ससरिया काल Friends, Every time I write for Myself as well as for friends, but this time I just want to write for Myself. Through this post I want to get connected with each and every thing which came into my Life and want to re-collect all kinds of moments which touched me, taught me and turned me. We get very less opportunity to think on our interests or about our self so here I have got a chance to have fun with myself in a different way.
Vidya this line is for you " I was just imagining while thinking about this topic that You are sitting/standing (U know it right ? ;) why these two) in front of me and we are discussing on this topic, you are giving your comments and by looking at your comment I am digging more and more on this Subject. Really some time you are a true inspiration for many of my thoughts and articles.I Miss you and our midnight talks Bucket :P :D "
ಮದುವೆಯ ಒಂದು ತಿಂಗಳು ಮುಂಚೆ ಸೆಪ್ಟೆಂಬರ್ ೨೨, ೨೦೧೨
. ನಿಟ್ಟೂರು ಬಸ್ ನಲ್ಲಿ ಕೂತಾಗ ಒಂದು ಯೋಚನೆ ಬಂದಿತು. ನಾ ಇದ್ದದ್ದು '
ಮಾ'ನ್ವಿ ಲಿ ನಂತರ '
M'CA ಮಾಡಿ '
ಮಂ'ಗಳೂರಿನ '
ಮಂ'ಗಳಾದೇವಿ ದೇವಸ್ಥಾನದ ಬಳಿ '
ಮಂ'ಕಿ stand ಹತ್ತಿರ ಇದ್ದ ಅಕ್ಕನ ಮನೆಗೆ ಬಂದೆ. ನಂತರ ಕೆಲಸ ಮಾಡಲು '
ಮ'ಣಿಪಾಲ ಕ್ಕೆ ಹೋದೆ. ಈಗ 'ಮ'ದುವೆ ಆಗಿ ಮೈಸೂರು ಹೋಗ್ತಾ ಇದೀನಿ. ಅರ್ರೇ ... ಎಲ್ಲಾನೂ '
ಮ' ನೇ :) ನನಗೂ ಈ '
ಮ' ಗೂ ಎಷ್ಟೊಂದು ನಂಟು ಇದ್ಯಲ್ಲಾ ಅನ್ನಿಸ್ತು.
ಆಗಲೇ ಪಟ್ಟನೆ ಕೈಯಲ್ಲಿದ್ದ Mobile ಅನ್ನು ತೆಗೆದು list ಮಾಡಲು ಶುರು ಮಾಡಿದೆ. ಅಬ್ಬಾ !!! ಇಷ್ಟೊಂದ್ ಉಂಟು ನಂಟು ಅಂತ ಆ ಪಟ್ಟಿ ನೋಡಿದಾಗಲೇ ಗೊತ್ತಾಗಿದ್ರೀ ಯಪ್ಪಾ. ಉಫ್ ನನ್ನ
ಮಾತಿನ ಮೇಲೆ ನಂಬಿಕೆ ಇಲ್ಲಲಾ ??? ನೀವೇ ನೋಡಿ...
ನಾ ನನ್ನ Parents ಗೆ ಎರಡನೇ '
ಮ'ಗಳು - '
ಮು'ದ್ದಿನ ಮಗಳು. ನಾ ಹುಟ್ಟಿದ್ದು '
ಮಾ'ನ್ವಿ ಲಿ, ತುಂಬಾ ಇಷ್ಟ ಪಡೋ ಜಾಗ ನನ್ನ '
ಮ'ನೆ. '
ಮಾ'ತು ಅಂದರೆ ಜೀವ. ಅದಕ್ಕೆ ಜೊತೆಯಾಗೇ ಇರುತ್ತೆ ನನ್ನ '
M'obile. 'ಮ'ಳೆ ಯಲ್ಲಿ ನೆನೆಯೋದು ಅಂದರೆ ಎಲ್ಲಿಲ್ಲದ ಖುಷಿ. ಶಾಲೆಯಲ್ಲಿ Aug 15 - Jan 26 ಕ್ಕೆ ತಪ್ಪದೆ '
ಮ'ಲ್ಲಿಗೆ
ಮುಡಿಯೋದು ಏನೋ
ಮುದ ನೀಡೋದು.'
