ಊಟದ ವಿಷಯ ಎಲ್ಲೋ ಅಲ್ಲಿ ನನ್ನ ವಿಷಯ ಬಂದ್ರೆ ಎಲ್ಲರಿಗೂ ನೆನಪಾಗೋದು ಒಂದೇ ಒಂದು. ಅದೇನೆಂದರೆ ಚಟ್ನಿ,ಚಟ್ನಿ and ಚಟ್ನಿ :) ಅದನ್ನ ನೋಡಿದಾಗಲೆಲ್ಲಾ ಆ ನನ್ನ ಚಿನ್ನದಂತ ಚಟ್ನಿಗೂ ನನಗೂ ಎಲ್ಲಿಲ್ಲದ ಜನ್ಮ ಜನ್ಮಾಂತರದ ಸಂಭಂದವಿರುವಂತೆ ಹೃದಯ ಮಿಡಿಯುತ್ತೆ ಕಣ್ರೀ ;)
ಹಾಸ್ಟೆಲ್ ನಲ್ಲಿ ಸಂಜೆ ಯ ಚಟ್ನಿ ರಾತ್ರಿ ಯ ಪುಳಿಯೊಗರೆ ವ್ಹಾ!! ವ್ಹಾ !! ಕೇಳ್ರಿ ಯಾರಾದ್ರೂ ತಿನ್ದೊರಿಗೆ :) ಈಗಲೂ ನೆನ್ಸಿದ್ರೆ ಬಾಯಲ್ಲಿ ನೀರು ಬರುತ್ತೆ. ಉಮ್ಮಾ . ಪ್ರೀತಿ ಮಾಡೋರಿಗೆ... ಪ್ರೀತಿ ಕುರುಡು ಅಂತ ಹೇಳ್ತಾರಲ್ವಾ ನನ್ನ ವಿಷಯದಲ್ಲೂ ಹಾಗೆ ಆಯ್ತು :( ಹೇಳ್ತೀನಿ ಕೇಳಿ ಹಾಸ್ಟೆಲ್ ನಲ್ಲಿ ನಡೆದ ನನ್ನ ಆ ಚಟ್ನಿಯ ಪ್ರಸಂಗ ...
ಆಗ ಬೇಸಿಗೆ ಸಮಯ ಕುಚಲಕ್ಕಿ ಗಂಜಿ ಜೊತೆ ನೆಂಚಿ ಕೊಳ್ಳಲು ಚಟ್ನಿ ಮಾಡೋರು, Engineering students ಗಳಿಗೆ ರಜೆ ಹಾಗೂ ಚಟ್ನಿ ತುಂಬಾ ಮಾಡಿದ್ರಿಂದ ಅಪರೂಪಕ್ಕೆ ಎಂಬುವಂತೆ ನಮಗೆ ಹಾಕಿಕೊಳ್ಳಲು ಬೇರೆ ಪದಾರ್ಥ ಗಳೊಡನೆ ಅದನ್ನು ಕೂಡ ಇಟ್ಟಿದ್ರು. ಅದನ್ನು ಕಂಡದ್ದೇ ನನ್ನ ಕಣ್ಣಲ್ಲಿ ಇರೋ ಬರೋ ನಕ್ಷತ್ರ ಗಳೆಲ್ಲಾ ಮಿಂಚತೊಡಗಿತು, ಎದೆ ಲಬ್ ಡಬ್ - ಲಬ್ ಡಬ್ ಎಂದು ಹೊಡೆಯತೊಡಗಿತು, ಖುಷಿಗೆ ಕೈ ಕಾಲು ನಡುಗತೊಡಗಿತು... ಇನ್ನೂ ಹೇಳಿದ್ರೆ ಸ್ವಲ್ಪ ಜಾಸ್ತಿ ಆಗುತ್ತೆ ಇಷ್ಟೇ ಸಾಕ್ :) ಆದ್ರೆ ನಿಜ ಹೇಳಕತಿನಿ ನಾ ಏನ್ ಹೇಳಿನೋ ಅದೆಲ್ಲಾ ಖರೆ ಆದ !!! ನೋಡಿಕಂಡ್ರಪ್ಪಾ.. ನಂಬಾರ ನಂಬಿ ಬಿಡ್ರಾರ ಬಿಡ್ರಿ ;)
