ಬಣ್ಣ ಬಣ್ಣವೆಂದು ಜಪ ಮಾಡಲು ಏನಿದೆ ಜಗದಲ್ಲಿ,
ತೋರಿಸುವೆ ನಿಮಗೆ ಕಪ್ಪಿನ ಗುಣವ ಈ ನನ್ನ ಕವಿತೆಯಲಿ ;
ತೋರಿಸುವೆ ನಿಮಗೆ ಕಪ್ಪಿನ ಗುಣವ ಈ ನನ್ನ ಕವಿತೆಯಲಿ ;
ಏನಿದೆ ಬಿಳಿ ಬಣ್ಣದಲಿ ಪಡಲು ಹೆಮ್ಮೆ ,
ಓದಿ ಯೋಚಿಸಿ ನೋಡಿ ಕೆಳಗಿನ ಸಾಲುಗಳ ಯಾವಾಗಾದರೊಮ್ಮೆ ;
ಬಿಳಿ ಬಣ್ಣದ ಮೋಡ ನೋಡಲೇನೋ ಚಂದ,
ಹೊಟ್ಟೆ ತುಂಬಲು ರೈತ ಕಪ್ಪು ಮೋಡವೇ ಬೇಕೆಂದ;
ದೇವರ ದೀಪಕೆ ಇಡುವರು ಬಿಳಿ ಬಣ್ಣದ ಹತ್ತಿ,
ಕಪ್ಪನೆಯ ಮಣ್ಣಿಲ್ಲದೆ ಇದಲಾಗುವುದೇ ದೇವರಿಗೆ ಬತ್ತಿ;
ಹೆಣ್ಣು /ಗಂಡಿನ ಸೌಂದರ್ಯವ ನೋಡುವಾಗ ಬಣ್ಣವೇನೋ ನೋಡುವಿರಿ,
ಬಿಳಿ ಚರ್ಮದ ದೇಹದಲಿ ಕಪ್ಪು ಕೇಶವಿದ್ದರೆ ತಾನೆ ಚಂದ ನೀವ್ ಕಾಣುವಿರಿ;
ಹೆಮ್ಮೆಯೋ ಕೀಳರಿಮೆಯೋ ನಾ ಅರಿಯೆ ಬಣ್ಣದ ಬಗೆಗೆ,
ಆದರೆ ಎಂತಹ ಸೌಂದರ್ಯಕೂ ಮೆರಗು ಕೊಡುವ ಶಕ್ತಿ ಇದೆ ತಾನೆ ಕಾಡಿಗೆಗೆ;
ಕಪ್ಪಿಗಿಂತ ಬಿಳಿ ಬಣ್ಣಕೇನೋ ಬೀಳಬಹುದು ದೃಷ್ಟಿ,
ಅದ ತಡೆಯಲು ಕಪ್ಪು ಬೊಟ್ಟಿಗೆ ಮಾತ್ರ ಕೊಟ್ಟಿಲ್ಲವೇ ಅನುಮತಿಯ ಈ ಸೃಷ್ಟಿ;
ಯಾಕಾಗಿ ನೋಡುವಿರಿ ಬಣ್ಣ,
ಬಣ್ಣಕ್ಕಿಂತ ಗುಣವ ನೋಡುವುದೇ ಚೆನ್ನ,
ದೇವರು ಎಲ್ಲವನು ಇಟ್ಟಿರುವನು ಒಂದಿಲ್ಲಾ ಒಂದು ವಿಷಯದಲಿ ಸಮಾನ,
ಬದಲಾಯಿಸಿ ಬಣ್ಣದ ಬಗೆಗೆ ನಿಮ್ಮ ಕಣ್ಣ,
ಸೇರುವ ಮುಂಚೆ ನಾವೆಲ್ಲಾ ಈ ಮಣ್ಣ.
ಬದಲಾಯಿಸಿ ಬಣ್ಣದ ಬಗೆಗೆ ನಿಮ್ಮ ಕಣ್ಣ,
ಸೇರುವ ಮುಂಚೆ ನಾವೆಲ್ಲಾ ಈ ಮಣ್ಣ.