ಅದು ಹೀಗೆ ...
ನಮ್ಮ ಮನೆಗೆ ಸುದರ್ಶನ ಕ್ರೀಯೆ class ತಗೋಳಿಕೆ ಮಲ್ಲಿಕಾರ್ಜುನ ಸ್ವಾಮಿ ಅನ್ನೋರು ಬಂದಾಗ ನಮ್ಮ ಮನೆ ಮೆಟ್ಟಿಲು ನೋಡ್ಕೊಂಡೆ ಈ tips ಕೊಟ್ಟಿರಬೇಕು ಅಂತ ಈಗ ಅನಿಸ್ತಿದೆ. ಅದೇನೇ ಇರಲಿ ಅವರು ಹೇಳಿದ ಟ್ರಿಕ್ ಈ ರೀತಿಯಾಗಿದೆ.
ಯಾಕೆ ಸುಸ್ತಾಗುತ್ತೆ ??? :
ಸಾಮಾನ್ಯವಾಗಿ ನಾವು ಮೆಟ್ಟಿಲೇರುವಾಗ ಉಸಿರು ತಗೊಂಡು ಬಿಡುವ ಪ್ರಕ್ರಿಯೆ ಪದೇ ಪದೇ ಮಾಡ್ತಾ ಹೋಗ್ತೀವಿ. ಇದರಿಂದ ನಮಗೆ ಬೇಗ ಸುಸ್ತಾಗುತ್ತೆ. ಬೇಕಿದ್ರೆ ನೀವು observe ಮಾಡಿ. ಕೆಲವೊಮ್ಮೆ ನಾವು ಒಂದೊಂದು ಮೆಟ್ಟಿಲಿಗೆ ಕೂಡ ಚಿಕ್ಕ ಚಿಕ್ಕದಾಗಿ ಉಸಿರು ತಗೊಂಡು ಬಿಡ್ತೀವಿ. ಇದು ಓಡಿದ ಲೆಕ್ಕಾನೆ ಆಯ್ತು ತಾನೆ ? ಓಡಿದರೆ ದಮ್ ಬರದೇ ಇರುತ್ತಾ ...
ಏನು ಮಾಡಬೇಕು? :
ಮೆಟ್ಟಿಲೇರುವಾಗ ನಿಮ್ಮ ಉಸಿರಿನ ಪ್ರಕ್ರಿಯೆ ಬದಲಾಯಿಸ ಬೇಕು. ಪ್ರತಿ ಮೆಟ್ಟಿಲಿಗೆ ಚಿಕ್ಕ ಚಿಕ್ಕ, ವೇಗದ ಉಸಿರಾಟದ ಬದಲು ದೀರ್ಘವಾದ (ಉದ್ದವಾದ/lengthy) ನಿಧಾನವಾದ ಉಸಿರಾಟ ಇದಕ್ಕೆ ಬೇಕು. ನಿಧಾನವಾಗಿ ಆರಾಮವಾಗಿ ಎಷ್ತಾಗುತ್ತೋ ಅಷ್ಟು ಉಸಿರು ತಗೋತಾ ಮೆಟ್ಟಿಲು ಹತ್ತುತ್ತಾ ಹೋಗಿ ಹಾಗೆ ಉಸಿರು ಬಿಡುತ್ತಾ ಬಿಡುತ್ತಾ ಮೆಟ್ಟಿಲು ಏರುತ್ತಾ ಹೋಗಿ. ಹಾಗೆ ಪುನರಾವರ್ತಿಸಿ. ನೆನಪಿಡಿ ಜಾಸ್ತಿ ಉಸಿರು ತಗೊಳೋಕೆ ಇಲ್ಲಾ ಬಿಡೋಕೆ ಪ್ರಯತ್ನ ಪಟ್ಟರೆ ತೇಕು ಶುರುವಾಗುತ್ತೆ. ನಿಮ್ಮ ಸಾಮರ್ಥ್ಯ ಮುಗಿಯುವ ಮುಂಚೆಯೇ ಉಸಿರನ್ನು ತಗೋಳಿ ಇಲ್ಲಾ ಬಿಡಿ ಆದರೆ ನಿಧಾನವಾಗಿ ದೀರ್ಘವಾಗಿ .
ಗೊತ್ತಾಯ್ತಲ್ವಾ ?
ಇನ್ನೂ ದಿನಾ ಸ್ವಲ್ಪ ಸ್ವಲ್ಪ practice ಮಾಡ್ತಾ ಹೋಗಿ ಆಮೇಲೆ result ನಿಮ್ಮ ಮುಂದೆ ಇರುತ್ತೆ. ಇದು ನಿಮಗೆ ಇಂದಲ್ಲಾ ನಾಳೆ ಖಂಡಿತ ಉಪಯೋಗಕ್ಕೆ ಬಂದೇ ಬರುತ್ತೆ, ಬಂದಾಗ ನನ್ನ ನೆನೆಸಿ ಸಾಕು. ಈಗ ನಾ ಹೊರಡಬೇಕು. ನನ್ನ ಡಿಂಪು (ಪ್ರಕ್ಷಾ) ಚಾಚಿ ಮಾಡಿ ಏಳುವ time :) ಸಾಧ್ಯ ಆದ್ರೆ ನಾನು ಡಬ್ಬಾಕೊತಿನಿ :P
ಮತ್ತೆ ಸಿಗೋಣ ... ಅಲ್ಲೀವರೆಗೆ Lift ಬಿಟ್ಟು ಮೆಟ್ಟಿಲೇರಿ ಇಳಿಯೋದು practice ಮಾಡ್ತಾ ಆರೋಗ್ಯ ಕಾಪಾಡ್ಕೊಂಡು ಇರ್ರಿ ...
ಟಾ ಟಾ :)
* ಗರ್ಭಿಣಿ ಯರು ಮೆಟ್ಟಿಲೇರಿ ಇಳಿಯುವ ಬಗ್ಗೆ ವೈದ್ಯರ ಬಳಿ ಮಾತನಾಡುವುದು ಉಚಿತ. ಇಲ್ಲಿ ನನ್ನ ಅನುಭವ ಹೇಳುತ್ತಿರುವೆನೇ ಹೊರತು ಬೇರೆನಲ್ಲಾ.