Thursday, December 22, 2016

Easy for Lazy ( Basic Tips before start Cooking)


Like many other girls even I hated cooking. I grown up by watching my grandmother and some other house wives who use get up early in the morning just to cook. So I always thought Cooking is not my cup of tea :) Forget cooking I never showed interest in eating also, because of this main reason I never enjoyed food, never observed any taste, never thought to learn any basic things until my masters.

May be god decided to send me foodie husband so nature started me to train me step by step.
First Step - my friend Vidya helped to activate my taste buds ,
Second Step - in Art of Living Happiness course learnt to respect and to enjoy food
Third Step - My sister is a doctor, so she doesn't have time to do cooking which takes lot of time.                             With that she understood my mentality and helped me to get soft corner about cooking. 

Fourth Step - Got Married, Still I was in learning mode, I use to take lot of time to cook in initial stage so it made me frustrated and instead of loving it made me to hate cooking more and more. 

But Luckily, My husband is foodie and loved cooking and my in laws were very helping and taught me few simple cooking recipes and encouraged me. Some time He use to get frustrated but some how he managed to bring interest in cooking. Which made me to fall in love with Cooking and Food and of course to put on  :( :D

I am not an expert to give tips to those who are good in cooking, This blog is for - newly bride who don't know cooking, who hate cooking and need to learn cooking, who are lazy to cook but no option :P Because, after my experience I thought I will help people like me ...

1. Shopping Time
 Just after wedding elders started to ask what and all you want tell, It made me real nervous. Then my sister came like an angel and advised me what to buy in initial stage. Just have these essential things :

Vessels :
  • Kadhai
  • Frying Pan
  • Turner ( If you have non stick then wood/nylon must)
  • Milk boiler
  • Vegetable cutting board
  • Knife
  • Mortar and Pestle set
  • Tadka pan( not necessary)
Groceries:
  • Salt
  • Oil 
  • Turmeric 
  • Chilli powder
  • Ginger Garlic paste
  • Mustard seeds
  • Cumin seeds
  • Tamarind
  • Garam masala
  • Rice
  • Toor dal
  • Split Urad dal
  • Green gram

Vegetables:

  • Onion
  • Tomato
  • Potato
  • Green peas
  • Palak
Extra you can add ...



2.Basic knowledge

Before cooking its better to know few basic things.

  • Most of us are frightened about giving tadka. No worry. To avoid spilling  just make sure keep your vessel dry, it should not be wet while pouring oil for tadka. 
  • First put onion then ginger garlic paste to avoid spilling, after paste put tomato
  • Less Watery things should be added first
  • Should fry onion properly, for that put little bit of salt and fry in high flame. It should get transparent 
  • Should fry ginger garlic paste until that raw smell goes off
  • Put little water while frying tomato, easily it will become mushy. Wait until it become soft, stir occasionally.
  • Add garam masala at the end while boiling to get essence 
  • If you forgot to soak over night then soak in hot water for half an hour and bring two more whistles than usual
  • Better to soak toor dal for some time before putting 


3. Planning

Even if you don't have time, sit for some time and think what you want to prepare. Once you decide make a list of things which are needed for recipe.

4. Execution


  • Just check which takes less or more time
  • Keep everything ready on table
  • Marination/ soaking all these things needs to be done first
  • See what are the common ingredients. for ex: If you need onion in more than one dish at a time you can cut and make portions for each dish. 
  • First cut all vegetables which are needed then start cooking
  • KISS - Keep It Short and Simple. Even with very less ingredients you can make awesome dish. So NO NEED TO MAKE COMPLICATED :) 
  • Do it with 100% of attention, so that nothing goes wrong
      and last but very important
  • Do it with LOVE, SMILE and  ENJOY while cooking/serving :) 


I hope my post may have helped you :) Very soon will come up with very simple recipe. 


