Wednesday, July 10, 2013

ಅಯ್ಯೋ Champakali



  

    ಬೀಳುವರು ಎಲ್ಲಾ ಆಸೆಗೆ ಬಲಿ,
ನೋಡಿದೊಡನೆ ಚಂಪಾಕಲಿ 


ಅಂದು ನಾಲ್ಕು ದಿನದ ನಂತರ ಅಕ್ಷಯ ನ viral fever ಕಡಿಮೆ ಆಗಿತ್ತು. ಯಾವಾಗಲು Sweet ತಿನ್ನಲು ಬಿಡದಿದ್ದ ನಾನು ಜ್ವರ ಇಳಿದ ಖುಷಿಗೆ celebration ಗೆಂದು  ಚಂಪಾಕಲಿ ಕೊಟ್ಟು surprise ಮಾಡೋಣವೆಂದು ಕೊಂಡೆ ಅದರ ಜೊತೆಗೆ ಎಷ್ಟು ಸಲ ಹೇಳಿದರೂ ತರದೆ ಕೊನೆಗೆ ನಾನೇ ತಂದೆ ಎಂದು ಚಾಳಿಸೋಣ ಅಂತ plan ಮಾಡ್ಕೊಂಡು ಮನೆಗೆ ಓಡಿಕೊಂಡು ಬಂದೆ. 

ನಾನು  as usual Full जोश ನಲ್ಲಿ  " ಟಣ್ ಟಡಾ surprise ಏನ್ ತಂದೀನಿ ಹೇಳು " ಅಂದೆ ನನ್ನ 8 ಹಲ್ಲು ತೋರಿಸ್ತಾ (  ಯಾಕೆ doubt  ಕನ್ನಡೀಲಿ ನೋಡ್ಕೊಳ್ಳಿ 32 ಹಲ್ಲು ಪೂರ್ತಿ ಕಾಣಲ್ಲಾ :P ).  ನಮ್ಮ ಸಾಹೇಬರು as usual ಪಕ್ಕಾ ಹೊಟ್ಟೆ ತುಂಬಿದ Government Officer ಥರ ಉದಾಸೀನದಲ್ಲಿ ರಾಗದಲ್ಲಿ "ಏನೇ .. "ಅಂದ್ರು tv ನೋಡ್ತಾ. "ಅಯ್ಯೋ guess ಮಾಡಿ ". "ಆಯ್ತ್ ಅದು ಏನ್ ಹೇಳು ಈಗ ".  "Guess ಮಾಡಿದ್ರೆ ನಿಮ್ಮ ಗಂಟು ಹೋಗುತ್ತಾ ? ಅಷ್ಟು ಆಸೇಲಿ ತಂದೆ. ಆಯ್ತ್ ಮಾಡ್ಬೇಡಿ ಹೋಗಿ " ಅಂತ ಹೇಳಿ ನನ್ನ plan ಗೆ ಎಳ್ಳು ನೀರಿನ ತರ್ಪಣ ಬಿಟ್ಟು ದಪ್ಪ ಮುಖ ಮಾಡಿ packet ತಂದು ಅವರ ಮುಂದೆ ಕುಟ್ಟಿದೆ :(    

Open ಮಾಡಿ ನೋಡಿ ಅದೇ ಸಾದಾ expression ನಲ್ಲಿ ಹೋಗು plate ತಾ ಅಂತ ಹೇಳಿ ಇನ್ನಿಷ್ಟು ಉರಿಸಿದರು :@. ಏನಾದ್ರೂ ಮಾಡ್ಕೊಳ್ಳಿ ಅಂತ plate ಕೊಟ್ಟು net browse ಮಾಡೋಕೆ ಪಕ್ಕದ room ಗೆ ಬಂದೆ. ಆಗ ಸಾಹೇಬರು "ನಿನಗೊಂದು plate ತಾ " ಅಂದ್ರು.  "ನನಗೆ ಬೇಡ " ಅಂದೆ. "ತಗೋ" ಅಂತ ಮತ್ತೆ ಅಂದ್ರು "ಇಲ್ಲಾ ನೀವು ತಿನ್ನಿ" ಅಂತ ಹೇಳಿ facebook ಕಡೆ ಗಮನ ಕೊಟ್ಟೆ. Browse ಮಾಡಿ bore ಆಗಿ ಬೇಜಾರೆಲ್ಲಾ ಇಳಿದ ಮೇಲೆ ಆಸೆ ಇಂದ ಹೊರಗೆ ಬಂದೇ............. 

ಎಲ್ಲಿ ನನ್ನ ಮುದ್ದಿನ ಚಂಪಾ? :O ಎರಡೂ ಸುದ್ದಿ ಇಲ್ದೇ ಸ್ವಾಹಾ :D ಆಗ ನನ್ನ  ಹಾಗೂ ಅವರ expression ನೋಡಬೇಕಿತ್ತು. Super ಕಣ್ರಪ್ಪಾ :D ನನಗೆ ಇಲ್ಲಿ ಹೊಟ್ಟೆಲಿ ಬೆಂಕಿ ಬಿದ್ದರೆ ಇವರು ಇಲಿ tinda ಬೆಕ್ಕಿನ ಹಾಗೆ innocent face ದೊಂದಿಗೆ tv ನೋಡ್ತಾ ಇದಾರೆ, ತಡಿಲಿಕ್ ಆಗದೆ ಕೇಳೇ ಬಿಟ್ಟೆ "ಏನ್ರೀ ಇದು ಎಲ್ಲಾ ಖಾಲಿ :O " ಆಚೆ ice ತಿಂದಷ್ಟೇ nice ಆಗಿ "ಹಾ, ನೀ ಬೇಡ ಅಂದ್ಯಲಾ" ಅಂತ. ಮುಂದೆ ನಾ ಏನಾದ್ರೂ ಹೇಳೋ ಅವಶ್ಯಕತೆ ಇದೆ ಏನ್ರೀ ???

ನೀವು ತಿನ್ನಿ ಅಂದಿದ್ದೆ ಸ್ವಾಮಿ ಎರಡೂ ತಿನ್ನು ಅಂದಿರಲಿಲ್ಲಾ .. ನಿಮಗಾಗಿ ತಂದಿದೀನಿ ಅಂದಿದ್ದೆ ನಿಜ ಆದರೆ ಒಟ್ಟಿಗೆ ತಿನ್ನಲು ಒಬ್ಬರೇ ತಿನ್ನಲು ಅಲ್ಲಾ ಸ್ವಾಮಿ ಖಂಡಿತಾ ಅಲ್ಲಾ :c  ....  ನೀವಾದ್ರು ಅರ್ಥ ಮಾಡಿಸಿ :)  


ಯಾರಿಗೆ ಹೇಳೋಣ ನನ್ನ problem ನಾ...  ಈ ಹಾಡು ಈಗ  ನೀವು ಮುಂದುವರಿಸಿ ನಾ ಅಲ್ಲಿವರೆಗೆ ಚಂಪಾಕಲಿ ತರಲು ಮಹಾಲಕ್ಷ್ಮಿ ಗೆ ಹೋಗ್ತೀನಿ . ಕಥೆ ಮುಂದುವರಿಯುವುದು  

till then,

ತಿನ್ನಿ, ತಿನ್ನಿಸಿ health ನ ಚೆನ್ನಾಗಿ ನೋಡ್ಕೊಳ್ಳಿ ;) :e