Monday, April 8, 2013

ನಾಚಿಕೆ ಪಡಬೇಕೆ ಇಲ್ಲಾ ಅಸಹ್ಯವೇ ???




ಬಹು ವರ್ಷಗಳ ಹಿಂದೆ ಯಾವುದೋ ಹಿಂದಿ ಸಿನೆಮಾ ನೋಡಿದಾಗ ಗೊತ್ತಾಯಿತು. ಕೊಲೆ ಮಾಡಿದರೆ ೧೪ ವರ್ಷ, ಬಲಾತ್ಕಾರ ಮಾಡಿದರೆ ೭ ವರ್ಷ ಸಜೆ ಎಂದು. I was shocked. ಅಲ್ಲಾರೀ ಎಷ್ಟೇ ಒದ್ದಾಡಿಸಿ ಕ್ರೂರವಾಗಿ ಸಾಯಿಸಿದರೂ ಕೂಡ ಸತ್ತ ಅಂದರೆ ಸತ್ತ ತಾನೆ ಅಲ್ಲಿಗೆ ಕಥೆ ಮುಗಿಯಿತು ಅದಕ್ಕೇ ೧೪ ವರ್ಷ ಶಿಕ್ಷೆ ಕೊಡೋದಾದ್ರೆ, ಬಲಾತ್ಕಾರ ಮಾಡಿ ಒಂದು ಹುಡುಗಿಯ ಜೀವನ ವನ್ನು ಬದುಕಿದರೂ ಸತ್ತ ಹೆಣ ದಂತೆ ಮಾಡಿ ಬಿಡುವ ಪಾಪಿ ಗಳು ಕೊಲೆಗಡುಕರಿಗಿಂತ ಅತ್ತತ್ತ ಅಲ್ಲವೇ ??? ಅಂತವರಿಗೆ ಕೇವಲ ೭ ವರ್ಷ ಸಜೆ ಯ ಕಾನೂನು ಮಾಡಿದಾರೆಂದರೆ ಅವರೆಲ್ಲಾ ಮನುಷ್ಯರೋ ಇಲ್ಲಾ ಮೃಗಗಳೊ ತಿಳಿಯುತ್ತಿಲ್ಲಾ. 

ಅಲ್ಲಾ  ಬಲಾತ್ಕಾರ ದ ನಂತರ ಒಂದು ಹುಡುಗಿ ದೈಹಿಕವಾಗಿ ಮಾನಸಿಕವಾಗಿ ತತ್ತರಿಸಿ ಹೋಗುತ್ತಾಳೆ ಅದರ ಜೊತೆಗೆ ಸಮಾಜ ನೋಡುವ ದೃಷ್ಟಿ ಬದಲಾಗಿ ಹೊರಗೆ ಕಾಲಿಡುವುದೇ ಕಷ್ಟವಾಗಿ ಬದುಕು ನರಕ ವಾಗಿ ನರುಳುವಂತೆ ಆಗುತ್ತೆ. ಆಗ ತಿನ್ನುವ ನೋವಿಗೆ ಸರಿಸಮಾನವೇ ಸತ್ತು ಮಣ್ಣಲ್ಲಿ ಹೋಗುವುದು. ಜೀವಂತ ಹೆಣ ಸತ್ತ ಹೆಣಕ್ಕಿಂತಲೂ ಹೆಚ್ಚು ನೋವು ಕೊಡುವಂತಹುದು. ಹಾಗಿರುವಾಗ ಅದು ಹೇಗೆ ಆ ಕ್ರೂರಿಗಳಿಗೆ ಕೇವಲ ೭ ವರ್ಷದ ಶಿಕ್ಷೆ ಸಾಕು ಅಂತ ನಿರ್ಧರಿಸೋಕೆ ಮನಸಾದ್ರು ಹೇಗೆ ಬಂತೊ. ಛೆ, ನೆನಸಿದರೆ ನಾಚಿಕೆ ಆಗುತ್ತೆ ಅಂತವರ ಬಗ್ಗೆ.

ಜೈಲು ಶಿಕ್ಷೆ ಕೊಡೋದೇ ಅಷ್ಟು ಕಡಿಮೆ, ಅದರಲ್ಲಿ chew gum ಥರ Court ನಲ್ಲಿ Case ನ ಎಳೆದು ಎಳೆದು, Court ನಲ್ಲಿ ಅಸಂಬಧ್ಧ ಪ್ರಶ್ನೆ ಗಳನ್ನು ಕೇಳಿ ಬಲಾತ್ಕಾರದ ಆಘಾತ ದೊಂದಿಗೆ ಈ ನೋವು ಅವಮಾನ ವನ್ನೂ ಎದುರಿಸುವಂತೆ ನರಲಾಡಿಸಿ ನ್ಯಾಯ ದೊರಕಿಸುವ ಹೊತ್ತಿಗೆ ಚಪ್ಪಲಿ ಸವೆದು ಹಣ - ಮರ್ಯಾದೆ ಎರಡನ್ನೂ ಕಳೆದು ಕೊಂಡು ಹಣ್ಣು ಹಣ್ಣು ಮುದುಕರಾಗಿ ಹೋಗಿರುತ್ತಾರೆ; ಆದರೂ ನ್ಯಾಯ ಸಿಗುವುದು ದುಸ್ತರವೆ  ... :( ಅಂತಹದರಲ್ಲಿ ಸಿಗುವ ನ್ಯಾಯಕ್ಕೆ ಇಷ್ಟು ಮಾತ್ರ ಶಿಕ್ಷೆಯೇ?