ಅಂತೂ ನನ್ನ ಪಾಳಿ ಬಂತು. ಚಟ್ನಿ ಹಾಕ್ಕೊಳಕ್ಕ ಅಲ್ಲಿ table spoon ಇಟ್ಟಿದ್ರು. ಖುಷಿಲಿ ಒಂದು ಸಲ full ಚಮಚ ಹಾಕೊಂಡೆ, ಛೆ ಇದೆಲ್ಲಿ ಸಾಲುತ್ತೆ ಅಂತ ಮತ್ತೆ ವಾಟಿಲಿ (ಬಟ್ಟಲು) ಕೈ ಹಾಕಿ ಮತ್ತೊಮ್ಮೆ full ಚಮಚದಲ್ಲಿ ಹಾಕ್ಕೊಂಡೆ. ಹಾಕಿ ತಿರಗಿ ತಟ್ಟೆ ನೋಡಿದ್ದೇ ತಡ ಹೊಸದಾಗಿ ಮದುವೆಯಾದ ಮದುವಣಗಿತ್ತಿ ಥರ ನಾಚಿಕೆ ಆಯ್ತರಿ :( ಯಾಕ ??? ಹಾಕ್ವಾಗ ಧಾತ್ ಆಗ್ಲಿಲ್ಲಾ ಹಾಕ್ಕೊಂಡ್ ಆದ್ಮೇಲೆ ನೋಡ್ತೀನಿ ಇಡೀ ತಟ್ಟೇಲಿ ನನ್ನ ಪ್ರಿಯತಮ ಚಟ್ನಿ ಒಳ್ಳೆ ಗುಡ್ಡದ ಹಾಗೆ ಎದ್ದು ಕಾಣತಿದ್ದ :D ಅಯ್ಯೋ ನನ್ನ ಅವಸ್ಥೆ.
ಏನು ಮಾಡೋದು ಅಂತ ತಿಳಿಲಿಲ್ಲಾ, ಹೇಗಾದ್ರೂ ಮಾಡಿ ಎಲ್ಲರ ಕಣ್ಣಿಂದ ನನ್ನ ಚಟ್ನಿ ಯನ್ನು ಕಾಪಾಡಬೇಕಿತ್ತು, ಆಗ ಥಟ್ ಅಂತ idearia ಬಂತು ಕಣ್ರೀ :D ಏನ್ ಗೊತ್ತಾ!!! ಕಣ್ಣು ಮುಚ್ಚಾಲೆ ಆಡ್ವಾಗ ಅಡಗಲಿಕ್ಕೆ ನಾವ್ ಏನ್ ಮಾಡ್ತಿವಿ ಹೇಳಿ ? ಚಾದರ್, ಚಾಪೆ ಯಲ್ಲಿ ಅಡಗಿ ಕೂಡ್ತಿವಲ್ವಾ :) ಹಾಗೆ ನನ್ನ ಚಟ್ನಿ ನಾ ಬಿಳಿ ಅನ್ನದ ಒಳಗೆ ಹಾಕಿ ಮುಚ್ದೆ. ಆಮೇಲೆ ಊಟಕ್ ಕುಳಿತೆ. ಮಾತಾಡ್ತಾ ಮಾತಾಡ್ತಾ ಕ್ಷಣಕ್ಕೆ ಚಟ್ನಿ ಮರೆತು ಹೋಯ್ತ್ ಆಮೇಲೆ ಎಲ್ಲಿ ಇಟ್ಟಿನಿ ಅನ್ನದ್ ಅಂತೂ ಮರ್ತೆ ಹೋಯ್ತ್ :( ಊಟ ಮಾಡ್ತಾ ಮಾಡ್ತಾ ಬೊಬ್ಬೆ ಇಟ್ಟಾಗಲೇ ಗೊತ್ತಾಗಿದ್ದು ನಾ ಬಚ್ಚಿಟ್ಟ ಜಾಗ.
