Wednesday, March 30, 2011

ಬಯಸದೇ ಬಂದ ಭಾಗ್ಯ


ಆ ದಿನ ಬೆಳಿಗ್ಗೆ ಎಂದಿನಂತೆ late ಆಗಿ  ಎದ್ದು ಕಣ್ಣು ತಿಕ್ಕುತ್ತಾ ಹೊರಗೆ ಸೋಫಾ ಮೇಲೆ ಬಂದು ಕುಳಿತು ಮತ್ತೊಂದು round ನಿದ್ದೆ ಮಾಡುವ plan ನಲ್ಲಿಯೇ ಇರುವಾಗ ಕಣ್ಣಿಗೆ ಒಂದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಕಂಡಿತು, ಏನಿದ್ಯಪ್ಪ ಈ ಬಾರಿ ವಿಶೇಷ, ಯಾರ್ಯಾರು ಬರ್ತಿದ್ದಾರೆ ನೋಡ್ವಾ ಅಂತ ಓದುತ್ತಾ ಹೋದೆ ನೋಡಿ ಅಲ್ಲಿರುವ ಹೆಸರಿನ ಪಟ್ಟಿ ಕಂಡು ನನ್ನ ಇರೋಬರೋ ನಿದ್ದೆಯೆಲ್ಲಾ .... ಓಡಿ ಹೋಯಿತು, ನನ್ನ ಹೆಸರೂ ಇತ್ತು ಅಂತ separate ಆಗ್ ಬೇರೆ ಹೇಳಬೇಕಾ ಸ್ವಾಮಿ ಇಲ್ಲಾತಾನೆ !!!!
ಇಂಗು ತಿಂದ ಮಂಗನಂತಾಗಿತ್ತು ನನ್ನ ಕಥೆ. ಅದೇನು ಮಾಮೂಲಿ ಕಾರ್ಯಕ್ರಮವೇ ಆಯ್ತಪ್ಪ ಕೂತು ಬರೋಣ ಅನ್ಲಿಕ್ಕೆ ?

" ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ " ಅದರಲ್ಲಿ ಬರೋ ಚುಟುಕು ಗೋಷ್ಠಿಯ ಪಟ್ಟಿಯಲ್ಲಿ ನನ್ನ ಹೆಸರೂ ಇತ್ತು. ನಾ ಎಲ್ಲಿ ಅದು ಎಲ್ಲಿ. ನನಗೆ ಕೇಳದೆ ಹೇಗ್ ಹಾಕಿದ್ರಿ ಹೆಸರು ಅಂತ ಕೇಳಿದ್ರೆ ಏನೋ ನಮ್ಮ ಹುಡುಗಿ ಅಂತ , ಅಪ್ಪಗ್ ಬಂದು ಕೇಳಿ ಹಾಗೆ ಹಾಕ್ಬಿಟ್ಟೇ ಅಂತ ಅವ್ರು ಅಂದರೆ ಈಚೆ ಅಪ್ಪ ವ್ಹಾ! ನನ್ನ ಮಗಳಿಗೂ chance ಸಿಗ್ತಲ್ಲಾ ಅಂತ ಹೂ ಅಂದೇ ಅಂದರು. ಒಟ್ಟಿನಲ್ಲಿ ಆಗಿದ್ದ್ ಇಷ್ಟೇ ನನ್ನ ತಂದೆ ವೃತ್ತಿಯಲ್ಲಿ ವೈದ್ಯರಷ್ಟೇ ಅಲ್ಲಾ ಬರಹಗಾರರು ಕೂಡ, ಹಿಂದೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾಗಿದ್ದರು ಹಾಗೂ ಆ ಬಾರಿ ನಮ್ಮ college ನ lecturer ರೇ  ಅಧ್ಯಕ್ಷರಾಗಿದ್ದರು ಸಾಲದೆಂಬಂತೆ ತಂದೆಗೆ ತುಂಬಾ ಪರಿಚಯ, ಅಪ್ಪ ಹೇಳದಿದ್ದರು ಅದು ಹೇಗೋ ಆಗಿ ನನ್ನ ಹೆಸರೊಂದು print ಆಗಿ ಎಲ್ಲಾ ಕಡೆ ಹಂಚಿ ಅಂತು ಕಾರ್ಯಕ್ರಮಕ್ಕೆ ಎರಡು ದಿನ ಇರೋವಾಗ ನನಗೆ ವಿಷಯ ಬಂದು ತಲುಪಿದ್ದು ನಿಜಕ್ಕೂ ನನ್ನ ಪೂರ್ವ ಜನ್ಮದ ಪುಣ್ಯ ಕಣ್ರೀ..

