Thursday, April 26, 2012

ಅರ್ಪಣೆ

ನನಗಿಂತಲೂ ಸುಂದರವೇ ನಿಮ್ಮ ಆ ದುಡ್ಡು ಮತ್ತು ಕಟ್ಟಡ ???


 ಕಂಡ ಕಂಡಲ್ಲಿ ಸಸ್ಯ ರಾಶಿಯ ಕಡಿವರು,
ಸಿಕ್ಕ ಸಿಕ್ಕಲ್ಲಿ ಮೂರ್ತಿಗಳ ಇಡುವರು ; 
ಗಿಡ ಮರವ ನೆಡುವ ಮನಸೊಂದು ಇವರು ಮಾಡರು,
ಅಂಧರಂತೆ ಕಡಿಯುತ್ತ  ಹೆಜ್ಜೆಯ ಇಡುತಿಹರು.

ತಿಳಿಯಲೊಲ್ಲರು  ಈ ಹಸಿರಲ್ಲೇ  ಅಡಗಿದೆ ನಿಜವಾದ ಸ್ವತ್ತು,
ಇದರ ಪರಿವಿಲ್ಲದೆ ತರುತಿಹರಲ್ಲಾ ಅದಕೆ ಕುತ್ತು, 
ಇಳಿಸ ಬೇಕಾಗಿದೆ ಈ ಜನರ ದುಡ್ಡು ಮಾಡುವ ಮತ್ತು -
ಗಿಡದ ಮೇಲೆ ಕಟ್ಟಡ ಕಟ್ಟುವ ಕಸರತ್ತು;
ಇಲ್ಲದಿರೆ ಇವರಿಗೆ ಬುಧ್ಧಿ ಬರುವ ಹೊತ್ತು,
ಹಿಚುಕಿ ಹೋಗುವುದುಂಟು ಎಷ್ಟೋ ಪೀಳಿಗೆಯ 
ಸುಂದರ ಬದುಕಿನ ಕತ್ತು. 
ಅರ್ಪಣೆ : 
ಸಿಂಧನೂರು ಹಾಗೂ ರಾಯಚೂರು ಹೋಗುವ ರಸ್ತೆಯ ಬದಿಯಲ್ಲಿ ನವಾಬನ ಕಾಲದಿಂದಲೂ ರಾರಾಜಿಸುತ್ತಿದ್ದ ... ಬಾಲ್ಯದಲ್ಲಿ ನನ್ನೊಡನೆ ಆಡಿ, ಮನಸಿಗೆ ಮುದ , ಆಡಲು ಮರದ ಅಂಟು, ತಿನ್ನಲು ಜೇನು, ಸುಸ್ತಾದಾಗ ನೆರಳನ್ನು ನೀಡಿ ಕೊನೆಗೆ  ಮನುಷ್ಯನ ಮೂಢತನಕ್ಕೆ  ಸಾಮೂಹಿಕವಾಗಿ ಬಲಿಯಾದ ನನ್ನ ಆ ಬಾಲ್ಯ ಸ್ನೇಹಿತರನ್ನು ನೆನೆಯುತ್ತ ಈ ಕವಿತೆಯ ಸಾಲುಗಳನ್ನು ಆ ಎಲ್ಲಾ ಸಾಲು ಮರಗಳಿಗೆ ಅರ್ಪಿಸುತ್ತಿದ್ದೇನೆ.




No comments:

Post a Comment