Monday, August 22, 2011

ಅಣ್ಣಾ - ಬಣ್ಣಾ



ದೇಶದ ಬದಲಾವಣೆಗಾಗಿ, ಕ್ರಾಂತಿಗಾಗಿ ಹುಟ್ಟಿಹರು ನಮ್ಮ ಅಣ್ಣಾ,
ತೆರಿಸಲೆಂದು ಇಲ್ಲಿ ಮಲಗಿದವರ ಕಣ್ಣಾ,
ತೋರಿಸಲೆಂದು ನಮ್ಮ ಸರ್ಕಾರದ ನಿಜವಾದ ಬಣ್ಣಾ.

ಶಾಂತಿ ಸೂಚಕ ಈ ನಮ್ಮ ಭಾರತ,
ನಿರೂಪಿಸಲು ಹುಟ್ಟಿ ಬಂದರು  ನಮ್ಮ ಅಣ್ಣಾ ಅತಿರತ
 ಎಳೆ ತಂದರು ಎಲ್ಲರ ತೋರಿ ತಮ್ಮ ಸೆಳೆತ
ಕಾಣುತಿದೆ ಈಗ ಎಲ್ಲರ ಹೃದಯದಲಿ ದೇಶಭಕ್ತಿಯ ಮಿಡಿತ.

ಬದಲಾಗದು ಈ ದೇಶ ಎನ್ನುತ್ತಾ ಕುಳಿತಿದ್ದೆವು ನಾವೆಲ್ಲಾ
ಆಗುವುದೆಂಬ ಸುದ್ದಿ ಹರಡಿದೆ ಈಗ ಎಲ್ಲೆಲ್ಲಾ
ಇತಿಹಾಸದ ಪುಟದಲ್ಲಿ ಬರೆದಿಡಬೇಕು ಅಣ್ಣಾ ರ ಹೆಸರು,
ಮಾಡಿಹರು ದೇಶಭಕ್ತಿಯ ಎಲ್ಲಾ ವರ್ಗದ ಉಸಿರು.

ಜೈ ಹೋ ಅಣ್ಣಾ!!  

ಉದ್ದ ಮೂಗಿನವರು

 ಸುಳ್ಳು ಹೇಳಿದ್ರೆ ಮುಗು ಉದ್ದ ಬೆಳೆಯುತ್ತೆ

ಚಿಕ್ಕಂದಿನಲ್ಲಿ  ಸುಳ್ಳು ಹೇಳಿದ್ರೆ ಮುಗು ಉದ್ದ ಬರುತ್ತೆ ನೋಡು ಅಂತ ಹೆದರಿಸುವುದಿತ್ತು. ಈಗ ಸುಳ್ಳು ಹೇಳಿ ಉದ್ದ ಆಯ್ತೋ ಇಲ್ಲಾ ನಿಜ ಹೇಳಿ ಆಯ್ತೋ ಅಂತ ಯೋಚಿಸೋದು ಬೇಡ. ನಾ ಹೇಳೋದಿಷ್ಟೇ ಒಂದು ಕ್ಷಣ ಉದ್ದ ಮೂಗಿರುವವರ ಮುಖಗಳನ್ನೆಲ್ಲಾ ನಿಮ್ಮ ಮುಂದೆ ತಂದುಕೊಳ್ಳಿ. ತಂದ್ರಾ ? ಸರಿ.

 ಅಣ್ಣಾ ಹಜಾರೆ ಯವರ ಚಿತ್ರ ನೋಡುವಾಗ sudden ಆಗಿ ಒಂದು ವಿಷಯ ಹೊಳಿಯಿತು ಅದೇನಪ್ಪಾ ಅಂದ್ರೆ  ಯಾರ ಮೂಗು ಉದ್ದ ಇರುತ್ತೋ ಅವರು ಎಲ್ಲಿದ್ದರೂ ಸ್ವಲ್ಪ special ಇರುತ್ತಾರೆ ಮತ್ತು ಅವರಿಗೆ ಯಾವಾಗಲೂ ಬೇರೆ ಯವರಿಗೆ ಹೋಲಿಸಿದರೆ ಜನ ಬೆಂಬಲ ಜಾಸ್ತಿ ಅಥವಾ ಸ್ವಲ್ಪ ಜಾಸ್ತಿ ಪ್ರಸಿದ್ಧಿ ಹೊಂದಿರುತ್ತಾರೆ ಎಂದು. ಹೇಗೆ ಅಂತೀರಾ !!! ಕೆಳಗೆ ಓದಿ ಗೊತ್ತಾಗುತ್ತೆ.

 ಗಾಂಧೀಜಿ ಅವರ ಮೂಗು ಉದ್ದ ಇತ್ತಲ್ವೆ? ಜನಕ್ಕೆ ಸ್ವಾತಂತ್ರ ಯಾರು ತಂದು ಕೊಟ್ರು ಅಂತ ಕೇಳಿದ್ರೆ ಯಾರ ಹೆಸರು ಹೇಳ್ತಾರೆ  ಗಾಂಧೀಜಿ ಅಂತ ತಾನೇ? ಈಗ ಅಣ್ಣಾ ಹಜಾರೆ ಯವರನ್ನೇ ತೆಗೆದುಕೊಳ್ಳಿ ಅವರ ಮೂಗು ಕೂಡ ಉದ್ದ. ಈ ದೇಶದಲ್ಲಿ ಹೋರಾಡುತ್ತಿರುವವರು ಎಷ್ಟು ಜನ ಇದ್ದಾರೆ ಆದರೆ ಅವರಿಗೆಲ್ಲಾ ಅಣ್ಣಾರಂತೆ ಜನ ಬೆಂಬಲ ಸಿಕ್ಕಿದೆಯೇ!! ಇಲ್ಲಾ ತಾನೇ?