Till then Happy Cooking :)




Friday, January 9, 2015

ಮೆಟ್ಟಿಲೇರಲು ಸುಲಭ ದಾರಿ



ನಮ್ಮ ಮನೆಗೆ ಬರೋರ್ದೆಲ್ಲಾ ಒಂದೇ complaint, ಅಬ್ಬಾ ಎಷ್ಟು ಮೆಟ್ಟಿಲು ಸಾಕಾಗಿ ಹೋಯ್ತು ಬರೋದ್ರಲ್ಲಿ ಅಂತ, ಅಪ್ಪಾ ಅಂತ್ರೂ ಪ್ರತೀ ಬಾರಿ ದಮ್ ಬಿಡುತ್ತಾ (ತೇಕೋದು) ಯಾಕಾದ್ರು ಕಟ್ಟುವಾಗ ಇಷ್ಟು ಮೆಟ್ಟಿಲು ಮಾಡೋ ಹಾಗಾಯ್ತು ಅಂತ ಪೇಚಾಡೋರು. MCA ಮಾಡಕ್ ನಿಟ್ಟೆ ಗೆ ಹೋದ್ರೆ  ಅಲ್ಲಿ  class ರೂಂ 3rd floor ನಲ್ಲಿ . ರಜೆ  ಇದ್ದಾಗ lab ಹೋಗ್ಬೇಕಂದ್ರೆ ನಮ್ದೆಲ್ಲಾ ಹೆಣ ಬೀಳೋದು. ಅದಾದ್  ನಂತರ ಉಡುಪಿ ಲಿ ಕೆಲಸಕ್ಕೆ ಸೇರಿದರೆ ಅಲ್ಲಿ ಕೂಡ Office ೩ನೇ ಅಂತಸ್ತಿ ನಲ್ಲಿ , ಆದರೆ ಪರಿಸ್ಥಿತಿ ಬೇರೆ ಯಾಗಿತ್ತು . ಮದುವೆ ಯಾಗ್ ಮೈಸೂರು ಬಂದರೆ ಅಲ್ಲಿ  ಅಂತ್ರು ಮನೆ, ಆಫೀಸು ಎಲ್ಲಾ ೨ ನೇ floor ೩ನೇ floor ನಲ್ಲಿ . Thanks to ಆರ್ಟ್ ಆಫ್ ಲಿವಿಂಗ್ ಟೀಚರ್. ನಿಟ್ಟೆ  ಬಿಟ್ಟ ನಂತರ ನನಗೆ ಮೆಟ್ಟಿಲೆರೋದು ಮತ್ಯಾವತ್ತು  problem ಅಂತ ಅನ್ನಿಸಲೇ ಇಲ್ಲಾ . ಯಾವ floor ಆದರೂ  ಏರಬಲ್ಲವಳಾಗಿದ್ದೆ  * even in my full term pregnancy and after few days of my section ಪಟ ಪಟ ಅಂತ ಸುಸ್ತಾಗದೆ ಹತ್ತತಾ ಇದ್ದೆ . ಅಷ್ಟೇ ಯಾಕೆ Last moment ನಲ್ಲಿ Testing, OT (Operation Theater)ಗೆಲ್ಲಾ ಹೋಗುವಾಗ ಕೂಡ patient ಆಕೊಂಡು ಮೆಟ್ಟಿಲೇರಿ ಇಳಿವಾಗ ಮುಂದೆ ಇರ್ತಿದ್ದೆ ಮನೆಯವರೆಲ್ಲಾ ಹಿಂದೆ. ಹೇಗೆ ಅಂತೀರಾ ?

ಅದು ಹೀಗೆ ...

ನಮ್ಮ ಮನೆಗೆ  ಸುದರ್ಶನ ಕ್ರೀಯೆ class ತಗೋಳಿಕೆ ಮಲ್ಲಿಕಾರ್ಜುನ  ಸ್ವಾಮಿ ಅನ್ನೋರು ಬಂದಾಗ ನಮ್ಮ ಮನೆ ಮೆಟ್ಟಿಲು ನೋಡ್ಕೊಂಡೆ ಈ tips ಕೊಟ್ಟಿರಬೇಕು ಅಂತ ಈಗ ಅನಿಸ್ತಿದೆ. ಅದೇನೇ ಇರಲಿ ಅವರು ಹೇಳಿದ ಟ್ರಿಕ್ ಈ ರೀತಿಯಾಗಿದೆ.