ಮ'ಣ್ಣಲ್ಲಿ ಈಗಲೂ ಆಟ ಆಡಲು ಇಷ್ಟ ಪಡೋ ನಾನು '
ಮೆ'ಹೆಂದಿ ಪರಿಮಳ ದಲ್ಲಿ ಮೈ ಮರೆತು ಬಿಡೋಳು ;) Life ನ ಪ್ರತಿ ಕ್ಷಣ '
ಮ'ಜಾ ಮಾಡಬೇಕು ಅನ್ಕೊಂಡು ಬದುಕೋಳು ; '
ಮಾ'ಡಬೇಕು ಅಂದರೆ '
ಮಾ'ಡಲೇ ಬೇಕು ಅನ್ನೋದು ನನ್ನ ಸ್ವಭಾವ.
ತಲೆ ಗಿಂತ '
ಮ'ನಸ್ಸಿನ ಮಾತು ಕೇಳೋ ನಾನು ತುಂಬಾ ಇಷ್ಟ ಪಡುವ ಪ್ರಾಣಿ '
ಮಂ'ಗ :). ಎಲ್ಲರೂ ಹೇಳೋ ಹಾಗೆ ನನಗೆ '
ಮ'ರೆವು ಜಾಸ್ತಿ :P ನಾ ಮರೆತೇ ಹೊಗೋ ಶಬ್ದ '
ಮೆ'ಲ್ಲ....ಗೆ -'
ಮೆ'ತ್ತ...ಗೆ; ಮಾಡಬೇಕು-ಮಾತಾಡಬೇಕು ಎನ್ನೋದು :D ಇಷ್ಟ ಆಗದೆ ಕಷ್ಟ ಪಡೋ ಹಾಗೆ ಮಾಡೋದು '
ಮುಂ'ಜಾನೆ ನಿದ್ದೆ ಯಿಂದ ಏಳೋದು; ಯಾಕಂದ್ರೆ ನನಗೆ '
ಮ'ಲಗೋದು ಅಂದರೆ ಧ್ಯಾನದಲ್ಲಿ ಸ್ವರ್ಗಕ್ಕೆ ಹೋದ ಹಾಗೆ '
ಮ'ಹಾ ಜನಗಳೆ ;) ಆದರೂ ಇಷ್ಟ ; ನೋಡಲು-ಅನುಭವಿಸಲು ಆ ಮುಂಜಾವಿನ '
ಮಂ'ಜು.
ಊಟದಲ್ಲಿ '
ಮೊ'ಸರು '
ಮ'ಜ್ಜಿಗೆ ಎಷ್ಟಿದ್ದರೂ ಸಾಲಲ್ಲಾ ಅಂತ ಜೀವ ಹೇಳಿದ್ರೆ ... ಓದೋದ್ರಲ್ಲಿ ನನ್ನ ಜೀವ ಹಿಂಡತಾ ಇದ್ದದ್ದು '
ಮ'ಗ್ಗಿ. ಒಟ್ಟಿನಲ್ಲಿ ಈ English ನಲ್ಲಿ ಹೇಳೋ '
M' aths :( ಯಾವಾಗಲೂ ಎಮ್ಮೆ ಎಂದು ತಮಾಷೆ ಮಾಡೋಳು ; ಅದಕ್ಕೆ ಖುದ್ '
M '.A ಮಾಡಲು ಮನಸಿಲ್ಲದೇ ಇರೋ ನನ್ನ ... ನನ್ನ ಬಗ್ಗೆ ಸ್ವತಃ ನಾನೇ ತುಂಬಾ ಹೆಮ್ಮೆ ಪಡೋ ಹಾಗೆ ಮಾಡಿದ್ದು ... ಇದೇ Maths ನ Life ನಲ್ಲಿ Re-Entry ಕೊಡಿಸಿ Life ನೇ ಬದಲಾಯಿಸಿದ್ದು '
M'.C.A
M.C.A ಆದಮೇಲೆ Life Transformation ಗಾಗಿ ಅಕ್ಕ,ಭಾವ,ಪಿಂಕು ಜೊತೆ '
ಮಂ'ಗಳೂರಿನ '
ಮಂ'ಗಳಾದೇವಿಯ '
ಮಂ'ಕಿ ಸ್ಟ್ಯಾಂಡ್ ನ ಹತ್ತಿರ ಮನೆ, ಅಲ್ಲಿಯೇ ಪರಿಚಯವಾದ, ಪರಿಚಯದಿಂದ ಸ್ನೇಹ, ಸ್ನೇಹದಿಂದ ಪ್ರೀತಿ ಯಾಗಿ ಉಳಿದವಳು '
ಮ'ಮತಾ ಅನ್ನುವ ತರಲೆ :P ನಂತರ ಹೆಸರಿಗಷ್ಟೇ ಆದರೂ ಮೊದಲು ಕೆಲಸ ಕೊಟ್ಟ ಊರು '
ಮ'ಣಿಪಾಲ.
