Tuesday, November 27, 2012

ನಾ ಮತ್ತು ಬಿಳಿ ಕಾಗೆ


ನನ್ನ ಸಾರು - ಸಾಂಬಾರು 
 

 ಈ  Princess Nov 1 ಕರ್ನಾಟಕ ರಾಜ್ಯೋತ್ಸವದ ದಿನ ಮದುವೆ ಆಗಿ ರಾಜಕುಮಾರನ ಜೊತೆ ಮೈಸೂರಿಗೆ 15 ಕ್ಕೆ ಬಂದಿಳಿದು 16 ಕ್ಕೆ ನನ್ನ ಅತ್ಯಂತ ಅಲರ್ಜಿ ದಾಯಕ ಕಾಯಕ ಅಡುಗೆ ಕೆಲಸಕ್ಕೆ ಕಾಲಿಟ್ಟು ಅನ್ನ  ಮಾಡಿ  ಹೆದರುತ್ತಲೇ  ಬೇಳೆ ಸಾರು ಮಾಡಲು ಅಣಿಯಾದೆ. ಅಂತು ಇಂತೂ ಮಾಡಿಯೂ ಆಯಿತು. ನನಗೆ ಊಟವೊಂದು ಕೆಲಸ ವಾದರೆ ಅವರಿಗೆ ಅದು ಪ್ರಾಣ ( ಅಂತಹ ಗಂಡನೇ ಸಿಗುವ  ಎಂದು MCA ಮಾಡುವಾಗ ವಿದ್ಯಾ ಎಷ್ಟೋ ಬಾರಿ ಕೀಟಲೆ  ಮಾಡಿ ಅಂತೂ ದೇವರು ಅವಳ ಆಸೆ ನೆರವೇರಿಸಿದ :P ). ಅಂತಹುದರಲ್ಲಿ ನನಗೆ ಭಯ ನಾಚಿಗೆ ; ಎಲ್ಲಿ ಅವರ ಮುಂದೆ ಹಾಗೂ ನಂತರ ಎಲ್ಲರ ಮುಂದೆ ಚಾಳಿಸಿ ಎಲ್ಲರ ಮುಂದೆ ಮರ್ಯಾದೆ ಹೋಗುವುದೊ ಎಂದು ಅದಕ್ಕಿಂತ ಹೆಚ್ಚು  ಪಾಪ ಹಸಿದು ಬಂದಾಗ ಅದರಲ್ಲೂ  ಮೊದಲ ದಿನವೇ  ಅವರಿಗೆ ನನ್ನಿಂದ ತೊಂದರೆ ಆಗುತ್ತಲ್ಲಾ ಅಂತ ಬೇಜಾರಾಯಿತು ಜೊತೆಗೆ ಚಿಂತೆ ಕೂಡ. ಪಟ್ಟನೆ ಅವರಿಗೆ phone ಮಾಡಿದೆ " ಬರುವಾಗ ಸಾರು ಅಥವಾ ಸಾಂಬಾರು ತಗೊಂಡು ಬನ್ನಿ risk ತಗೋಬೇಡಿ. ಯಾಕೋ ನಂಗೆ ಸರಿಯಾಗ್ತಿಲ್ಲಾ ಅಂತ. ಅದಕ್ಕೆ ಅವರು ಪರವಾಗಿಲ್ಲಾ ನನಗೆ ನಡಿಯುತ್ತೆ ಅಂದರು. ಅವರು ಬಂದು ತಿಂದು ನೋಡುವ ತನಕ ನನಗೆ ಚಡಪಡಿಕೆ.