 ಈಗ  ದೆಹಲಿ ಯಲ್ಲಿ ನಡೆದ Gang-Rape ಪ್ರಕರಣ ನಮ್ಮೆಲ್ಲರಲ್ಲೂ ಅಡಗಿದ್ದ ರೋಷ ವನ್ನು ಹೊರ ತೆಗೆದಿದೆ. ಇನ್ನು ಮುಂದಾದರೂ ನ್ಯಾಯದ ಕಣ್ಣು ತೆರೆಯಲಿ - ನಮ್ಮ ದೇಶದಲ್ಲಿ ಕಠಿಣ ಶಿಕ್ಷೆ ಬರಲಿ, ಜನರಲ್ಲಿ ನೈತಿಕತೆಯ ಮಟ್ಟ ಹೆಚ್ಚಾಗಲಿ ಎಂದು ಆಶಿಸುತ್ತಾ , ಜಗತ್ತಿನ ಸುಧಾರಣೆಗೆ ನನ್ನ ಪಾತ್ರವೂ ಇರುತ್ತದೆಂದು ಆ ಜವಾಬ್ದಾರಿ ಯಲ್ಲಿ ಸಹ ಭಾಗಿ ಆಗಿರುವೆನು ಎನ್ನುವ ಮಾತಿನೊಂದಿಗೆ ಬೀಳ್ಕೊಡುವೆ. 

ಮಾತು ಮೌನವಾದಾಗ


Hi Hello How are you खाना खाके जाना हां :D friends, After a long time my mind made to write this post. Here I have written it in Kannada, my friends who can't read kannada for them I have written the meaning. 

This post is dedicated to all those who are introvert and have suppressed there feelings in there heart.




March 27, 2013:

Stress के नाम में पीते है लोग Whisky, Vodka, Rum...
लेकिन हम तो बैठ के केहते है SO HUM;
मेहेंगा शराब का नशा भी सुभा की आँख खुलते ही उतर जाता है,
लेकिन हमारा Free and Healthy SO HUM  का जो नशा है 
सिर्फ बढ़ने का नाम  है उतर ने का  नहीं । 


Meaning:  In the name of Stress and Status people take drinks which is actually a habit;  but we just sit and do So Hum Kriya. Even after taking most expensive alcohol that kick won't remain when you wake up in the morning, but the kick which So Hum gives it won't take the name to get down. 

So better to go for permanent solution instead of temporary solution which is just waste of money, time and not good for health and relationship.


April 4, 2013:

ಮಾಡಿದಷ್ಟು ಸಾಲದು ,
ಹೇಳಿದಷ್ಟು ಸಾಲದು ,
ಸಂಸಾರದ ಆಸಕ್ತಿ ಯ ಹೇಳ ಹೊರಟರೆ ಆ ಮನ ನಂಬದು ,
ಆಸಕ್ತಿ ನಿರಾಸಕ್ತಿ ಎಲ್ಲರದು ಬೇರೆ ಹಾಗೆಂದು ಅದು ಸನ್ಯಾಸ ವಾಗದು,
ಅದ ಎಷ್ಟು ವಿಧದಲ್ಲಿ ಹೇಳಿದರೂ ಆ ಹೃದಯ ಕೇಳದು,
ಎಷ್ಟು ಬಾರಿ ತೋರಿಸಿದರೂ ಆ ಕಣ್ಣು ನಂಬದು,
ಮುರುಟಿ ಹೋಗುತಿದೆ ಮನ ಆದರೂ ಯಾರಿಗೂ ಕೇಳದು,
ಇಷ್ಟೊಂದು ನೋವು ಇನ್ನಾರಿಗೂ ಸಲ್ಲದು,
ಮಾತಿನಿಂದ ಹರಡಿರುವ ನೋವ ಈ ಹೃದಯ ವೊಂದೆ ಬಲ್ಲದು,
ನೋವಲ್ಲಿ ಸುಟ್ಟರೂ ಆತ್ಮವ ಅದು ಕೊಲ್ಲದು ಕೊಲ್ಲಲೊಲ್ಲದು.  



Meaning:  

Don't get satisfied even after doing many things, don't get convinced even after telling many times, mind don't trust that I have interest in this relationship, likes/dislikes may be different but it doesn't mean that I don't enjoy Life, even after telling in many ways that heart is not listening, even after showing many times those eyes are not ready to believe and struck in his own beliefs.

