ಚಿಕ್ಕಂದಿನಲ್ಲಿ ಅಪ್ಪನ Clinic ಗೆ ಯಾರಾದ್ರು Medical Representative ಬರಲಪ್ಪಾ ಅಂತ ಬೇಡ್ತಿದ್ದೆ, ಯಾಕೆ ಗೊತ್ತಾ ಬರುವಾಗ ಅವರು ಯಾವಾಗಲು ಏನಾದ್ರು free gift ತರೋರು ಅದರಲ್ಲಿ ಕೆಲವೊಂದು ತುಂಬಾ interesting ಇರ್ತಿತ್ತು. ಇದಷ್ಟೇ ಅಲ್ಲಾ ಯಾವುದರಲ್ಲಾದ್ರು ಏನಾದ್ರು free ಇದೆ ಅಂತ ಗೊತ್ತಾದ್ರೆ ಸಾಕು ತಗೊಲ್ವಾ ಅಂತಿದ್ದೆ ಆದರೆ ಕೇವಲ ಒಂದನ್ನು ಬಿಟ್ಟು ಅದೇ ನನ್ನ ಬಾಲ್ಯದ friend (ಕನ್ನಡ ಆದರೆ ಗೆಳತಿ / ಗೆಳೆಯ ಅಂತ gender ಹಚ್ಬೇಕಾಗುತ್ತೆ) Horlicks ವಿಷಯದಲ್ಲಿ.
ಚಿಕ್ಕಂದಿನಿಂದಲೂ ನಾ ಎಷ್ಟು Brand Oriented ಆಗಿದ್ದೆ ಅಂದ್ರೆ ಅಬ್ಬಾ ನಾ use ಮಾಡೋ ಕಂಪನಿ products ಬಿಟ್ಟರೆ ಬೇರೆಯ product ಮುಟ್ಟೋ ದಿರಲಿ ಕೆಲವೊಮ್ಮೆ TV ಲಿ ad ಕೂಡ ನೋಡಕ್ ಕೂಡ ಇಷ್ಟ ಪಡ್ತಿರಲಿಲ್ಲಾ. ಸುಮಾರು ೧೫ ವರ್ಷಗಳ ತನಕ Horlicks ನ ಅಭಿಮಾನಿ ಯಾಗಿ ಬೆಳೆಯುತ್ತಿದ್ದ ನಾನು; ಆಗ ಬರಲು ಆರಂಭಿಸಿದ Boost ನ ಜಾಹಿರಾತು ಕಂಡು ದುಃಖ ಆಗೋದು. ಯಾಕೆ ಗೊತ್ತಾ ಅದರಲ್ಲಿ Shettle free ಅದು ಫ್ರೀ ಇದು ಫ್ರೀ ಅಂತ ಕೊಡೋರು. ಅದನ್ನ ನೋಡಿದಾಗ ಒಮ್ಮೆ ಜೋತು ಮುಖ ಹಾಕಿ ಅಪ್ಪನ ಕಡೆ ತಿರುಗಿ ಕೇಳೋದು "ಅಪ್ಪಾ ಬರೇ Boost ಗೆ ಯಾಕೆ free ಕೊಡ್ತಾರೆ Horlicks ಗೆ ಯಾಕೆ ಯಾವಾಗ್ಲೂ ಏನು ಕೊಡೋದೇ ಇಲ್ಲಾ (ಕೊಟ್ರೆ cup, biscuit ಕೊಡೋರು)" ಅಂತ.