ಅನ್ನ ಸರಿಸಿ ನೋಡ್ತೀನಿ ಅರ್ಧದಷ್ಟು ಖಾರ ಚಟ್ನಿ ಬಾಯಲ್ಲಿ, ಈಗ ಹಾಗೆ ತೆಗ್ಡಿಟ್ರೆ ಎಲ್ಲರ್ಗೂ ಕಾಣ್ತದೆ ನಗ್ತಾರೆ ಅಂತ ಪುನಃ ಬೇಗ ಬೇಗ ಅನ್ನದಲ್ಲಿ ಮುಚ್ಚಿ ಸ್ವಲ್ಪ ಮಾತ್ರ ಉಳಿಸುವ ಅಂತ ಬೇಗ ಬೇಗ ಖಾಲಿ ಮಾಡತೊಡಗಿದೆ... ಉಫ್ಫ್ ... ಬೇಕಿತ್ತಾ ನನಗೆ ಈ ಅವಸ್ಥೆ :( ನನ್ನ ಚಟ್ನಿ ನ ತಿಂದು enjoy ಮಾಡೋದು ಒಂದು ಕಡೆ ಇರಲಿ, ಗಬ ಗಬ ತಿಂದು ಎಲ್ಲರ್ಗೂ ಕಾಣೋ ಹಾಗೆ ಸ್ವಲ್ಪ ಉಳಿಸೋ ಲೆಕ್ಕದಲ್ಲಿ ಖಾರ ನನ್ನ ನಾಲಗೆನ ಗರಗಸ ದಲ್ಲಿ ಗರ ಗರ ಅಂತ ಕೊಯ್ದ್ ಇಟ್ಟಂಗ್ ಆಗಿ ಜೀವ ೨ ಆಗಿತ್ರೀ :( ( Sound & Picture ನಿಮ್ಮ imagination ಗೆ ಬಿಟ್ಟಿದ್ದು )
ಆಸೆಯೇ ದುಃಖಕ್ಕೆ ಮೂಲ ಅಂತ ಕೇಳಿದ್ದೆ ನಿಜ ಆದರೆ ನನ್ನ ಚಟ್ನಿ ನನಗೆ ಈ ಪಾಠ ಕಲಿಸುತ್ತೆ ಅಂತ ಯಾವತ್ತು ಅಂದುಕೊಳ್ಳಿಲ್ಲಾ ಕಣ್ರೀ ಅಂದು ಕೊಳ್ಳಿಲ್ಲಾ... ಪ್ರೀತಿ ಕಲಿಸಿ ಕೊಟ್ಟ ಪಾಠ ಕಲಿತೆ ಆದ್ರೆ ಆ ಪ್ರೀತಿ ನ ಮರಿಲಿಲ್ಲಾ, ಕಡಿಮೆಯಾಗಲಿಲ್ಲಾ .. ಅದು ಇನ್ನೂ ಯುಗ ಯುಗಗಳ ವರೆಗೆ ನಮ್ಮ ಪ್ರೀತಿ ಗಾಥೆಯನ್ನು ಹೇಳುವಷ್ಟು ನನ್ನ ಅಂತರಾಳದಲ್ಲಿ ಬೇರೂರಿ ಅಮರವಾಗಿ ಹೋಗಿದೆ ರೀ ...
ನನ್ನ ಪ್ರೀತಿಯ ಓದುಗರೇ ಒಂದು ಮಾತು ಹೇಳಲಾ? ಇಂದಿನ ಈ ಚಟ್ನಿ ಪ್ರಸಂಗ ನಿಮಗಲ್ಲಾ ನನ್ನ ಪಾಲಿಗೆ ಬಂದು; ಹೊಟ್ಟೆಗೆ ಹೋದ - ಹೋಗಲಿರುವ ಚಟ್ನಿಗೆ ಅರ್ಪಿಸ್ತಾ ಇದ್ದೇನೆ, ದಯವಿಟ್ಟು ಯಾರು ಬೇಜಾರು ಮಾಡಿಕೊಳ್ಳ ಬಾರದು ನಿಮಗೆಲ್ಲರಿಗೂ ನನ್ನ ಚಟ್ನಿಯ ಮೇಲಾಣೆ.
ಹಾಗಾದ್ರೆ ನಾ ಬರ್ಲಾ...
ಇಂತಿ ನಿಮ್ಮವಳೇ ಆದ ,
ಚಟ್ನಿ ಅಭಿಮಾನಿ :)