಬರು ಹೇಳಿ ಕೊಂಡು ಖುಷಿ ಪಟ್ಟರು.I felt whats so big deal. ಎಲ್ಲರೂ ಬಂದು ಮುದ್ದು ಮಾಡುವಾಗ ಇವರೆಲ್ಲಾ ಯಾಕೆ ಹಿಂಸೆ ಕೊಡ್ತಾರೆ ಅನ್ನಿಸ್ತಿತ್ತು. ಮೊಗ್ಗಿನ ಜಡೆ ಹಾಕಿದಾಗ ಎಲ್ಲರೂ ತೋರಿಸೋಕೆ ಹೇಳಿದ್ದು ಯಾಕಪ್ಪಾ ಅನ್ಸ್ತು. ಒಟ್ಟಿನಲ್ಲಿ  ಹೇಳಿದ ಹಾಗೆ ಆಗ ಏನೇ  ಮಾಡ್ಲಿ  ಮಾತಾಡ್ಲಿ  ವಿಶೇಷಾನೇ .

High School College ಮಾನ್ವಿಲೇ ಆಯ್ತು . ಆ ಸಮಯ ಆ ವಯಸಲ್ಲಿ ಆದ ಬದಲಾವಣೆ ಜನರಿಗೆ  ವಿಶೇಷದ ವಿಷಯ. ನನಗೆ ಹಿಂಸೆ ಯೇ ಆಯಿತು. Difference of thoughts ಅಷ್ಟೇ.

Next college ಹೋಗುವಾಗ  "ಏನೇ ವಿಶೇಷ Boy Friend ಇಲ್ಲವಾ " ಅಂತ ಕೇಳೋಷ್ಟು ಯಾರು broad minded ಇರಲಿಲ್ಲಾ, ಅದನ್ನ feel ಮಾಡೋಕೆ ನನಗ್ಯಾರು ನನ್ನ taste ನ boy friend ಕೂಡ ಸಿಗಲಿಲ್ಲಾ. ಎಲ್ಲರಿಗೆ explain ಮಾಡೋದ್ರಲ್ಲೇ time ಕಳೀತು. ಹೆಚ್ಚಂದ್ರೆ Subject ನಲ್ಲಿ ಒಳ್ಳೆ Marks ಬಂದದ್ದು, ನಮ್ಮೂರಿಂದ ಪ್ರಥಮ ಬಾರಿಗೆ ನನಗೆ ಮೊದಲಿಗೆ MCA ಗೆ Seat ಸಿಕ್ಕಿದ್ದು, ಅದಕ್ಕಿಂತ ಹೆಚ್ಚಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಚುಟುಕು ಗೋಷ್ಠಿ ಯಲ್ಲಿ ಭಾಗವಹಿಸಿದ್ದು ಇದಿಷ್ಟು ವಿಶೇಷ ಅನ್ನಬಹುದು ಆದರೆ ಯಾರೂ ಮುಂಚೆನೇ ವಿಶೇಷಾನಾ ಅಂತ ಕೇಳಿಲ್ಲಾ.