ಏನೋ ತಮಾಷೆಗೆ ಬಾಲಿಶವಾಗಿ ಬರಿಯುತ್ತಿದ್ದುದು ನಿಜ, ಆದರೆ ಹಾಗೆಂದು ಅದನ್ನೇ ಅಲ್ಲಿ ನೆರೆದಿರುವ ಸಾವಿರಾರು ಜನರ ಮುಂದೆ ಹೇಳಲಾದೀತೆ !!!! ಬೆಕ್ಕಿಗೆ ಚೆಲ್ಲಾಟ - ಇಲಿಗೆ ಪ್ರಾಣ ಸಂಕಟ. ವಾದ ಮಾಡ ಹೋದರೆ ನನ್ನ ಮಕ್ಕಳಿಗೆ ತಮ್ಮ ಮೇಲೆ confidence ಇಲ್ಲದೆ  ಗಂಟು ಹೋಯಿತು ಎನ್ನುವ comment ಬೇರೆ. ಕೊನೆಗೆ ಬೇರೆ ದಾರಿ ಇಲ್ಲದೇ ..  "ಆಯ್ತು ಈಗ ನೀನೆ ಹೇಳಿಕೊಡು ನನಗೆ ಗೊತ್ತಿಲ್ಲಾ " ಅಂತ ಕೂತೆ. ಜಪ್ಪಯ್ಯ ಅಂದ್ರು ಕೇಳಲಿಲ್ಲಾ ಅಂತು ನಾನೇ ಹಾಗೂ ಹೀಗೂ .. 
ಅಂತೂ ಇಂತೂ  ಹಿಂದಿನ ದಿನ ಬರೆದು ಮುಗಿಸಿ ಅಪ್ಪನಿಗೆ ತೋರಿಸಿದೆ ok ನು ಅಂದ್ರು ಬಿಡಿ. 

ಈಗ ಕೊನೆ.. ತಯಾರಿಗೆ  ಪುಣ್ಯ ಅಪ್ಪ ಸಹಾಯಕ್ಕೆ ಬಂದು ಹಾಗೆ discuss ಮಾಡ್ತಾ ಕೂತಾಗ ಯಾವುದೊ ಹಳೇ diary ಯಲ್ಲಿ ಇದ್ದ ಒಂದು ತುಂಡು ಕಾಗದದ ಮೇಲಿನ ಒಂದೇ ಒಂದು line ನನ್ನ life ನ story ಗೆ जबरदस्त तड़का ಹಾಕಿತು. ಆ line ಹೀಗಿದೆ " ಇಲಿ ಬೆಕ್ಕ ನೋಡಿ ನಕ್ಕರೆ ಪಕ್ಕದಲ್ಲೇ ಒಂದು ಬಿಲವಿದೆ ಎಂದರ್ಥ " ಇದೊಂದು ಗಾದೆ ಮಾತು. ಆಗ ಅಪ್ಪ ತಟ್ಟನೆ ಏನೋ ಹೇಳಿದರು ಎಲ್ಲರಿಗೂ ಹಿಡಿಸಿತು ಅದನ್ನೇ ಚುಟುಕು ಮಾಡಿ ಹೇಳೊದು ಅಂತ ನಿರ್ಧಾರವಾಯಿತು. ಈಗ ಹೇಗೆ start ಮಾಡಬೇಕು.. ಹೇಗೆ ಹೇಳಬೇಕು.. ಹೇಗೆ end ಮಾಡಬೇಕು ಅಂತ ಹೇಳಿಕೊಟ್ಟರು. ಆ ನಂತರ ಹೇಳಿದ್ದೆ ಹೇಳಿದ್ದು ಕನ್ನಡಿ ಮುಂದೆ, ಮನೆಯವರ ಮುಂದೆಲ್ಲಾ practice ಮಾಡಿದ್ದೇ ಮಾಡಿದ್ದು. ರಾತ್ರಿ ಹಗಲೆಲ್ಲಾ ಈ ಕಾರ್ಯಕ್ರಮವೇ ಸಿಂಹ ಸ್ವಪ್ನವಾಗಿ  .. ಬೇತಾಳ ನಂತೆ .. ನಕ್ಷತ್ರಿಕ  ( ಯಾವುದಾದರು ಆಯ್ಕೆ ಮಾಡಿಕೊಳ್ಳಿ ಆದರೆ ಅದರ ಜೊತೆ ನನ್ನ ಪರಿಸ್ಥಿತಿ ಬಗ್ಗೆ ಕೂಡ ಸ್ವಲ್ಪ ಮರುಕ ಪಡ್ರೀ ... ) ನಂತೆ ಕಾಡಿತು. 