ಅದಕ್ಕೆ ಅಪ್ಪನ ಉತ್ತರ ಯಾವಾಗ್ಲೂ "Horlicks ನ ಮಾರ್ಕೆಟಿಂಗ್ ಚೆನ್ನಾಗಿದೆಯಲ್ಲಾ ಮಗಾ ಅದಕ್ಕೆ " ಅಂತ. ಆಗ ನಾನು ಯಾಕಾದ್ರು ಈ Horlicks ಗೆ ಅಷ್ಟು ಡಿಮ್ಯಾಂಡ್ ಛೆ " ಅಂತ ಮನಸಲ್ಲಿ ಬಯ್ಕೋತಾ, ಒಂದಿಲ್ಲಾ ಒಂದು ದಿನ free ಕೊಟ್ಟೆ
ಕೊಡ್ತಾರೆ ಅನ್ನೋ ನಂಬಿಕೇಲಿ ಕಾಲ ದೂಡುತ್ತಾ ಬಂದು ಶಾಲೆ ಯಿಂದ ಕಾಲೇಜು ಕೆಲಸ ಸೇರಿ ಮದುವೆ ಆಗಿ ಮೈಸೂರು ಸೇರುವ ಹೊತ್ತಿನಲ್ಲಿ Horlicks ಕುಡಿಯೋದು ಬಿಟ್ಟು ವರುಷಗಳೇ ಕಳೆದು ಹೋಗಿದ್ದವೇನೊ. ಅಂದು ಅಗಸ್ಟ್ ೧೨,೨೦೧೩ ಯಾವುದೋ ಕಾರಣಕ್ಕೆ ಅಂಗಡಿ ಗೆ ಹೋದಾಗ ರಾಶಿ ರಾಶಿ compass box ನೋಡಿ ಕಣ್ಣು ಅಗಲ ಆಯಿತು, ಆದರೆ compass box ನೋಡಿ ಅಲ್ಲಾ ಅದರ ಮೇಲೆ ಬರೆದದ್ದು ನೋಡಿ "Free with Horlicks". ಅದನ್ನ ನೋಡಿ ನನ್ನ ಚಿಕ್ಕಂದಿನ ಆಸೆ ನನ್ನ ಅರಿವಿಲ್ಲದೆ ಗರಿ ಬಿಚ್ಚಿ ನಿಂತು ನನಗೆ ಗೊತ್ತಿಲ್ಲದೆ ಕಣ್ಣಲ್ಲಿ ಮಿಂಚು, ಮನಸಲ್ಲಿ ಆಸೆ ಈಡೇರಿದ ಖುಷಿ, ತಡವಾಗಿ ಈಡೇರಿದಕ್ಕೆ ಸ್ವಲ್ಪ ಬೇಸರ. ಒಟ್ಟಿನಲ್ಲಿ ಯೋಚನೆಗಳು Gadbad Icecream ನ ಮಿಶ್ರಣ ವಾಗಿತ್ತು. ಒಮ್ಮೆ ಮನಸು ಹೇಳಿತು ಆಗ ಆಗ್ಲಿಲ್ಲಾ at least ಈಗಾದ್ರು ತಗೋ ಅಂತ. ಆದರೆ ಇನ್ನೊಂದು ಕಡೆ ಎಲ್ಲದಕ್ಕೂ ಒಂದು time ಇರುತ್ತೆ ಆಸೆ ಪಡಲಿಕ್ಕೆ ಕೂಡ :) ಈಗ ತಡ ಆಯ್ತು ಅಂತ ಮನಸಲ್ಲೇ ನಗ್ತಾ ಮಿಶ್ರ ಭಾವದಿಂದ ಹೊರಟೆ.
ಈಗ ನೀವೇ ಹೇಳಿ, ಅಷ್ಟೊಂದು Horlicks ಮನಸಿಗೆ ಹಚ್ಚಿಕೊಂಡು ಅದನ್ನೇ ಕುಡಿತಾ ಬಂದ್ರೂ ಕೂಡ ನನ್ನ ಈ ರೀತಿ ಕಾಯಿಸಿ, ಕಾಡಿಸಿ ಇಷ್ಟು ವರ್ಷದ ನಂತರ free free ಅಂತ ತಂದಿದಾರಲ್ಲಾ ಇದು ಸರೀನಾ, ನನ್ನ ಅಭಿಮಾನಕ್ಕೆ ಕೊಡುವ ಬೆಲೆ ಇದೇನಾ...
ನೀವು ಉತ್ತರ ಹೇಳಿ, ಅಲ್ಲಿ ತನಕ ನಾ Horlicks ಕುಡಿದು ಬರತೀನಿ ;) :P :D
Bye ಕಣ್ರೋ ...