ಇನ್ನೂ MCA,  Thank God ಹುಡುಗರಿಗೆ ಬರ ಅನ್ನೋ ಹಾಗೆ ನನ್ನ Life ಗೆ ಯಾರದೂ Special Entry ಆಗಲೇ ಇಲ್ಲಾ :P ಹಾ ಅಲ್ಲಿಯೋರಿಗೆ ವಿಶೇಷ ಅನಿಸಿದ್ದೊಂದು ಇದೆ (ಜೊತೆಗೆ ನನಗೆ ಮಂಡೆ ಬಿಸಿ ಕೂಡ). Specially ನಮ್ಮ HOD ಅದೂ First Sem ನಲ್ಲಿ ಕಂಡ ಕಂಡಲ್ಲಿ ನಿಲ್ಲಿಸಿ "ನೋಡಿ ಇದೇ ಹುಡುಗಿ, Gulbarga University Arts background ಅಂದೆ ಅಲ್ಲಾ ಇವಳೇ " ಅಂತ ಒಂದೇ ಎರಡೇ ಹೇಳಿದ್ದು ಕೊನೆಗೆ Class ನಲ್ಲೂ ಬಿಡ್ಲಿಲ್ಲಾ :D . ಪುಣ್ಯಕ್ಕೆ ಜೀವ ಬಿಟ್ಟು ಓದಿ ಚೆನ್ನಾಗ್ marks ತೆಗೆದು ಮರ್ಯಾದೆ ಉಳೀತು. ಉಫ್ಫ್... ಅದು  ಬಿಟ್ರೇ ಹಾ .. ಹಾ .. ಎಡಬಿಡಂಗಿ ಥರ College First Day, First ನಾನೇ ಎದ್ದು ಹೋಗಿ English ಬದಲು  ಕನ್ನಡ ಮಾತಾಡಿದ್ದು (ಅಕ್ಕಾ ಭಾವ ಅಷ್ಟೆಲ್ಲಾ Train ಮಾಡಿದ್ Waste. ಜೊತೆಗೆ ಭಟ್ಕಳ Native ಅನೋ ಬದಲು Raichur ಅಂತ Tension ನಲ್ಲಿ ಹೇಳಿ Total ಆಗಿ ಅಕ್ಕ ನ plan full ತೋಪು ಎಬ್ಬಿಸಿದೆ :(  ) ಅದು ಬಿಟ್ಟರೆ ನನಗೆ ವಿಶೇಷ ಅನ್ನಿಸಿದ್ದು Pinku(Prakruti) ಹುಟ್ಟಿದ ದಿನ

ಅಂತೂ tortuous journey ಆಯ್ತು ಆ 3 ವರ್ಷ :)  ಅದಾದ ಮೇಲೆ ಬೇರೆ ಯವರಿಗೆ ಆಗ್ಲೀ ಬಿಡಲಿ ನನ್ನ ಪಾಲಿಗೆ ನನ್ನ ಅಕ್ಕ ನ ಪಾಲಿಗೆ ವಿಶೇಷ ಅನ್ನಿಸೋ ದಿನ ಬಂತು. That is when I did my First Sudarshan Kriya and Had a peaceful sleep like a baby that day after So many years.


College ಆಯ್ತ್ ಇನ್ನೂ ಕೆಲಸ. ಆಗ ಶುರು ವಾಯ್ತು ಮತ್ತೆ ಜನರ ಪ್ರಶ್ನೆ. ಕೆಲಸ ಎಲ್ಸಿಕ್ರೂ ಮತ್ತೇನೂ ವಿಶೇಷ ಅಂತ ಮದುವೆ ಬಗ್ಗೆನೇ ಕೇಳೋರು , ಇನ್ನೂ ಸಧ್ಯಕ್ಕೆ ಇಲ್ಲಾ ಅಂದ್ರೆ ಏನು Boyfriend ಇದ್ದಾನಾ ಕೇಳೋರು. ನನ್ನಂತ बेहेंजी ಗೆ ಹುಡುಗ ಸಿಗದ್ ಹೌದಾ :P  ನನಗೆ Boy Friend ಮದುವೆ ಎರಡರ ಕಿರಿ ಕಿರೀನು ಬೇಡ ಅಂತ ನಾ ಕೂತರೆ  ಬೆಂಬಿಡದ ತ್ರಿವಿಕ್ರಮನ ಥರ First Interview ತಗೋಳೋಕೆ Ready ಮಾಡೋದಾ ನಮ್ಮ ಅಪ್ಪಾ. ಅದಕ್ಕೆ ಕಿರೀಟ ಇಟ್ಟಂಗೆ ನನ್ನ Friend ಶ್ರುತಿ Ulike ಗೆ ಎಳ್ಕೊಂಡು ಹೋಗಿ Full make over ಮಾಡಿಸಿಟ್ಟಳು. ಅದರಲ್ಲಿ ಸೀರೆ ಬೇರೆ.  ನನ್ನ ರಂಪಾಟ.  ಅಪ್ಪನಿಗಾಗಿ ಸೀರೆ ಬೇಜಾರಲ್ಲಿ ಉಟ್ಟು ಮನೆಯವರೆಲ್ಲಾ ನನ್ನ ಕೈ ಕೊಟ್ಟು ಎಡವಟ್ಟು ಮಾಡಿ interview ತಗೊಂಡು ಕೊನೆಗೆ Resume match ಆಗ್ಲಿಲ್ಲಾ.  ಆಗಲಿಲ್ಲಾ ಅನ್ನೋ ಬೇಜಾರ್ ಕಿಂತ ಮತ್ತೆ ಸೀರೆ ಉಟ್ಟು ಪ್ರದರ್ಶನ ಮಾಡದ್ ನೆನಸೇ ಅಳು ಬಂತು. ಅದಾದ correct ಒಂದು ತಿಂಗಳಿಗೆ May 13, 2012 ಗುರೂಜಿ Birthday ದಿನ  ನೋಡೋಕೆ ಅಲ್ಲಾ ತೋರಿಸೋಕೆ ಬಂದರು. (Let it be different). ನನ್ನದು ಎರಡೇ ಮಾತು ಕೆಲಸ ಮಾಡದ್ ಬಿಡಲ್ಲಾ ಮತ್ತು ನನ್ನ ಆಧ್ಯಾತ್ಮದ ದಾರಿಗೆ ಅಡ್ಡಿ ಬರಬಾರದು ಅಂತ ಉಳಿದ ಮಾತೆಲ್ಲಾ ಅಕ್ಷಯನದು. ಮಾತಡಿದ್ದಾದ್ರು ಏನು ಇಬ್ರೂ Cricket, Android, Sports :D ಮದುವೆ ಆಗೋ plan ಇಲ್ದೇ ಇರುವಾಗ ಏನು ಪ್ರಶ್ನೆ ಕೇಳಲಿ. ಕೇಳಿದ್ದೆಲ್ಲಾ ಅಕ್ಕಾನೆ ಹಾಗೆ ನನ್ನ ಬದಲು ಅಪ್ಪ ಆಕಾಶದಲ್ಲಿ ಹಾರತಾ ಇದ್ದರು. ಒಂದು Special Event ನನ್ನ Life ನಲ್ಲಿ ಮುಗೀತು ಅಂತ ಆಯಿತು. 