ಯಾಕೆ ಸುಸ್ತಾಗುತ್ತೆ ???  :
ಸಾಮಾನ್ಯವಾಗಿ ನಾವು ಮೆಟ್ಟಿಲೇರುವಾಗ ಉಸಿರು ತಗೊಂಡು  ಬಿಡುವ ಪ್ರಕ್ರಿಯೆ ಪದೇ ಪದೇ ಮಾಡ್ತಾ ಹೋಗ್ತೀವಿ. ಇದರಿಂದ ನಮಗೆ ಬೇಗ ಸುಸ್ತಾಗುತ್ತೆ. ಬೇಕಿದ್ರೆ ನೀವು observe ಮಾಡಿ. ಕೆಲವೊಮ್ಮೆ ನಾವು ಒಂದೊಂದು ಮೆಟ್ಟಿಲಿಗೆ ಕೂಡ ಚಿಕ್ಕ ಚಿಕ್ಕದಾಗಿ ಉಸಿರು ತಗೊಂಡು ಬಿಡ್ತೀವಿ. ಇದು ಓಡಿದ ಲೆಕ್ಕಾನೆ ಆಯ್ತು ತಾನೆ ? ಓಡಿದರೆ ದಮ್ ಬರದೇ ಇರುತ್ತಾ ...

ಏನು ಮಾಡಬೇಕು? :
ಮೆಟ್ಟಿಲೇರುವಾಗ ನಿಮ್ಮ ಉಸಿರಿನ ಪ್ರಕ್ರಿಯೆ ಬದಲಾಯಿಸ ಬೇಕು. ಪ್ರತಿ ಮೆಟ್ಟಿಲಿಗೆ ಚಿಕ್ಕ ಚಿಕ್ಕ, ವೇಗದ ಉಸಿರಾಟದ ಬದಲು   ದೀರ್ಘವಾದ (ಉದ್ದವಾದ/lengthy) ನಿಧಾನವಾದ ಉಸಿರಾಟ ಇದಕ್ಕೆ ಬೇಕು. ನಿಧಾನವಾಗಿ ಆರಾಮವಾಗಿ ಎಷ್ತಾಗುತ್ತೋ ಅಷ್ಟು ಉಸಿರು ತಗೋತಾ ಮೆಟ್ಟಿಲು ಹತ್ತುತ್ತಾ ಹೋಗಿ ಹಾಗೆ ಉಸಿರು ಬಿಡುತ್ತಾ ಬಿಡುತ್ತಾ ಮೆಟ್ಟಿಲು ಏರುತ್ತಾ ಹೋಗಿ. ಹಾಗೆ ಪುನರಾವರ್ತಿಸಿ. ನೆನಪಿಡಿ ಜಾಸ್ತಿ ಉಸಿರು ತಗೊಳೋಕೆ ಇಲ್ಲಾ ಬಿಡೋಕೆ ಪ್ರಯತ್ನ ಪಟ್ಟರೆ ತೇಕು ಶುರುವಾಗುತ್ತೆ. ನಿಮ್ಮ ಸಾಮರ್ಥ್ಯ ಮುಗಿಯುವ ಮುಂಚೆಯೇ ಉಸಿರನ್ನು ತಗೋಳಿ ಇಲ್ಲಾ ಬಿಡಿ ಆದರೆ ನಿಧಾನವಾಗಿ ದೀರ್ಘವಾಗಿ .

ಗೊತ್ತಾಯ್ತಲ್ವಾ ?

ಇನ್ನೂ ದಿನಾ ಸ್ವಲ್ಪ ಸ್ವಲ್ಪ practice ಮಾಡ್ತಾ ಹೋಗಿ ಆಮೇಲೆ result ನಿಮ್ಮ ಮುಂದೆ ಇರುತ್ತೆ. ಇದು ನಿಮಗೆ ಇಂದಲ್ಲಾ ನಾಳೆ ಖಂಡಿತ ಉಪಯೋಗಕ್ಕೆ ಬಂದೇ ಬರುತ್ತೆ, ಬಂದಾಗ ನನ್ನ ನೆನೆಸಿ ಸಾಕು. ಈಗ ನಾ ಹೊರಡಬೇಕು. ನನ್ನ ಡಿಂಪು (ಪ್ರಕ್ಷಾ) ಚಾಚಿ ಮಾಡಿ ಏಳುವ time :) ಸಾಧ್ಯ ಆದ್ರೆ ನಾನು ಡಬ್ಬಾಕೊತಿನಿ :P

ಮತ್ತೆ ಸಿಗೋಣ ...  ಅಲ್ಲೀವರೆಗೆ  Lift  ಬಿಟ್ಟು ಮೆಟ್ಟಿಲೇರಿ ಇಳಿಯೋದು practice ಮಾಡ್ತಾ ಆರೋಗ್ಯ ಕಾಪಾಡ್ಕೊಂಡು ಇರ್ರಿ ...