ಅಂತೂ  ಅಕ್ಷಯ್ ಬಂದರು, ಪ್ಲೇಟ್ ನಲ್ಲಿ ಸಾರು ಹಾಕಿದ  ಕೂಡಲೇ "ಆಹ್, ಒಳ್ಳೆ  ಪರಿಮಳ  ಬರ್ತಿದೆ " ಅಂದರು, ನಾ ಮತ್ತಿಷ್ಟು nervous. ಮನಸಲ್ಲೇ ಓ  ದೇವ್ರೇ ಎಂದೆ ಉಸಿರು ಬಿಗಿ ಹಿಡಿದು. ಕಡೆಗೆ  ಮುಧೋಳ್  ನ ಜೋಳದ ರೊಟ್ಟಿ ಜೊತೆಗೆ ತಿಂದು ಹೇಳಿದ್ರು ಚೆನ್ನಾಗೇ ಆಗಿದ್ಯಲ್ಲಾ  ಅಂತ. ನಾ doubt ನಲ್ಲಿ ಅವರ ಕಡೆ ನೋಡಿದೆ. ಅವರು ಹೇಳಿದ್ರು ನಿನ್ನ ಸಮಾಧಾನಕ್ಕೆ ನಾ ಹೇಳ್ತಿಲ್ಲಾ  ಊಟದ ವಿಷಯದಲ್ಲಿ ನಾ ಸುಳ್ಳು ಹೇಳೊದಿಲ್ಲಾ ನಿಜವಾಗಲು ಚೆನ್ನಾಗಾಗಿದೆ ಅಂತ, ಆಗ ನಿಜ ಮಾಡಿದಕ್ಕೂ   ಸಾರ್ಥಕ ಅನ್ನಿಸ್ತು. ರಾತ್ರಿಗೆ ಹೆದರಿ ಹೆದರಿ ಮಜ್ಜಿಗೆ ಹುಳಿ ಮಾಡಿ taste ನೋಡಲು ಹೇಳಿದೆ.

ಅವರು " ಚೆನ್ನಾಗೆ ಮಾಡ್ತಿಯಲ್ಲ ಅಡಿಗೆ !!! ಉಪ್ಪು ಖಾರ ಎಲ್ಲಾ ಸರಿ ಇದೆ, ಬೇಕಂತ ಹೇಳ್ತಿಯೋ ಹೇಗೆ ಎಲ್ಲಿ ಅಡಿಗೆಲಿ ಅದು ಇದು ಅಂತ ಜಾಸ್ತಿ ಮಾಡಕ್ ಹಚ್ತಾರೆ ಅಂತ ಹಾ ಹೌದು ಅಂದರು ". ಊಟ ಆದ ನಂತರ ನನ್ನ ಮಾವನಿಗೆ phone ಮಾಡಿ ಅಡಿಗೆ ಚೆನ್ನಾಗಿ ಮಾಡ್ತಾಳೆ ಅಂತ ಹೇಳಿದ್ರು , ಆಮೇಲೆ ನನ್ನ ಕೈ ಗೆ ಫೋನ್ ಕೊಟ್ಟಾಗ ಮಾವ ಹೇಳಿದ್ರು "ಹೆಂಡತಿ ಏನು  ಮಾಡಿದ್ರು ತಿನ್ನಲೇ ಬೇಕು, ನನ್ನ ಮುಂದೆ ಅಡಿಗೆ ಚೆನ್ನಾಗಿ ಆಗಿಲ್ಲಾ  ಅಂದ್ರು ಚೆನ್ನಾಗಾಗಿದೆ ಅಂತಾನೆ ಹೇಳ್ತಾನೆ " ಅಂತ ಹೇಳಿ ನಗಾಡಿದ್ರು. ಅದಾದ ಮೇಲೆ ನನ್ನ ಅಪ್ಪನಿಗೆ ಫೋನ್  ಹೋಯಿತು " ಇವತ್ತು ಪ್ರೀತು first class ಬೇಳೆ ಸಾರು ಮಜ್ಜಿಗೆ ಹುಳಿ ಮಾಡಿದ್ಲು" ಅಂತ ನನ್ನ ಕಟ್ಟಿಕೊಂಡ ಗಂಡ ಜೋಷ್ ನಲ್ಲಿ ನನ್ನ ಜನ್ಮ ದಾತನಿಗೆ ಹೇಳಿದ್ರೆ ಅವರು ಒಂದು ನಿಮಿಷ silent ಆಗಿ ಆಮೇಲೆ ಹೌದಾ ಅಂದರು, ಮತ್ತೆ ಅಕ್ಷಯ್ ಸುಳ್ಳು ಹೇಳ್ತಿಲ್ಲಾ ನಿಜವಾಗಲೂ ಚೆನ್ನಾಗಿ ಆಗಿತ್ತ್ ಅಂತ ನಂಬಿಸಲು ಹೋದರು. ಎಷ್ಟು ನಂಬಿದರೋ  ಬಿಟ್ಟರೋ ಗೊತ್ತಿಲ್ಲಾ ರೀ. ಒಟ್ಟಿನಲ್ಲಿ ಬೇಕಿತ್ತಾ ಹೇಳೋದು ಅನ್ನಿಸ್ತು .