........................  ಈಗ Final Match. ಆ ದಿನ ಜನವರಿ ೨೩, ೨೦೦೬ ಮಹಾನ್ ದೇಶಭಕ್ತರಾದ ಸುಭಾಷ್ ಚಂದ್ರ ಬೋಸ್ ರವರ ಜನ್ಮ ದಿನ. ಸಾವಿರಾರು ಜನ ಕೂತಿದ್ದಾರೆ, ನಮ್ಮ ಗೋಷ್ಟಿಯ ಸಮಯ ; ನನ್ನ ಹೆಸರು ಹೇಳಲಿಕ್ಕೂ ನಾ ನಲ್ಲಿ ತಲುಪುವದಕ್ಕೂ ಸರಿಯಾಗಿ, ನಾ ಮುಂದೆ ಹೋಗುವಾಗ ಅಲ್ಲಿ ಅರ್ಧಕ್ಕೆ ಅರ್ಧ ಜನ ಪರಿಚಯದವರು. ಅವರೆಲ್ಲರ face reading ಮಾಡೋಕ್ಕೆ ನಾ ಹೋಗಲಿಲ್ಲಾ ಕಣ್ರೀ ಯಾಕಂದ್ರೆ ಆಗ ನನ್ನ ಹೃದಯಾನೇ ನನ್ನ ಬಾಯಿಗೆ ಬರೋ ಸ್ಥಿತಿಗೆ  ಬಂದಿತ್ತು.
ಎಲ್ಲರ  ಸರದಿಯೂ ಮುಗಿಯುತ್ತಾ ಜನ ಮಧ್ಯದಲ್ಲಿ ನಿದ್ರಾದೇವಿಯನ್ನು ಅಪ್ಪಿಕೊಂಡು ಬರುತ್ತಾ, ಗಲಾಟೆ ಮಾಡುತ್ತಾ ಕುಳಿತಾಗ  ನನ್ನ ಸರದಿ ಬಂದಿತು.  

"ದೇವ್ರೇ ಜನ ನಿದ್ದೇ ಮಾಡಿದ್ರೂ ಪರ್ವಾಗಿಲ್ಲಾ ಆದ್ರೆ ಗಲಾಟೆ ಮಾಡದೆ ಇರೋ ಹಾಗೆ ನೋಡ್ಕೊಳಪ್ಪಾ ಶಿವನೇ ssss " ಅಂತೆಲ್ಲಾ ಬೇಡಿ Podium ಮುಂದೆ ಒಂದು ಕ್ಷಣ ನಿಂತೆ.  ಅಪ್ಪ ಹೇಳಿದಂತೆ " ಇಂದು ನಿಮಗೆಲ್ಲಾ ತಿಳಿದಿರುವಂತೆ ಬೋಸ್ ರವರ ಜನ್ಮ ದಿನ. ಅವರ ಜನ್ಮ ದಿನಕ್ಕೆ ಈ ನನ್ನ ಚುಟುಕಗಳನ್ನು ಕಾಣಿಕೆಯಾಗಿ ಅರ್ಪಿಸುತ್ತಿದ್ದೇನೆ " ಎಂದು ಹೇಳಿ ಆರಂಭಿಸಿದ್ದೇ ತಡ "Oh.. My God ..... still I can't believe "  ಎಲ್ಲವೂ ಸ್ತಬ್ಧ. ಕೊನೆಗೆಂದು ತೆಗೆದಿಟ್ಟ  ನನ್ನ master piece ಚುಟುಕನ್ನು gesture, posture ಗಳನ್ನೆಲ್ಲಾ ಸಯ್ಯೋಜಿಸಿ ಸರಿಯಾದ expression ನೊಂದಿಗೆ ನಟಿಸುತ್ತಾ ಹೇಳಿ ಮುಗಿಸಿ ತಿರುಗುವಾಗ ನನ್ನ performance ಬಗ್ಗೆ ನಾ ಏನು ಹೇಳಬೇಕಾಗಿ ಉಳಿದಿರಲಿಲ್ಲಾ friends.. ಕಿವಿ ಮುಚ್ಚುವಂತೆ ಮಾಡಿದ ಆ ಚಪ್ಪಾಳೆಯ ಸದ್ದೇ ಎಲ್ಲವನ್ನೂ ಹೇಳಿ ಮುಗಿಸಿತ್ತು ; ನನ್ನ ತಂದೆ ಹಾಗೂ ನನ್ನ ಹೆಸರು ಹಾಕಿದ ಆ ನನ್ನ ಗುರುವಿನ ಮುಖದಲ್ಲಿ ಸಾರ್ಥಕತೆಯನ್ನು ಮೂಡಿಸಿತ್ತು.