ಟಾ ಟಾ  :)


* ಗರ್ಭಿಣಿ ಯರು ಮೆಟ್ಟಿಲೇರಿ ಇಳಿಯುವ ಬಗ್ಗೆ ವೈದ್ಯರ ಬಳಿ ಮಾತನಾಡುವುದು ಉಚಿತ. ಇಲ್ಲಿ ನನ್ನ ಅನುಭವ ಹೇಳುತ್ತಿರುವೆನೇ ಹೊರತು ಬೇರೆನಲ್ಲಾ. 

Wednesday, December 31, 2014

ಸೀನು ಮತ್ತು ನೀವು


ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ಹೊಗಳಿಕೆ ಮೂಗಿಗೆ ಸೇರಿದ್ದು. ಪ್ರಾಣಾಯಾಮ ಗೀಮಯಾಮ ಮಾಡಲ್ಲಾ, ಪಾಪ ತಾನು ಇದ್ದೇನೆ ಎಂದು ಸಾಬೀತು ಮಾಡೋದು ನೆಗಡಿ(ಶೀತ) ಆದಾಗ ಮಾತ್ರ :) ನೆಗಡಿ  ಅದರಲ್ಲೂ Dust Allergy ಇಂದ ಬರೋ ನೆಗಡಿ ಬೇತಾಳನ ಹಾಗೆ ಬೆನ್ನ ಹಿಂದೆನೇ ಇರುತ್ತೆ   time  ನೋಡ್ಕೊಂಡ್  ನಕ್ಷತ್ರಿಕ ನ ಹಾಗೆ  ಕಾಡಿಸೋಕೆ.

ಸಮಸ್ಯೆ  ಅಂದಮೇಲೆ ಪರಿಹಾರ ನೂ ಇರುತ್ತೆ ಆಲ್ವಾ, ಪ್ರಾಣಾಯಾಮ ದಿನಾ ಮಾಡ್ರಪ್ಪಾ ಅಂದ್ರೂ ನಮ್ಮ್ ಅಪ್ಪನ್ ಆಣೆಗೂ ಮಾಡಲ್ಲಾ ಅಂತಾರೆ ಅದಕ್ಕೆ quick and easy solution ಇಲ್ಲಿ ಕೊಡ್ತಾ ಇರೋದು. ಸೀನು ಶುರುವಾದ ಕೂಡಲೆ ನೆಗಡಿ ಆಗೋದು ಇಲ್ಲಾ non stop ಸೀನೊ ತೊಂದರೆ ಇದ್ದರೆ ಇದೋ ಇಲ್ಲಿದೆ ನೋಡಿ.


To avoid sneezing 

ಸರಿಯಾಗಿ ಇನ್ನೇನು ಸೀನು ಬಂತು ಅಂತ ಅನಿಸಿದಾಗ ನಿಮ್ಮ ಎಡ ಅಥವಾ ಬಲ ಕೈ ನ ಕಿರು ಬೆರಳನ್ನ ಹಿಂದಕ್ಕೆ ನೋವಾಗುವ ಹಾಗೆ ಎಳೆಯಬೇಕು. ಆಗ ಸೀನು ಬರೋದು ಅಲ್ಲೇ ನಿಂತು ಹೋಗುತ್ತೆ. ನಾ try ಮಾಡಿದೆ work ಆಯ್ತ್,
ನಿಮಗೂ ಹೇಳವಾ ಅನ್ಸ್ತ್ ಅದಕ್ಕೆ ಇಲ್ಲಿ ಬರೆದೆ. ನನ್ನ ಕೆಲಸ ಆಯ್ತ್, ಇನ್ನೂ ನಿಮ್ಮ್ ಕೆಲಸ ಶುರು. 

ಬರ್ತೀನಿ ಕಣ್ರೀ, ಅಲ್ಲಿವರ್ಗೆ ಹುಷಾರಾಗಿರಿ ಟಾ ಟಾ :)


----------------------------------------------------------
How to avoid Sneezing 😆
----------------------------------------------------------

People who have sneezing problem, they can do as showed in the above picture. just before you sneeze means when you feel...at this right moment I will sneeze then ... stretch your little finger until you feel the pain. Left hand or Right hand, anything will be ok. I have dust allergy, I tried this technique it worked for me. Thought of sharing with you :) 

My 8 months daughter Dimpu is sleeping so got time to write this post :) Not feeling well, catch cold :( time to give some time for her. Nothing else to say, cu in my next post. Till then take care re ....