ಇದಾದ ಮರುದಿನ ಅಮ್ಮ  ( ನನ್ನ ಅಜ್ಜಿ ) ನನ್ನು  ಕೇಳಿ ಉಪ್ಪಿಟ್ಟು ಮಾಡಿದೆ, I won't say it was superb ; But it was ok and ಯಾರಾದ್ರೂ ತಿನ್ನೋ ಹಾಗಿತ್ತು. ಅಕ್ಕನಿಗೆ ಫೋನ್ ಮಾಡಿ ಅಜ್ಜಿ ಹೇಳಿದರಂತೆ ಪ್ರೀತು ಫೋನ್ ಮಾಡಿದ್ಲಾ ಉಪ್ಪಿಟ್ಟು ಮಾಡಿದ್ಲಾ ಹೇಗಾಯ್ತಂತೆ ಅಂತ, ಅದಕ್ಕೆ ಅಕ್ಕಾ ಅಮ್ಮ ನಿಗೆ ಫೋನ್ ಮಾಡು ಅಂದಳು. ಮಾಡಿದೆ. ಹೇಗಾಯ್ತು ಕೇಳಿದ್ರು. ಪರ್ಫೆಕ್ಟ್ ಆಗಲು ಏನ್ Miss ಆಯ್ತೋ ಅದನ್ನ ಹೇಳಿದೆ ಬೇಜಾರಿನಲ್ಲಿ. ಹಿಂದಿನಿಂದ ಅಕ್ಷಯ್ "ಏಯ್, ಚೆನ್ನಾಗೆ ಆಗಿದೆ" ಅಂತ
ಹೇಳಿದ್ರು. ಅಮ್ಮಾ ಏನಾಯ್ತ್ ಕೇಳಿದಾಗ ಏನಿಲ್ಲಾ ಚೆನ್ನಾಗೇ ಇದೆ ಅಂತ ಹೇಳ್ತಿದಾರೆ ಅಂತ ಹೇಳಿದೆ. ಜೋರಾಗಿ ನಗಾಡಿ ಇಲ್ಲಾ ಸುಳ್ಳು ಹೇಳ್ತಿದಾನೆ ಅಂದರು :P :( 

ಅಲ್ಲಾ ಸ್ವಾಮಿ , ಸುಮಾರು ೧೦ ವರ್ಷದ ಹಿಂದೆ ನಾ ಮೈಸೂರ್ ಟ್ರಿಪ್ ಗೆ ಬಂದು ಹೋದಮೇಲೆ ನನ್ನ ಮಾಮ ಮೈಸೂರ್ Zoo ಬಿಳಿ ಕಾಗೆ ನೋಡಿದ್ಯಾ ಕೇಳಿದಾಗ ಇಲ್ಲಾ ಇರಲಿಲ್ಲಾ ಅಂದೆ. ಹಿಂದೆ ಇತ್ತಂತೆ ಅಂದಾಗ ನಂಬಿದೆ. ಆ ನಂತರ ನನ್ನ ಮನೆಯವರಿಗೆಲ್ಲಾ ಹೇಳಿ ಕೇಳಿದಾಗ ಹೌದಾ, ಇರಬಹುದೇನೋ ಅಂತ ಹೇಳಿ ನಂಬಲಿಕ್ಕೆ Ready ಆದರು. ಈಗ ಇಷ್ಟು ವರ್ಷದ ನಂತರ ಅವರ ಮಗಳು ಅದೇ ಮೈಸೂರ್ ಗೆ ಹೋಗಿ ಸೇರಿದಾಳೆ. ಅಳಿಯ ಮಗಳು ಚೆನ್ನಾಗಿ ಅಡುಗೆ ಮಾಡ್ತಾಳೆ ಅಂದರೆ ಬಿಳಿ ಕಾಗೆ ಕಥೆ ಥರ ಸುಮ್ಮನೆ ನಂಬಬಹುದಲ್ವಾ :P