ಕನ್ನಡದ ಮೇರು ನಟ ಡಾ|| ರಾಜ ಕುಮಾರ, ಕನ್ನಡ ದಲ್ಲಿ ಇದುವರೆಗೂ ಎಷ್ಟೊಂದು ಒಳ್ಳೆ ಕಲಾವಿದರು ಬಂದು ಹೋಗಿದ್ದಾರೆ ಆದರೆ ಕನ್ನಡ ಎಂದ ಕೂಡಲೇ ನೆನೆಸುವುದು ಯಾರನ್ನು? ರಾಜ ಕುಮಾರ  ಅಂತಲ್ಲವೇ. ಅವರ ಮೂಗು ಹೇಗಿತ್ತು ನೆನಪಿಸಿ ಕೊಳ್ಳಿ.

ಇನ್ನು ನನ್ನ ಅಮ್ಮ ಡಾ|| ವನಿತಾ, ನನ್ನ ಅಪ್ಪ ವೈದ್ಯಕೀಯ, ರಾಜಕೀಯ, ಕ್ರೀಡೆ, ಸಮಾಜ ಸೇವೆ  ಎಲ್ಲದರಲ್ಲಿ ತೊಡಗಿದ್ದರೂ ಕೂಡ ನಮ್ಮ ಊರಿನಲ್ಲಿ ಹೆಸರಿನಲ್ಲಿ ಅಮ್ಮನದೇ ಮುಂದು ಹಾಗೂ ನನ್ನ ಅಮ್ಮನಿಗೆನೇ ಹೆಚ್ಚು ಬೆಂಬಲ. ಅವರ ಮೂಗು ಕೂಡ ಉದ್ದವೇ.

ಜವಾಹರಲಾಲ್ ನೆಹರು, ಇಂದಿರಾ ಗಾಂಧೀ ಯವರ ಮೂಗು ಕೂಡ ಉದ್ದವೇ ಇತ್ತು, ಇಂದು ಮಕ್ಕಳ ದಿನಾಚರಣೆ, ಮಹಿಳೆಯರಿಗೆ ಆದರ್ಶ ಹೀಗೆ ಹಲವಾರು ಕಾರಣ ಗಳಿಂದ ಪ್ರಸಿದ್ಧಿ ಹಾಗೂ ನೆನಪಲ್ಲಿ ಬರುವ ಪ್ರಧಾನ ಮಂತ್ರಿಗಳು ಇವರಲ್ಲವೇ?

ಇನ್ನೂ ಒಬ್ಬರ ಹೆಸರು ನಾ ತೆಗೆದು ಕೊಳ್ಳದಿದ್ದರೆ ನನ್ನ ಈ ಲೇಖನವೇ ವ್ಯರ್ಥ. ಅದುವೇ ನಮ್ಮೆಲ್ಲರ ಪ್ರೀತಿಯ ಗುರೂಜಿ ಶ್ರೀ ಶ್ರೀ ರವಿ ಶಂಕರ್. 150 ಕ್ಕೂ ಹೆಚ್ಚು ದೇಶಗಳಲ್ಲಿ ಜಾತಿ ಧರ್ಮ ಸೀಮೆ ಗಳನ್ನೂ ದಾಟಿ ಸುದರ್ಶನ ಕ್ರೀಯೆ ಯಿಂದ ಮಾನಸಿಕ, ದೈಹಿಕ, ಬೌಧ್ಧಿಕ , ವೈಯಕ್ತಿಕ ಜೀವನ ಹಾಗೂ ವ್ಯಕ್ತಿತ್ವ ದಲ್ಲಿ ಸುಧಾರಣೆ ತರಲು ಸಹಾಯ ಮಾಡಿ ಕೊಟ್ಯಾನು ಕೋಟಿ ಜನರ  ಮನದಲ್ಲಿ ಮನೆ ಮಾಡಿರುವ ನಮ್ಮ ಗುರೂಜಿ ಯ ಮೂಗು ??? ಹೇಗೆ ??  

ಒಂದು ನಿಮಿಷ, ಎಲ್ಲಿ ಈಗ ನೀವು ನಿಮ್ಮ ಮೂಗು ಕೂಡ ನೋಡಿಕೊಳ್ಳಿ, ಯಾರಿಗೆ ಗೊತ್ತು ನಾಳೆ ನೀವು ಕೂಡ ಇವರಲ್ಲಿ ಒಬ್ಬರಾಗ ಬಹುದು.

 ಅಲ್ಲಿಯವರೆಗೆ... ನಮಸ್ಕಾರ ನಮಸ್ಕಾರ ನಮಸ್ಕಾರ.