Wednesday, July 20, 2011

ಬದುಕು


ಬದುಕಲ್ಲಿ ಏನಿದೆ ಮುಂದೆ ಮಾಡುವೆ ಎಂದು ಹೇಳಲು,
ಬಳಸಬೇಡ ಈ ಬದುಕನ್ನು ನೀ ಕೇವಲ ಕಾಯಲು,
ಯಾರು ಕೊಡುವರು ಅವಕಾಶ ; ನಿನಗೆ,  ಮತ್ತೊಮ್ಮೆ ಇಲ್ಲಿ ಬದುಕಲು.  

ಕಳೆಯಬೇಡಿರಿ ನಿಮ್ಮ ಬದುಕನ್ನು ಭಯದ ಅಡಿಯಲ್ಲಿ,
ಉಳಿಯುವುದು ಬಿಸಿಯುಸಿರೊಂದೇ ನಿಮ್ಮ ಬದುಕಿನ ಕಡೆಯಲ್ಲಿ.
 

ಬಾಳ ಹಾದಿಯಲಿ ನಲಿದು ಕುಣಿದರೆ ಕೆಲವು ಸಾರಿ,
ಕಳೆಯುವೆವು ದಿನಗಳನು ಜಗಳ, ದ್ವೇಷ, ಮೌನದಲಿ ಎಷ್ಟೋ ಬಾರಿ
ಏಕೆ ತಿಳಿಯುವುದಿಲ್ಲಾ ನಾವು...
ಸಿಗುವೆವು ಬದುಕಲ್ಲಿ  ನಾವೆಲ್ಲಾ
ಕೇವಲ ಒಂದೇ.. ಒಂದು ಸಾರಿ ಒಂದೇ  ಬಾರಿ * ಎಂದು.

ಕಳೆಯದಿರು ಈ ಸಮಯವ ಇತರರ ದ್ವೇಷಿಸಲು,
ಇರುವರು ಇಲ್ಲಿ ಹಲವರು ನಿಮ್ಮನ್ನು ಪ್ರೀತಿಸಲು,
ಇರುವಷ್ಟು ದಿನ ಕಳಿ ದಿನಗಳನು ನಿನ್ನ ಪ್ರೀತಿಸುವ ಜನರೊಡನೆ,
ಕಳಿ ನಿನ್ನ ಪ್ರತಿ ಕ್ಷಣವ ನಿನ್ನೊಡನೆ** ; ಹಂಚುತ್ತಾ ನಗು, ನಲಿವು ಹರುಷವ ಎಲ್ಲರೊಡನೆ





No comments:

Post a Comment