ಅತೀ ಕಡಿಮೆ ಜನರಿಗೆ ಹಿರಿಯರ ಸೇವೆ ಮಾಡುವ/ನೋಡಿಕೊಳ್ಳುವ ಅವಕಾಶ ಸಿಗುವುದು. ಆದರೆ ನನಗೆ ಸಿಕ್ಕ ಅವಕಾಶವನ್ನು ಮದುವೆ ಯ Life ಚೆನ್ನಾಗಿ Enjoy ಮಾಡಬೇಕು ಎನ್ನುವ ಗುಂಗಲ್ಲಿ ಕಳೆದೆ ಜೊತೆಗೆ ನನಗೆ ನನ್ನಿಂದ ಅವರಿಗೆ ಕಷ್ಟ ಎನ್ನುವ ನೋವಿತ್ತು ಆದರೆ ಆ ಸಮಯ ಮಿಂಚುವ ತನಕ ಗೊತ್ತೇ ಆಗಲಿಲ್ಲಾ :( ನನ್ನೊಡನೆ ಕಳೆದ ದಿನಗಳು ಅವರಿಗೆ ಎಲ್ಲಕ್ಕಿಂತ ಹೆಚ್ಚು ಸಂತಸ ಕೊಟ್ಟ ದಿನಗಳೆಂದು. ಇದು ತಿಳಿದಂದಿನಿಂದ ಮನಸಲ್ಲಿ Guilt ಕಾಡುತ್ತಿದೆ. ನನಗಾಗಿ ನನ್ನ ಅಜ್ಜಿ ಬದುಕೆಲ್ಲಾ ಸವಿದರೂ ನಾ ಕೊನೆಗೆ ಏನು ಮಾಡಿದೆ ನೆಂದು. ಈಗ ಅಪ್ಪ ನೊಂದಿಗೆ ಇದ್ದಾರೆ ಆದರೆ ಆ ನೋವು ಅಳಿಯದು. ಆದರೂ ಕಡಿಮೆ ಮಾಡುವ ಯತ್ನ ಮಾತ್ರ ಮನವಿಲ್ಲಿ ಮಾಡಿದೆ .
Dedicated to my most loving person (My Gran ... My Amma):
ನನಗಾಗಿ ಬದುಕೆಲ್ಲಾ ಜಗದೊಡನೆ ಕಾದೆ,
ಆದರೆ ನಾನೆಂದು ನಿನ್ನ ಮನವ ಅರಿಯದಾದೆ;
ಅಂದು ಬೆಳೆದೆ ನಾ ನಿನ್ನ ಪ್ರೀತಿಯ ತೆಕ್ಕೆಯಲಿ,
ಇಂದು ಬೇಯುತಿದೆ ಮನವು ಕೇವಲ ಪಶ್ಚಾತಾಪದಲಿ;
ಕಷ್ಟವೆನೆಂದು ತಿಳಿಯದಂತೆ ನನ್ನ ನೀ ಬೆಳೆಸಿದೆ,
ಆ ಪ್ರೀತಿಗಾಗಿ ಇಂದು ಮನವು ಮತ್ತೆ ಹಸಿದಿದೆ ;
ಕೇಳದೆ ಮಾಡಿದೆ ನೀ ಎನಗೆ ಎಲ್ಲವ,
ಆದರೆ ನಾ ಮಾತ್ರ ಜಿಪುಣಿ ಆದೆ ಕೊಡಲು ನಿನಗೆ ಸಮಯವ;
ಮತ್ತೆ ಆ ದಿನಗಳ ನಾ ಬಯಸುವೆ,
ನಿನ್ನೊಡನೆ ಸಮಯ ಕಳೆಯಲು ನಾ ಕಾಯುವೆ;
ನೀ ನಡೆದು ಬಂದ ದಾರಿಯಲಿ ನಾ ಹೊರಟಿರುವೆ,
ನೀ ಪಟ್ಟ ನೋವ ನಾ ಇಂದು ಅರಿತಿರುವೆ,
ಸಿಕ್ಕ ಸಮಯದಲಿ ಮಾಡದೆ ಇಂದು ಕಣ್ಣೀರಿನಲಿ ನೆಂದಿರುವೆ;
ನೀ ಮಾಡಿದಷ್ಟು ನಾ ಮಾಡಲಾಗಲಿಲ್ಲಾ,
ನೀ ತೋರಿದ ಮೌನವ ನಾ ಎಂದು ಅರಿಯಲಿಲ್ಲಾ ;
ನಿಮ್ಮೊಡನೆ ಇರುವಾಸೆ ಮತ್ತೆ ಮಗುವಾಗಿ,
ಕೊಡ ಬಯಸುವೆ ಕೊಡುಗೆಯ ನಿಮ್ ಮುಖದ ನಗುವಾಗಿ.
Missing you...
Dedicated to my most loving person (My Gran ... My Amma):
ನನಗಾಗಿ ಬದುಕೆಲ್ಲಾ ಜಗದೊಡನೆ ಕಾದೆ,
ಆದರೆ ನಾನೆಂದು ನಿನ್ನ ಮನವ ಅರಿಯದಾದೆ;
ಅಂದು ಬೆಳೆದೆ ನಾ ನಿನ್ನ ಪ್ರೀತಿಯ ತೆಕ್ಕೆಯಲಿ,
ಇಂದು ಬೇಯುತಿದೆ ಮನವು ಕೇವಲ ಪಶ್ಚಾತಾಪದಲಿ;
ಕಷ್ಟವೆನೆಂದು ತಿಳಿಯದಂತೆ ನನ್ನ ನೀ ಬೆಳೆಸಿದೆ,
ಆ ಪ್ರೀತಿಗಾಗಿ ಇಂದು ಮನವು ಮತ್ತೆ ಹಸಿದಿದೆ ;
ಕೇಳದೆ ಮಾಡಿದೆ ನೀ ಎನಗೆ ಎಲ್ಲವ,
ಆದರೆ ನಾ ಮಾತ್ರ ಜಿಪುಣಿ ಆದೆ ಕೊಡಲು ನಿನಗೆ ಸಮಯವ;
ಮತ್ತೆ ಆ ದಿನಗಳ ನಾ ಬಯಸುವೆ,
ನಿನ್ನೊಡನೆ ಸಮಯ ಕಳೆಯಲು ನಾ ಕಾಯುವೆ;
ನೀ ನಡೆದು ಬಂದ ದಾರಿಯಲಿ ನಾ ಹೊರಟಿರುವೆ,
ನೀ ಪಟ್ಟ ನೋವ ನಾ ಇಂದು ಅರಿತಿರುವೆ,
ಸಿಕ್ಕ ಸಮಯದಲಿ ಮಾಡದೆ ಇಂದು ಕಣ್ಣೀರಿನಲಿ ನೆಂದಿರುವೆ;
ನೀ ಮಾಡಿದಷ್ಟು ನಾ ಮಾಡಲಾಗಲಿಲ್ಲಾ,
ನೀ ತೋರಿದ ಮೌನವ ನಾ ಎಂದು ಅರಿಯಲಿಲ್ಲಾ ;
ನಿಮ್ಮೊಡನೆ ಇರುವಾಸೆ ಮತ್ತೆ ಮಗುವಾಗಿ,
ಕೊಡ ಬಯಸುವೆ ಕೊಡುಗೆಯ ನಿಮ್ ಮುಖದ ನಗುವಾಗಿ.
Missing you...