 My heart is getting crushed but still no one is able to hear, no one should bare this pain, the pain which get spread through words only this Heart can feel, even it is burning by pain but it is not ready to kill my soul and it can't kill my soul.


April 6, 2013:

ಅವರಲ್ಲಿ ಬಾರದಿರುವ ಯೋಚನೆ ಯ ಹಿಂದೆ ಓಡುವೆಯೇಕೆ,
ಹಿಂದೆ ಸರಿಯುವ ಬದಲು ಮುಂದೆ ಹೋಗಿ ಸೋಲುವೆ  ಏಕೆ,
ಮತ್ತೆ ಮತ್ತೆ ಕಾಡುವವು ನಿನಗೆ, ಸುಮ್ಮನೆ ಬಾಡುವೆಯೇಕೆ,
ಇನ್ನರಿಲ್ಲಾ ಜೊತೆಗೆ ಸುಮ್ಮನೆ ಒಬ್ಬಳೇ ಹೋಗುವೆ ಏಕೆ,
ಮತ್ತೆ ಮತ್ತೆ ಮನಸ ನೋಯಿಸುವೆಯೇಕೆ,
ಸುಮ್ಮನೆ ಕಂಬನಿ ಸುರಿಸುವೆ ಏಕೆ,
ದೇವರೇ ಇರುವಾಗ ನಿನಗೆ ಈ ಗುದ್ದಾಟವೆಲ್ಲಾ ಬೇಕೇ ?
ಸುಮ್ಮನೆ ನಿನ್ನೊಳಗೆ ನೀ ಇರಬಾರದೇಕೆ,
ಒಳ ಮನವ ನೋಡಲು ಮತ್ತೊಮ್ಮೆ ಕಣ್ಮುಚ್ಚಿ ಬರಬಾರದೇಕೆ ??? 




Meaning: 

Here Mind is telling you why every time you want to get bond and want to get pain when you know you can't change people mind.Don't trouble yourself by trying hard, when god is with you is there any need to fight ? why you need to bother. Just Be with yourself and by closing your eyes why don't you come to look in to yourself which we call meditation.


PU (2003)+ MCA (2008) :

ಒಮ್ಮೆ ಒಡೆದರೆ ಈ ಮನವು ಹಾಲಿನಂತೆ,
ಕೂಡದು ಅದೆಂದು ಸೀಳಿದ ಕನ್ನಡಿಯಂತೆ;
ಹಾಲು ಕನ್ನಡಿಯಾದರೋ ತರಬಹುದು ಇನ್ನೊಂದು,
ಒಡೆದ ಹೃದಯಗಳು ಆಗಲಾರವು ಹತ್ತಿರ ಮತ್ತೆಂದು. 



Meaning: If milk get spoil then it can't be regained like a broken mirror, we can buy other mirror or milk but once if heart get broken then it cannot come together another time.

  
April 7, 2013:

ಮಾತು ಮೌನವಾಗಲಿ,
ಮನಸು ಶಾಂತವಾಗಲಿ,
ನೆನೆಯದೆಯೇ ಎಲ್ಲವೂ ಮರೆತು ಹೋಗಲಿ,
ಮರೆಯುವ ಮುನ್ನ ನೆನಪು ಕಣ್ಣೀರಾಗದಿರಲಿ,
ಕಣ್ಣೀರ ಕಲೆಯಿಂದ ಹೃದಯ  ಒಡೆಯದಿರಲಿ,
ಒಡೆದ ನೋವಲ್ಲಿ ಮನಸು ಮುರುಟದಿರಲಿ... 


Meaning: 

Telling my mind to pray that Instead of putting words to feelings let me be silent, let my mind get calm, without remembering let forget all those bitter moments and before I forget those memories should not make me cry, with the scars of tears my heart should not break, if my heart get broken then my soul should not die in that pain.

Same Day:

ಹೇಳಿ ಹಠ ಮಾಡುವ ತನಕ ಇರುವುದು ಸಂಬಂದ,
ನಿಂತೊಡನೆ ಕಳಚಿ ಹೋಗುವುದು ಎಲ್ಲಾ ಬಂಧ,
ಎಲ್ಲಾ ಮುಗಿದಾಗ ಬೆರಳು ತೋರಿಸೋದು ನನ್ನಿಂದ-ನಿನ್ನಿಂದ,
ಅರ್ಥ ವಿದೆಯೇ ಹುಡುಕಾಟದಲಿ ತಪ್ಪಾಯ್ತು ಯಾರಿಂದ ...  



Meaning:  

Until we say and be adamant with opposite person till then relationship will remain, the moment all these things stop then all chains which are tied will get released in relationship, when everything will finish we point at others by telling its not my mistake because of him/her  everything happend , do you think is there any meaning in finding whose mistake it is...