ಅಲ್ಲಾರಿ, ಅಪ್ಪ ಅಮ್ಮಂಗೆಲ್ಲಾ ತಲೆ ಚಿಟ್  ಹಿಡಿದು ಕೆರ ಹಿಡ್ಕೋಳೊ ಹಾಗಿರೋ ಶಾಲೆ Books, Course ನೋಡಿದರೂ ಮಕ್ಕಳು ಚೆನ್ನಾಗಿ ಮಾರ್ಕ್ಸ್ ತೆಗಿಬೇಕು ತೆಗಿತಾರೆ ಅನ್ನೋ ನಂಬಿಕೆ ಇಟ್ಕೊಂಡು ಓಡಿಸ್ತಾರೆ. ನಂಬಿಕೆ ಇಂದ ಕವಿ ಅಲ್ಲದ ನನ್ನ ಸಾಹಿತ್ಯ ಸಮ್ಮೇಳನಕ್ಕೆ ಕಳಿಸಿ ಸ್ಫೂರ್ತಿ ಕೊಟ್ಟರು , BA ಮಾಡಿದ ನಾನು MCA ಮಾಡುವಾಗ ನಂಬಿಕೆ ಕಳೆದು ಕೊಂಡಾಗ ಎಲ್ಲರಿಗೂ ನಾ ಮಾಡ್ತಿನಿ ಅನ್ನೋ ನಂಬಿಕೆ ಇತ್ತು.

ಆದ್ರೆ... ಮಾತ್  ಎತ್ತಿದರೆ  ತಲೆ ಬಾಚ್ಕಳಿ, powder ಹಾಕೋಳಿ  ಅನ್ನೋ ಹಾಗೆ  ಸದಾ Gas ಹಚ್ಚಿ ಬೇಳೆ ಬೇಯಿಸಿ ಸಾಂಬಾರು ಪುಡಿ, ಖಾರ ಪುಡಿ, ಉಪ್ಪು, ಒಗ್ಗರೆ  ಹಾಕಿ ಅಂತ ಹೇಳೋ ಮಾಡೋ ಸಾರನ್ನ ಮಾಡಿದೆ ಅಂದರೆ ಎಂತ ಹೇಳೋದು ಮಾರಾಯ್ರೆ ... ಅಡುಗೆ ಅನ್ನೋದು ನಾವ್ ಬರಿಯೋ  Theory, Practical, Viva Exam ತಗೊಳ್ಳೋ ಡಬ್ಬಾ Marks ಗಿಂತ ಕಷ್ಟಾನಾ :O

ಬಿಳಿ ಕಾಗೆ ಇದೆ ಎಂದು  ಹೇಳಿದರಾದರೂ ನಂಬು ಆದರೆ ಪ್ರೀತು ಅಡಿಗೆ ಚೆನ್ನಾಗಿ ಮಾಡಿದಳೆಂದರೆ ಅಲ್ಲಾ ಅನ್ನೋ ಹೊಸ ಗಾದೆ ಹುಟ್ಟಿದಂತಾಗಿದೆ ನನ್ನ  ಪಾಲಿಗೆ , ಮಂಡೆ ಸಮ ಇಜ್ಜಿ  ಮಾರಾಯ್ರೆ , ಸಮ  ಇಜ್ಜಿ  :( Oh , No. ಈಗ ತಾನೇ ಬಂದ ಬಿಸಿ ಬಿಸಿ ಸುದ್ದಿ. ಅಕ್ಷಯ್ ನಿಂದ ನನ್ನ ಅಕ್ಕನಿಗೆ Phone; ನನ್ನ ಅಡುಗೆಯ ಹೊಗಳಿಕೆ-ಸ್ವಲ್ಪ ವಿರಾಮ-ಅಕ್ಕನಿಂದ ಅಕ್ಷಯನಿಗೆ ಸಾಂತ್ವನ :(

ಕಥೆ ಮುಂದುವರಿಯುವುದು ...

ಅಲ್ಲಿವರೆಗೆ ಯಾನ್ ಬರ್ಪೆ :)