ಅಕ್ಷಯ್ ಮೇಲೆ ಇನ್ನೂ ಪ್ರೀತಿ ಬರಲಿ ಅಂತ ಅಕ್ಕನ ಸಲಹೆ ಯಂತೆ ಹೊನ್ನಾವರ ದ ಸಿದ್ದಾಪುರ ದಲ್ಲಿ Advance Course ಮಾಡಿ ಆ 2ನೇ ದಿನ ಮೌನದ ಮುಸ್ಸಂಜೆ 18 May 2012 ಸಂಜೆ ಸುಮಾರು 5 - 30 ಗೆ  ನನ್ನ ಹುಡುಗನ ಬಗ್ಗೆ ಮೊದಲ ಬಾರಿಗೆ ಪ್ರೀತಿ ಹುಟ್ಟಿದ ಕ್ಷಣ ವನ್ನು ಹೇಗೆ ಮರೆತೇನು :) it was my last peaceful AMC before diving into relationship and  Who says spirituality takes people away from family look at me.

 ಇನ್ನೂ Pre TTC (Teacher Training Course) Military training ಥರ ಕಷ್ಟ ಪಟ್ಟು ಮುಗಿಸಿ  ಗುರೂಜಿ ನ ಸಿಕ್ಕಾಗ It was really a Special and Pride moment for me. ಅದು ಆಗೋ ವಾರ 2nd Week Training ಹೋಗೋ ಮುಂಚೆ 8th ಅಕ್ಷಯ್ ನ ಸಿಕ್ಕಿದ್ದು ಅದರ next week June 17 ಗೆ Engagement. Major Special Events Finished :( (ಯಾಕೆ ಬೇಜಾರ್ ಅಂತ ಕೊನೆಗೆ ನೋಡಿ).