Tuesday, January 21, 2014

ಬಣ್ಣದ ಆಟ



ಬಣ್ಣ ಬಣ್ಣವೆಂದು ಜಪ ಮಾಡಲು ಏನಿದೆ ಜಗದಲ್ಲಿ,
ತೋರಿಸುವೆ ನಿಮಗೆ ಕಪ್ಪಿನ ಗುಣವ ಈ ನನ್ನ ಕವಿತೆಯಲಿ ;

ಏನಿದೆ ಬಿಳಿ ಬಣ್ಣದಲಿ ಪಡಲು ಹೆಮ್ಮೆ ,
ಓದಿ ಯೋಚಿಸಿ ನೋಡಿ ಕೆಳಗಿನ ಸಾಲುಗಳ ಯಾವಾಗಾದರೊಮ್ಮೆ ;

ಬಿಳಿ ಬಣ್ಣದ ಮೋಡ ನೋಡಲೇನೋ ಚಂದ,
ಹೊಟ್ಟೆ ತುಂಬಲು ರೈತ ಕಪ್ಪು ಮೋಡವೇ ಬೇಕೆಂದ;

ದೇವರ ದೀಪಕೆ ಇಡುವರು ಬಿಳಿ ಬಣ್ಣದ ಹತ್ತಿ,
ಕಪ್ಪನೆಯ ಮಣ್ಣಿಲ್ಲದೆ ಇದಲಾಗುವುದೇ ದೇವರಿಗೆ ಬತ್ತಿ;

ಹೆಣ್ಣು /ಗಂಡಿನ ಸೌಂದರ್ಯವ ನೋಡುವಾಗ ಬಣ್ಣವೇನೋ ನೋಡುವಿರಿ,
ಬಿಳಿ ಚರ್ಮದ ದೇಹದಲಿ  ಕಪ್ಪು ಕೇಶವಿದ್ದರೆ ತಾನೆ ಚಂದ ನೀವ್ ಕಾಣುವಿರಿ;

ಹೆಮ್ಮೆಯೋ ಕೀಳರಿಮೆಯೋ ನಾ ಅರಿಯೆ ಬಣ್ಣದ ಬಗೆಗೆ,
ಆದರೆ ಎಂತಹ ಸೌಂದರ್ಯಕೂ ಮೆರಗು ಕೊಡುವ ಶಕ್ತಿ ಇದೆ ತಾನೆ ಕಾಡಿಗೆಗೆ;

ಕಪ್ಪಿಗಿಂತ ಬಿಳಿ ಬಣ್ಣಕೇನೋ ಬೀಳಬಹುದು ದೃಷ್ಟಿ,
ಅದ ತಡೆಯಲು ಕಪ್ಪು ಬೊಟ್ಟಿಗೆ ಮಾತ್ರ ಕೊಟ್ಟಿಲ್ಲವೇ ಅನುಮತಿಯ ಈ ಸೃಷ್ಟಿ;

ಯಾಕಾಗಿ ನೋಡುವಿರಿ ಬಣ್ಣ,
ಬಣ್ಣಕ್ಕಿಂತ ಗುಣವ ನೋಡುವುದೇ ಚೆನ್ನ,
ದೇವರು ಎಲ್ಲವನು ಇಟ್ಟಿರುವನು ಒಂದಿಲ್ಲಾ ಒಂದು ವಿಷಯದಲಿ ಸಮಾನ,
ಬದಲಾಯಿಸಿ ಬಣ್ಣದ ಬಗೆಗೆ ನಿಮ್ಮ ಕಣ್ಣ,
ಸೇರುವ ಮುಂಚೆ ನಾವೆಲ್ಲಾ ಈ ಮಣ್ಣ.