ಯಾರ '
ಮು'ಲಾಜಿಗೂ ಬೀಳೋಕೆ ಇಷ್ಟ ಪಡದ ನನ್ನ '
M's ನಿಂದ '
M'rs ಮಾಡಲು ಅಕ್ಷಯ್ ಕೊಡಕಣಿ Hero ಥರ Entry ಕೊಟ್ಟ ಮೇಲೆ ಇಬ್ಬರ ಸ್ವಾತಂತ್ರ್ಯ ಹರಣ ಮಾಡಲು '
ಮ'ದುವೆ :P ಅದಕಾಗಿ ಬೇಕೇ ಬೇಕಲ್ವಾ '
ಮಂ'ಟಪ. ಅದೂ ಸಿದ್ಧವಾಗಿ ಕಾರ್ಯ ಮುಗಿದು ಅಪ್ಪ ಅಮ್ಮ ಕೈ ತೊಳೆದ ಮೇಲೆ ದಿಬ್ಬಣ ದೊಂದಿಗೆ ಹೋದ ಊರು '
ಮಿ'ರ್ಜಾನ್ ಆದರೆ ಅವರ ಅಪ್ಪ ಅಮ್ಮ ಇರೋ ಊರು '
ಮು'ಧೋಳ್. ಎಲ್ಲಾ ಕಡೆ ತಿರುಗಿ ಕೊನೆಗೆ ಈಗ ಇರುವ ಊರು '
ಮೈ'ಸೂರು.
ಮದುವೆ ತಾನಲ್ಲದೆ ತನ್ನ ಜೊತೆ ಇನ್ನೂ ಹತ್ತು ಹಲವು 'ಮ' ತರುತ್ತೆ. ಅದರಲ್ಲಿ ಮೊದಲು '
ಮ'ಕ್ಕಳು Entry ಕೊಟ್ರೆ ಅದರಲ್ಲೂ by chance ಗಂಡಾದ್ರೆ ನಂತರ ಅಂಟಿಕೊಂಡೇ ಬರೋದು '
ಮುಂ'ಜಿ. ಅದೃಷ್ಟಕ್ಕೆ ಹೆಣ್ಣಾದ್ರೆ '
ಮ'ಗಳು - ಗಂಡಾದರೆ '
ಮ'ಗ. Next Jump ಹೊಡೆದು ಮುಂದೆ ಸೇರುತ್ತೆ '
ಮೊ'ಮ್ಮಕ್ಕಳು.
ಬದುಕು ಎಷ್ಟೇ ಮುಂದು ಹೋಗಲಿ, ಇನ್ನೂ ಎಷ್ಟೇ 'ಮ' ಬದುಕಲ್ಲಿ ಇರಲಿ- ಬರಲಿ. I just want to say
I 'M'iss 'M'y 'M'anglore
ಈಗ 'ಮ' ನ ಜಪ ಸಾಕು ; ಮುಂದಿನ Post ನಲ್ಲಿ ಮತ್ತೆ ಮರಳಿ ಬರುವೆ - ನಿಮ್ಮನ್ನೆಲ್ಲಾ ಮತ್ತೆ ಸಿಗಲು.
ಅಲ್ಲಿವರೆಗೆ ...
'ಮ'ಸ್ತ್ 'ಮ'ಜಾ 'ಮಾ'ಡಿ
दसवी दानिया Guys ;)