ಅದಾದ್ ಮೇಲೆ ಅಕ್ಷಯ ಜೊತೆಗೆ ಕಳೆದ ಪ್ರತಿ ಕ್ಷಣಾ ಕೂಡ ವಿಶೇಷ (ನನ್ನ ಭಾವನೆ ಇಂದಿಗೂ ಹಾಗೆ ಇದೆ ಅಕ್ಷಯ್ ಗೆ ನೀವೇ ಕೇಳಬೇಕು ;) :P ), ಸುತ್ತಲೂ ಇರೋರು ಕೂಡ  ವಿಶೇಷ ಅನ್ನೋ ಹಾಗೆನೇ ಮಾಡಿದ್ರು . ನವಂಬರ್ ೧, ೨೦೧೨ ಕರ್ನಾಟಕ ರಾಜ್ಯೋತ್ಸವ ಇನ್ನೂ ೬ ತಿಂಗಳಾ ??? ಅನ್ನಿಸಿದ್ದು ಅಯ್ಯೋ ಇಷ್ಟು ಬೇಗ ಬಂತಾ ಅನ್ನೋ ಹಾಗೆ ದಿನ ಕಳಿತು. ಮದುವೆ ವಿಶೇಷ ಏನಂದ್ರೆ ಗಂಡು ಮಕ್ಕಳೆಲ್ಲಿ ಕೆಲಸ ಮಾಡೋಕೆ ಅನ್ನೋ typical dialogue ಬರದೇ ಇರೋ ಥರ ಎಲ್ಲಾ arrangements card printing, sweet packet purchase, packing ಎಲ್ಲಕ್ಕಿಂತಾ important ಮದುವೆ Shopping ನಾ ಖುದ್ ಉಡುಪಿ ಉದ್ಯಾವರದಲ್ಲಿ ಮಾಡಿದ್ದು.  Record and ವಿಶೇಷ  ಅಂದ್ರೆ 6 ಗಂಟೇಲಿ (1pm - 6pm) ಒಳ್ಳೆ Princess ಥರ Shop book ಮಾಡಿದ್ ಹಾಗೆ Shop full ನಮ್ಮ family ಮಾತ್ರ ಜೊತೆಗೆ ಎಲ್ಲಾ attenders ನಮ್ಮ ಹತ್ರ. ಯಾಕಂದ್ರೆ Sunday ಅವರ Shop half day and ಆ advantage ನಮಗೆ ಸಿಕ್ತು.. 

ದೊಡ್ಡ ದೊಡ್ಡ ವಿಶೇಷ ಏನಪ್ಪಾ ಅಂದ್ರೆ ಆಯ್ತ್ ಮುಗಿತ್ ಅನ್ನೋ ಹಾಗೆ ನನಗಾಗಿ ನಾ ಸಂತೋಷದಿಂದ ಖರ್ಚು ಮಾಡಿದ್. ಅದರಲ್ಲೇನ್ ವಿಶೇಷ ಅಂತ ನನ್ನ family ಗೆ ಗೊತ್ತು ;)

ಮದುವೆ ಆಯ್ತು ಈಗಂತೂ ಇನ್ನೂ ಜಾಸ್ತಿ last stage ಅಲ್ವಾ. ಏನು ವಿಶೇಷ ಇಲ್ವಾ ಅಂತ ಕೇಳೋರು. ಮದುವೆ ಆಗಿ ಇನ್ನೂ ಸಂಭಾಳಿಸಿರಲ್ಲಾ ಇದೊಂದು ಶುರುವಾಗುತ್ತೆ.  ಹಳೇ stage ನಲ್ಲಿ ಉತ್ತರ ಕೊಡೋದು ಸುಲಭ ಈ stage ಅನುಭವಿಸೋರೆ ಬಲ್ಲರು.

ವಿಶೇಷ ಕೇಳಿ ಕೇಳಿ ಮಕ್ಕಳು ಆಯ್ತು ಅಂತ Imagine ಮಾಡಿ ನನ್ನ ವಿಷಯದಲ್ಲಿ.  Next  What Baby ??? Have you ever thought ? ಮಗು ಹುಟ್ಟಿದ ದಿನ ವಿಶೇಷ ಸರಿ.  ಅದಾದ್ ಮೇಲೆ ...