Tuesday, November 19, 2013

ನಿನಗೋಸ್ಕರ

ಅತೀ ಕಡಿಮೆ ಜನರಿಗೆ ಹಿರಿಯರ ಸೇವೆ ಮಾಡುವ/ನೋಡಿಕೊಳ್ಳುವ ಅವಕಾಶ ಸಿಗುವುದು. ಆದರೆ ನನಗೆ ಸಿಕ್ಕ ಅವಕಾಶವನ್ನು ಮದುವೆ ಯ Life ಚೆನ್ನಾಗಿ Enjoy ಮಾಡಬೇಕು ಎನ್ನುವ ಗುಂಗಲ್ಲಿ ಕಳೆದೆ ಜೊತೆಗೆ ನನಗೆ ನನ್ನಿಂದ ಅವರಿಗೆ ಕಷ್ಟ ಎನ್ನುವ ನೋವಿತ್ತು ಆದರೆ ಆ ಸಮಯ ಮಿಂಚುವ ತನಕ ಗೊತ್ತೇ ಆಗಲಿಲ್ಲಾ :(  ನನ್ನೊಡನೆ ಕಳೆದ ದಿನಗಳು ಅವರಿಗೆ ಎಲ್ಲಕ್ಕಿಂತ ಹೆಚ್ಚು ಸಂತಸ ಕೊಟ್ಟ ದಿನಗಳೆಂದು. ಇದು ತಿಳಿದಂದಿನಿಂದ ಮನಸಲ್ಲಿ Guilt ಕಾಡುತ್ತಿದೆ. ನನಗಾಗಿ ನನ್ನ ಅಜ್ಜಿ ಬದುಕೆಲ್ಲಾ ಸವಿದರೂ ನಾ ಕೊನೆಗೆ ಏನು ಮಾಡಿದೆ ನೆಂದು.  ಈಗ ಅಪ್ಪ ನೊಂದಿಗೆ ಇದ್ದಾರೆ ಆದರೆ ಆ ನೋವು ಅಳಿಯದು.   ಆದರೂ ಕಡಿಮೆ ಮಾಡುವ ಯತ್ನ ಮಾತ್ರ ಮನವಿಲ್ಲಿ ಮಾಡಿದೆ .



Dedicated to my most loving person (My Gran ...  My Amma):

ನನಗಾಗಿ ಬದುಕೆಲ್ಲಾ ಜಗದೊಡನೆ ಕಾದೆ,
ಆದರೆ ನಾನೆಂದು ನಿನ್ನ ಮನವ ಅರಿಯದಾದೆ;

ಅಂದು ಬೆಳೆದೆ ನಾ ನಿನ್ನ ಪ್ರೀತಿಯ ತೆಕ್ಕೆಯಲಿ,
ಇಂದು ಬೇಯುತಿದೆ ಮನವು ಕೇವಲ ಪಶ್ಚಾತಾಪದಲಿ;

ಕಷ್ಟವೆನೆಂದು ತಿಳಿಯದಂತೆ ನನ್ನ ನೀ  ಬೆಳೆಸಿದೆ,
ಆ ಪ್ರೀತಿಗಾಗಿ ಇಂದು ಮನವು ಮತ್ತೆ ಹಸಿದಿದೆ ;

ಕೇಳದೆ ಮಾಡಿದೆ ನೀ ಎನಗೆ ಎಲ್ಲವ,
ಆದರೆ ನಾ ಮಾತ್ರ ಜಿಪುಣಿ ಆದೆ ಕೊಡಲು ನಿನಗೆ ಸಮಯವ;

ಮತ್ತೆ ಆ ದಿನಗಳ ನಾ ಬಯಸುವೆ,
ನಿನ್ನೊಡನೆ ಸಮಯ ಕಳೆಯಲು ನಾ ಕಾಯುವೆ;

ನೀ ನಡೆದು ಬಂದ ದಾರಿಯಲಿ ನಾ ಹೊರಟಿರುವೆ,
ನೀ ಪಟ್ಟ ನೋವ ನಾ ಇಂದು ಅರಿತಿರುವೆ,
ಸಿಕ್ಕ ಸಮಯದಲಿ ಮಾಡದೆ ಇಂದು ಕಣ್ಣೀರಿನಲಿ ನೆಂದಿರುವೆ;

ನೀ ಮಾಡಿದಷ್ಟು ನಾ ಮಾಡಲಾಗಲಿಲ್ಲಾ,
ನೀ ತೋರಿದ ಮೌನವ ನಾ ಎಂದು ಅರಿಯಲಿಲ್ಲಾ ;

ನಿಮ್ಮೊಡನೆ ಇರುವಾಸೆ ಮತ್ತೆ ಮಗುವಾಗಿ,
ಕೊಡ ಬಯಸುವೆ ಕೊಡುಗೆಯ ನಿಮ್ ಮುಖದ ನಗುವಾಗಿ.

Missing  you...