Monday, April 8, 2013

ನಾಚಿಕೆ ಪಡಬೇಕೆ ಇಲ್ಲಾ ಅಸಹ್ಯವೇ ???




ಬಹು ವರ್ಷಗಳ ಹಿಂದೆ ಯಾವುದೋ ಹಿಂದಿ ಸಿನೆಮಾ ನೋಡಿದಾಗ ಗೊತ್ತಾಯಿತು. ಕೊಲೆ ಮಾಡಿದರೆ ೧೪ ವರ್ಷ, ಬಲಾತ್ಕಾರ ಮಾಡಿದರೆ ೭ ವರ್ಷ ಸಜೆ ಎಂದು. I was shocked. ಅಲ್ಲಾರೀ ಎಷ್ಟೇ ಒದ್ದಾಡಿಸಿ ಕ್ರೂರವಾಗಿ ಸಾಯಿಸಿದರೂ ಕೂಡ ಸತ್ತ ಅಂದರೆ ಸತ್ತ ತಾನೆ ಅಲ್ಲಿಗೆ ಕಥೆ ಮುಗಿಯಿತು ಅದಕ್ಕೇ ೧೪ ವರ್ಷ ಶಿಕ್ಷೆ ಕೊಡೋದಾದ್ರೆ, ಬಲಾತ್ಕಾರ ಮಾಡಿ ಒಂದು ಹುಡುಗಿಯ ಜೀವನ ವನ್ನು ಬದುಕಿದರೂ ಸತ್ತ ಹೆಣ ದಂತೆ ಮಾಡಿ ಬಿಡುವ ಪಾಪಿ ಗಳು ಕೊಲೆಗಡುಕರಿಗಿಂತ ಅತ್ತತ್ತ ಅಲ್ಲವೇ ??? ಅಂತವರಿಗೆ ಕೇವಲ ೭ ವರ್ಷ ಸಜೆ ಯ ಕಾನೂನು ಮಾಡಿದಾರೆಂದರೆ ಅವರೆಲ್ಲಾ ಮನುಷ್ಯರೋ ಇಲ್ಲಾ ಮೃಗಗಳೊ ತಿಳಿಯುತ್ತಿಲ್ಲಾ. 

ಅಲ್ಲಾ  ಬಲಾತ್ಕಾರ ದ ನಂತರ ಒಂದು ಹುಡುಗಿ ದೈಹಿಕವಾಗಿ ಮಾನಸಿಕವಾಗಿ ತತ್ತರಿಸಿ ಹೋಗುತ್ತಾಳೆ ಅದರ ಜೊತೆಗೆ ಸಮಾಜ ನೋಡುವ ದೃಷ್ಟಿ ಬದಲಾಗಿ ಹೊರಗೆ ಕಾಲಿಡುವುದೇ ಕಷ್ಟವಾಗಿ ಬದುಕು ನರಕ ವಾಗಿ ನರುಳುವಂತೆ ಆಗುತ್ತೆ. ಆಗ ತಿನ್ನುವ ನೋವಿಗೆ ಸರಿಸಮಾನವೇ ಸತ್ತು ಮಣ್ಣಲ್ಲಿ ಹೋಗುವುದು. ಜೀವಂತ ಹೆಣ ಸತ್ತ ಹೆಣಕ್ಕಿಂತಲೂ ಹೆಚ್ಚು ನೋವು ಕೊಡುವಂತಹುದು. ಹಾಗಿರುವಾಗ ಅದು ಹೇಗೆ ಆ ಕ್ರೂರಿಗಳಿಗೆ ಕೇವಲ ೭ ವರ್ಷದ ಶಿಕ್ಷೆ ಸಾಕು ಅಂತ ನಿರ್ಧರಿಸೋಕೆ ಮನಸಾದ್ರು ಹೇಗೆ ಬಂತೊ. ಛೆ, ನೆನಸಿದರೆ ನಾಚಿಕೆ ಆಗುತ್ತೆ ಅಂತವರ ಬಗ್ಗೆ.

ಜೈಲು ಶಿಕ್ಷೆ ಕೊಡೋದೇ ಅಷ್ಟು ಕಡಿಮೆ, ಅದರಲ್ಲಿ chew gum ಥರ Court ನಲ್ಲಿ Case ನ ಎಳೆದು ಎಳೆದು, Court ನಲ್ಲಿ ಅಸಂಬಧ್ಧ ಪ್ರಶ್ನೆ ಗಳನ್ನು ಕೇಳಿ ಬಲಾತ್ಕಾರದ ಆಘಾತ ದೊಂದಿಗೆ ಈ ನೋವು ಅವಮಾನ ವನ್ನೂ ಎದುರಿಸುವಂತೆ ನರಲಾಡಿಸಿ ನ್ಯಾಯ ದೊರಕಿಸುವ ಹೊತ್ತಿಗೆ ಚಪ್ಪಲಿ ಸವೆದು ಹಣ - ಮರ್ಯಾದೆ ಎರಡನ್ನೂ ಕಳೆದು ಕೊಂಡು ಹಣ್ಣು ಹಣ್ಣು ಮುದುಕರಾಗಿ ಹೋಗಿರುತ್ತಾರೆ; ಆದರೂ ನ್ಯಾಯ ಸಿಗುವುದು ದುಸ್ತರವೆ  ... :( ಅಂತಹದರಲ್ಲಿ ಸಿಗುವ ನ್ಯಾಯಕ್ಕೆ ಇಷ್ಟು ಮಾತ್ರ ಶಿಕ್ಷೆಯೇ?

 ಈಗ  ದೆಹಲಿ ಯಲ್ಲಿ ನಡೆದ Gang-Rape ಪ್ರಕರಣ ನಮ್ಮೆಲ್ಲರಲ್ಲೂ ಅಡಗಿದ್ದ ರೋಷ ವನ್ನು ಹೊರ ತೆಗೆದಿದೆ. ಇನ್ನು ಮುಂದಾದರೂ ನ್ಯಾಯದ ಕಣ್ಣು ತೆರೆಯಲಿ - ನಮ್ಮ ದೇಶದಲ್ಲಿ ಕಠಿಣ ಶಿಕ್ಷೆ ಬರಲಿ, ಜನರಲ್ಲಿ ನೈತಿಕತೆಯ ಮಟ್ಟ ಹೆಚ್ಚಾಗಲಿ ಎಂದು ಆಶಿಸುತ್ತಾ , ಜಗತ್ತಿನ ಸುಧಾರಣೆಗೆ ನನ್ನ ಪಾತ್ರವೂ ಇರುತ್ತದೆಂದು ಆ ಜವಾಬ್ದಾರಿ ಯಲ್ಲಿ ಸಹ ಭಾಗಿ ಆಗಿರುವೆನು ಎನ್ನುವ ಮಾತಿನೊಂದಿಗೆ ಬೀಳ್ಕೊಡುವೆ. 

No comments:

Post a Comment