                     **********************   ಅಧ್ಯಾಯ  ಮುಕ್ತಾಯ  ***********************

ಮದುವೆ ಹಾಗೂ ಮಗುವಿನ ಮಧ್ಯ :

ಈಗಲೇ ಮಾಡ್ಕೊಳಿ ಒಂದು ಅಂತ ಹೆಂಗೆ ಹೇಳ್ತಾರೆ ಅಂದ್ರೆ as if ನಮಗೆ ಬಿಟ್ರೆ ಅವರೇ ಸಾಗ್ತಾರೆ ಅನ್ನೋ ಹಾಗೆ.  Honeymoon ಹೋಗಲಿ (ನಾವು ಹೋಗಿಲ್ಲಾ ಅದು ಬೇರೆ ಮಾತು ) ಚೆನ್ನಾಗ್ ಜಗಳ ಆಡಕೂ ಬಿಡಲ್ಲಾ. Most stupid suggestions (other than doctors)for all problem to all couples "ಒಂದು ಮಗು ಮಾಡ್ಕೊಳ್ಳಿ ಎಲ್ಲಾ ಸರಿ ಹೋಗುತ್ತೆ " ಇಲ್ಲಾ "ಅದರಷ್ಟಿಗ್ ಅದು ಆಗಲಿ ನಿಮ್ಮದು ನೋಡ್ಕೋಬಹುದು " etc. :D

Note : ಯಾರ ಭಾವನೆ ಯೋಚನೆಯನ್ನು ನೋಯಿಸುವ ಉದ್ದೇಶ ನನ್ನದಲ್ಲಾ. ನಾ ಹೇಳೋದಿಷ್ಟೇ ಬೇರೆಯವರ ಮನಸ್ಥಿತಿ ನೋಡಿ ಕೊಂಡು ಮಾತಾಡಿ ಅನ್ನೋದು. ಎಷ್ಟೋ ಜನ ಮಕ್ಕಳಿಗಾಗಿ ಒದ್ದಾಡುವಾಗ ನಾವು ಹೇಳಿದರೆ ಹೇಗಿರುತ್ತೆ ಯೋಚಿಸಿ. ತಾಯಿ ತಂದೆ ಆಗೋದನ್ನ ಅನುಭವಿಸೋದು ಹಾಗೂ ಆದಮೇಲೆ ಆ ಜವಾಬ್ದಾರಿ ಹೊರುವಾಗ ಮಗು ಹಾಗೂ ತಂದೆ ತಾಯಿ ಸಂಭಂದ ಚೆನ್ನಾಗ್ ಇರಬೇಕ್. They should enjoy those moments ತಮಗಾಗಿ ಸಮಾಜದ ಬಾಯಿ ಮುಚ್ಚಲು ಅಲ್ಲಾ.  ಯಾಕಂದ್ರೆ ಆ ಕ್ಷಣ ಮತ್ತೆ ಬರಲ್ಲಾ ಆಲ್ವಾ. ಮಗು ಆದರೆ ಸರಿ ಹೋಗುತ್ತೆ ಅಂತ ಪುಕ್ಕಟೆ ಸಲಹೆ ನೀಡಿ ಮಗು ಭವಿಷ್ಯದ ಮೇಲೆ ಏನಕ್ಕೆ experiment ಮಾಡ್ತಿರಾ. ಗಂಡ ಹೆಂಡತಿ ಪ್ರೀತಿ ಯಿಂದ ಇದ್ದು ಆ ತಾಯ್ತನದ ಸುಖ ಅನುಭವಿಸುವ ಮಾತೇ ಬೇರೆ.

ಒತ್ತಿ ಯಾಕೆ ಹೇಳ್ತಾ ಇದ್ದೀನಿ ಅಂದರೆ ನಾ ಸಣ್ಣ ಊರಿಂದ ಬಂದವಳು. ಮದುವೆ ಯಿಂದ ಹಿಡಿದು ಮಗು ತನಕ Mentally
Prepare ಮಾಡದೇ  ಜವಾಬ್ದಾರಿ ತಗೋ ಅಂತ ಹಿಂಸೆ ಕೊಟ್ಟಿರೋದು ನೋಡಿರುವೆ, ಸಮಾಜಕ್ಕಾಗಿ ವರ್ಷ ದಲ್ಲಿ ಮಗು ಆಗಿಲ್ಲಾ ಅಂತ ಚಿಕ್ಕ ವಯಸ್ಸಿಗೇ ಚಿಂತೆ ಮಾಡಿದ್ದು ಕೂಡ ಕಂಡಿರುವೆ . ಇನ್ನೂ ಯಾರೊಂದಿಗೂ ನನ್ನ ಮುಂದೆ ಹಾಗಾಗಲು ನಾ ಬಿಡಲ್ಲಾ ಎಂದು ಪಣ ತೊಟ್ಟೆ. ನನ್ನಂತ Educate ಗೆ Educated ಜನ ಮದುವೆ ಆದ ಕೂಡಲೇ ಪ್ರಶ್ನೆ ಶುರು ಮಾಡಿದಾಗ ಅವರ ಸ್ತಿತಿ ಅರ್ಥವಾಗಿ ನೆನಪಾಗಿ ಹೇಳುತ್ತಿರುವೆ.

              **********************   ಅಧ್ಯಾಯ  ಮುಕ್ತಾಯ  ***********************


 ಹೊಸ ಯುಗದ ಆರಂಭ (New Era )

ಗರ್ಭಿಣಿ ಅಂತಾನೋ ಮಗು ಆಯ್ತು ಅಂತಾನೋ ವಿಷಯ ಸಿಗೋ ತನ ವಿಶೇಷ ಕೇಳಿದ್ರು ಸರಿ.  ಅದಾದ್ ನಮ್ಮ Life ಬಗ್ಗೆ ಜನ ಏನ್ ವಿಶೇಷ ಅಂತ ಕೇಳೋ ಸಮಯ ಬರೋದು ಹೌದಾ. ನಾವು ಮಗು ವಾಗಿ ಹುಟ್ಟಿದಾಗ ನಾವು ಮಾಡಿದ್ದೆಲ್ಲಾ ವಿಶೇಷ ಕೊನೆಗೆ ತಾಯಿ ಅಥವಾ ತಂದೆ ಆಗುವ ಆದ ವಿಷಯ ತಿಳಿಸುವ ತನಕ ನಿಮ್ಮದೇನು ವಿಶೇಷ ಎನ್ನೋ ಪ್ರಶ್ನೆ . ಅಲ್ಲಿಂದ ನಮ್ಮನ್ನು Pamper ಮಾಡುವ ದಿನ ಹೋಗಿ ನಮ್ಮ ಮಕ್ಕಳನ್ನು pamper ಮಾಡುವ ಜವಾಬ್ದಾರಿ ಹೊರುವ ದಿನಗಳು ಆರಂಭ.

ಒಂದು Cycle ಮುಗಿದು ಇನ್ನೊಂದು ಹೊಸ ಸುತ್ತಿಗೆ ಹೊಸ Role ನೊಂದಿಗೆ ಪಾದಾರ್ಪಣೆ ಹಾಗೂ ಮತ್ತದೇ ಪ್ರಶ್ನೆ  "ಏನು ವಿಶೇಷ ಎಂದು ನಮ್ಮ ಮಕ್ಕಳಿಗೆ ಬೇರೆಯವರಿಗೆ ಕೇಳುವ ಸರದಿ ನಮ್ಮದಾಗುತ್ತೆ :) ಅದಕ್ಕೆ ಈಗಲೇ ಜನ ಕೇಳೋದನ್ನ ಸ್ವಲ್ಪಾ ಆದ್ರೂ Enjoy ಮಾಡಿ ನಾಳೆ ಕೇಳಿ ಅಂದ್ರೂ ಯಾರೂ ಕೇಳೋಕೆ ಬರೋಲ್ಲಾ :P

ಇದು ಕೇವಲ ನನ್ನ ಕಥೆಯಲ್ಲಾ ನಮ್ಮೆಲ್ಲರ ಕಥೆ and This is Life ... ಅಲ್ವಾ ... ??? (ಸ್ವಲ್ಪ ಪ್ರಾಸ ಬದ್ಧ ವಾಗಿ ಓದಿ )


     
**********************   ಅಧ್ಯಾಯ  ಮುಕ್ತಾಯವೋ ಆರಂಭವೋ ***********************


Thanks to all those people who saw my childhood as special, My important days as Special and Special Thanks to those who asked what is Special :D and made me to think and inspired me to write this article.


 It was lengthy and complicated but still I hope you all understood my Point.

See you in my next,

Till then Tell me

ಏನು ವಿಶೇಷ ;)